ETV Bharat / state

ಬೈಕ್‌ಗಳ ನಡುವೆ ಡಿಕ್ಕಿ: ಓರ್ವ ಸಾವು, ಇನ್ನಿಬ್ಬರಿಗೆ ಗಾಯ - ವಾಹನ ಅಪಘಾತ

ಹೆಗ್ಗಸನಹಳ್ಳಿ ಗ್ರಾಮದ ಬಳಿ 2 ಬೈಕ್​​ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಪರಿಣಾಮ ಓರ್ವ ಬೈಕ್ ಸವಾರ‌ ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರಿಗೆ ಗಾಯಗಳಾಗಿವೆ.

Bike accident in raichur; one died
ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಮೃತ, ಇನ್ನಿಬ್ಬರಿಗೆ ಗಾಯ!
author img

By

Published : Sep 24, 2020, 10:05 AM IST

ರಾಯಚೂರು: ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ‌ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿರುವ ಘಟನೆ ರಾಯಚೂರು ತಾಲೂಕಿನಲ್ಲಿ ನಡೆದಿದೆ.

ಬೈಕ್​ ಅಪಘಾತ

ತಾಲೂಕಿನ ಹೆಗ್ಗಸನಹಳ್ಳಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ರವಿಕುಮಾರ(34) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಲ್ಲಿಕಾರ್ಜುನಗೆ ತೀವ್ರ ಸ್ವರೂಪವಾಗಿ ಗಾಯಗೊಂಡಿದ್ದು, ಮತ್ತೊಬ್ಬರಿಗೂ ಗಾಯಗಳಾಗಿವೆ. ತೀವ್ರವಾಗಿ ಗಾಯಗೊಂಡ ಮಲ್ಲಿಕಾರ್ಜುನನನ್ನು ಹೆಚ್ಚಿನ ಚಿಕಿತ್ಸೆ‌ಗೆ ಬಳ್ಳಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮತ್ತೋರ್ವ ಗಾಯಾಳುವಿಗೆ ರಿಮ್ಸ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಘಟನೆಯ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.