ETV Bharat / state

ಪಿಎಫ್​ಐ, ಎಸ್​ಡಿಪಿಐ, ಭಜರಂಗದಳ ಬ್ಯಾನ್ ಮಾಡಿ: ಮೊಹಮ್ಮದ್​ ನಲಪಾಡ್ - Bajarang Dal

ಪೇ ಸಿಎಂ ಪೋಸ್ಟರ್ ಹಾಕಿದ್ದಕ್ಕೆ ನಮ್ಮವರನ್ನು ಬಂಧಿಸುತ್ತಾರೆ. ರಾತ್ರಿ ಒಂದು ಗಂಟೆಗೆ ನಮ್ಮ ಕಚೇರಿ ಮೇಲೆ ದಾಳಿ ‌ಮಾಡುತ್ತಾರೆ. ಇದಕ್ಕೆಲ್ಲಾ ನಾವು ಹೆದರಲ್ಲ. ಪಿಎಫ್​ಐ, ಎಸ್​ಡಿಪಿಐ, ಭಜರಂಗದಳ ಬ್ಯಾನ್ ಮಾಡಿ, ನಾವೂ ಇದನ್ನೇ ಡಬಲ್​ ಇಂಜಿನ್​ ಸರ್ಕಾರಕ್ಕೆ ಹೇಳುತ್ತಿದ್ದೇವೆ ಎಂದು ಮೊಹಮ್ಮದ್​ ನಲಪಾಡ್​ ತಿಳಿಸಿದರು.

Mohammad Nalapad
ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್
author img

By

Published : Sep 25, 2022, 5:49 PM IST

ರಾಯಚೂರು: ಪೇ ಸಿಎಂ ಅಭಿಯಾನ ನಡೆಸುವಾಗ ಕೆಲವರನ್ನು ಬಂಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಪೇ ಸಿಎಂ ಪೋಸ್ಟರ್ ಹಾಕಿದಕ್ಕೆ ನಮ್ಮವರನ್ನು ಬಂಧಿಸಲಾಗಿದೆ. ರಾತ್ರಿ ಒಂದು ಗಂಟೆಗೆ ನಮ್ಮ ಕಚೇರಿ ಮೇಲೆ ಪೊಲೀಸರು ದಾಳಿ ‌ಮಾಡುತ್ತಾರೆ. ಇದಕ್ಕೆಲ್ಲಾ ನಾವು ಹೆದರಲ್ಲ ಎಂದರು.

ಪರ್ಸೆಂಟೇಜ್ ಬಗ್ಗೆ ನಾವು ಹೇಳಿರುವುದು ಅಲ್ಲ, ಸರ್ಕಾರದ ಪರ್ಸೆಂಟೇಜ್​ಗೆ ಬಗ್ಗೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಹೇಳಿದ್ದರು. ರಾಜ್ಯದಲ್ಲಿ ಪಿಎಸ್​ಐ ಸ್ಕ್ಯಾಮ್ ಮಾಡಿದ್ದು ನಾವಾ?, ಭ್ರಷ್ಟಾಚಾರಕ್ಕೆ ಸಮಾಜ ಇದೆಯಾ?, ಜೀವಕ್ಕೆ ಬೆಲೆ ಇಲ್ವಾ?, ಮೃತ ಗುತ್ತಿಗೆದಾರ ಸಂತೋಷ ಯಾವ ಸಮುದಾಯದವರು?. ಅವರು ಲಿಂಗಾಯತ ಸಮುದಾಯದವರೇ, ಯಾಕೆ ನಮ್ಮನ್ನು ಜಾತಿ, ಧರ್ಮದ ಆಧಾರದ ಮೇಲೆ ಒಡೆಯುತ್ತೀರಾ, ಲಿಂಗಾಯತ ಸ್ವಾಮೀಜಿಗಳೇ ಪರ್ಸಂಟೇಜ್ ಬಗ್ಗೆ ಹೇಳಿರು ಎಂದು ಸರ್ಕಾರದ ವಿರುದ್ಧ ನಲಪಾಡ್​ ಗುಡುಗಿದರು.

ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್

ಭಯೋತ್ಪಾದನೆಗೆ ನಿರುದ್ಯೋಗ ಕಾರಣ ಎಂಬುದರ ಕುರಿತು ಪ್ರತಿಕ್ರಿಯಿಸಿದ ಅವರು, ಭಯೋತ್ಪಾದನೆಗೆ ನಿರುದ್ಯೋಗ ಕಾರಣ ಅಂತ ನಾನು ಹೇಳಿಲ್ಲ. ಕೆಲ ಮಾಧ್ಯಮದಲ್ಲಿ ಹೇಳಿಕೆ ತಿರುಚಲಾಗಿದೆ. ನಾನು ಹೇಳಿದ್ದರ ಉದ್ದೇಶ ಬೇರೆಯಿತ್ತು. ಕೆಲಸ ಇಲ್ದಿರೋದಕ್ಕೆ ಯುವಕರು ದಾರಿ ತಪ್ಪುತ್ತಿದ್ದಾರೆ. ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ಕೊಡಿ, ಕ್ರಮ ಕೈಗೊಳ್ಳಿ. ಪಿಎಫ್​ಐ, ಎಸ್​ಡಿಪಿಐ, ಭಜರಂಗದಳ ಸಂಘಟನೆಗಳನ್ನು ಬ್ಯಾನ್ ಮಾಡಿ, ನಾವು ಇದನ್ನೇ ಡಬಲ್​ ಇಂಜಿನ್​ ಸರ್ಕಾರಕ್ಕೆ ಹೇಳುತ್ತಿರೋದು ಎಂದು ತಿಳಿಸಿದರು.

ಇದನ್ನೂ ಓದಿ: ಐಸಿಸ್ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಗಲ್ಲು ಶಿಕ್ಷೆ ಕೊಡಿ.. ಮಹಮದ್ ಹ್ಯಾರಿಸ್ ನಲಪಾಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.