ರಾಯಚೂರು: ಆ ಮನೆಯಲ್ಲಿ ಮಗುವಿನ ಹುಟ್ಟುಹಬ್ಬದ ಸಂಭ್ರಮ ಮನೆ ಮಾಡಿತ್ತು. ಆದರೆ, ವಿಧಿಯಾಟಕ್ಕೆ ಆ ಮಗು ಅಂದೇ ಬಲಿಯಾಗಿದ್ದಾನೆ. ಕಾಲು ಜಾರಿ ಬಿದ್ದು ತೀವ್ರ ಪೆಟ್ಟಾಗಿ ಬಾಲಕ ಮೃತ ಪಟ್ಟಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ನಡೆದಿದೆ.
ಮುದಿಯಪ್ಪ(9) ಮೃತಪಟ್ಟ ಬಾಲಕನಾಗಿದ್ದಾನೆ. ಸಂಜೆ ವೇಳೆ, ಮನೆಯಲ್ಲಿ ಜನ್ಮದಿನ ಆಚರಿಸಿಕೊಂಡು ಮನೆಯಿಂದ ಹೊರಗಡೆ ಓಡಿ ಹೋಗುತ್ತಿದ್ದ, ಈ ವೇಳೆ ಕಾಲು ಜಾರಿ ಬಿದ್ದು, ತೀವ್ರವಾಗಿ ಪೆಟ್ಟು ತಗುಲಿರುವುದೇ ಘಟನೆ ಕಾರಣವೆಂದು ಹೇಳಲಾಗುತ್ತಿದ್ದು, ಮಗನ ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಘಟನಾ ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪ್ರೀತಿಸಿದ ಹುಡುಗಿ ಫೋನ್ ರಿಸೀವ್ ಮಾಡಿಲ್ಲ ಎಂದು ಸ್ಕ್ರೂ ಡ್ರೈವರ್ನಿಂದ ಹಲ್ಲೆ ಮಾಡಿದ ಪ್ರಿಯಕರ!
ಇನ್ನು ಮುದಿಯಪ್ಪನನ್ನ ತಂದೆ ಪಂಪಾಪತಿ ಹೊಡೆದು ಕೊಲೆ ಮಾಡಿದ್ದಾನೆ ಎಂದು ಗ್ರಾಮದಲ್ಲಿ ಮಾತುಗಳು ಹರಿದಾಡಿವೆ. ಕುಡಿದ ಆಮಲಿನಲ್ಲಿದ್ದ ತಂದೆ ಪಂಪಾಪತಿ ಬಳಿ ಮಗ ಮುದಿಯಪ್ಪ ಹಣ ಕೇಳಿದ್ದಾಗ, ರಸ್ತೆಗೆ ಜಜ್ಜಿ ಮಗನನ್ನು ತಂದೆಯೇ ಕೊಲೆ ಮಾಡಿರಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಆದ್ರೆ ಬಾಲಕ ತಾಯಿ ನಿಗಮ್ಮ ಅರಳಳ್ಳಿ ಕಾಲು ಜಾರಿ ಬಿದ್ದು ಮಗ ಸಾವನ್ನಪ್ಪಿದ್ದಾನೆ. ಯಾರ ಮೇಲೂ ಸಂಶಯವಿಲ್ಲವೆಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.