ETV Bharat / state

ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋದ ಅಣ್ಣ ತಮ್ಮಂದಿರು.. ಪೊಲೀಸರಿಂದ ಪರಿಶೀಲನೆ - ನಾರಾಯಣಪುರ‌ ಜಲಾಶಯ

ಕೃಷ್ಣಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಅಣ್ಣ ತಮ್ಮ ಕೊಚ್ಚಿ ಹೋಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಕೃಷ್ಣಾ ನದಿ
ಕೃಷ್ಣಾ ನದಿ
author img

By

Published : Sep 20, 2022, 7:30 PM IST

Updated : Sep 20, 2022, 8:19 PM IST

ರಾಯಚೂರು: ಕೃಷ್ಣಾ ನದಿಯಲ್ಲಿ ಸಹೋದರರಿಬ್ಬರು ಕೊಚ್ಚಿ ಹೋಗಿರುವ ಮನಕಲಕುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದಲ್ಲಿ ನಡೆದಿದೆ. ಅಣ್ಣ ರಜಾಕ್ ಸಾಬ್ (35) ಹಾಗೂ ತಮ್ಮ ಮೌಲಾ ಸಾಬ್ (32) ಕೊಚ್ಚಿಹೋದವರು ಎಂದು ಗುರುತಿಸಲಾಗಿದೆ. ಕುಟುಂಬ ಸಮೇತ ಕೃಷ್ಣಾ ನದಿ ತೀರಕ್ಕೆ ರಜಾಕ್ ಹಾಗೂ ಮೌಲಾ ಸಾಬ್ ಕುಟುಂಬಸ್ಥರು ತೆರಳಿದ್ದರು.

ಕೃಷ್ಣಾ ನದಿಯಲ್ಲಿ ಕೊಚ್ಚಿಹೋದ ಅಣ್ಣ ತಮ್ಮಂದಿರಿಗಾಗಿ ಹುಡುಕಾಟ

ಈ ವೇಳೆ, ಕೊಚ್ಚಿ ಹೋಗುತ್ತಿದ್ದ ಸಾನಿಯಾ ಅನ್ನೋ ಬಾಲಕಿಯನ್ನು ಕೂಡಲೇ ಕುಟುಂಬಸ್ಥರು ರಕ್ಷಣೆ ಮಾಡಿದ್ದರು. ಆದರೆ, ಇದೇ ವೇಳೆಯಲ್ಲಿ ಕೈ ಕೈ ಹಿಡಿದುಕೊಂಡು ಸ್ನಾನ ಮಾಡುತ್ತಿದ್ದ ಅಣ್ಣ ತಮ್ಮ ಕೃಷ್ಣಾ ನದಿ ಪಾಲಾಗಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ದೇವದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಇಬ್ಬರಿಗಾಗಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಇನ್ನು ಕೃಷ್ಣ ಕೊಳದ ಮೇಲ್ಭಾಗದಲ್ಲಿ ಮಳೆಯಾಗುತ್ತಿದ್ದು, ನಾರಾಯಣಪುರ‌ ಜಲಾಶಯದಿಂದ ಲಕ್ಷಕ್ಕೂ ಅಧಿಕ ಕ್ಯೂಸೆಕ್​​ ನೀರನ್ನು ನದಿಗೆ ಹರಿದು ಬಿಡಲಾಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

ಓದಿ: ಬೆಂಗಳೂರಲ್ಲಿ ವಾಹನ ವಿಮೆ ಬದಲಾಯಿಸುವ ಬೃಹತ್ ಜಾಲ ಪತ್ತೆ: ಆರೋಪಿ ಅಂದರ್

Last Updated : Sep 20, 2022, 8:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.