ರಾಯಚೂರು: ರಿಮ್ಸ್ಗೆ ನೂತನವಾಗಿ ಆಯ್ಕೆಯಾದ ನಾಮ ನಿರ್ದೇಶಕ ಸದಸ್ಯರು ಅಧಿಕಾರ ಸ್ವೀಕರಿಸಿದ್ರು.
ನಗರದ ಹೊರವಲಯದಲ್ಲಿ ಇರುವ ರಿಮ್ಸ್ ಕಾಲೇಜಿನ ಆಡಳಿತ ಕಚೇರಿಯಲ್ಲಿ, ನೂತನವಾಗಿ ಆಯ್ಕೆಗೊಂಡ ಡಾ.ಹೆಚ್.ಎ.ನಾಡಗೌಡ ಅರಕೇರಾ, ರಾಜೇಂದ್ರ ಕುಮಾರ, ಲೀಲಾ ಮಲ್ಲಿಕಾರ್ಜುನ ನಾಮ ನಿರ್ದೇಶಕರಾಗಿ ಅಧಿಕಾರಿ ಸ್ವೀಕರಿಸಿದ್ರು.
ಅಧಿಕಾರ ಸ್ವೀಕರಿಸಿದ ಬಳಿಕ ಆಡಳಿತ ಮಂಡಳಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು.ಈ ವೇಳೆ ಶಾಸಕರಾದ ಡಾ.ಶಿವರಾಜ್ ಪಾಟೀಲ್, ಕೆ.ಶಿವನಗೌಡ ನಾಯಕ, ರಿಮ್ಸ್ ಡೀನ್ ಬಸವರಾಜ ಪೀರಾಪುರ ಸೇರಿದಂತೆ ಅಧಿಕಾರಿಗಳು, ವೈದ್ಯರು ಹಾಗೂ ಇತರೆ ಮುಖಂಡರು ಇದ್ದರು.