ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ನಡೆಯುತಿದ್ದ ಬೈಕ್ ಕಳ್ಳತನ ಪ್ರಕರಣವನ್ನು ಬೇಧಿಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ನರಸಿಂಗಪ್ಪ ಎಂಬವನಿಂದ 55 ಸಾವಿರ ರೂ. ಬೆಲೆ ಬಾಳುವ ಎರಡು ಟಿವಿಎಸ್ ಎಕ್ಸೆಲ್ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಗ್ರಾಮೀಣ ವೃತ್ತದ ಸಿಪಿಐ ಅಂಬರಾಯ ಎಂ. ಹಾಗೂ ಶಕ್ತಿನಗರ ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ ಕೆ. ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ. ಪೊಲೀಸರ ಕಾರ್ಯವನ್ನು ಎಸ್ಪಿ ವೇದಮೂರ್ತಿ ಹಾಗೂ ಎಎಸ್ಪಿ ಶ್ರೀಹರಿ ಶ್ಲಾಘಿಸಿದ್ದಾರೆ.