ETV Bharat / state

ಜಾಲಹಳ್ಳಿ ಹತ್ಯೆ ಪ್ರಕರಣ: ಆರು ಆರೋಪಿಗಳ ಬಂಧನ - ಜಾಲಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿ

ಮಾರ್ಚ್ 11ರಂದು ರಸ್ತೆ ಬದಿಯಲ್ಲಿ ಶವ ಪತ್ತೆಯಾಗಿದ್ದ ಪ್ರಕರಣದ ಆರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

murder case
ಜಾಲಹಳ್ಳಿಯಲ್ಲಿ ನಡೆದ ಹತ್ಯೆ ಪ್ರಕರಣದ ಆರು ಆರೋಪಿಗಳ ಬಂಧನ
author img

By

Published : Mar 19, 2020, 11:12 PM IST

ರಾಯಚೂರು: ಜಿಲ್ಲೆಯ ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಹತ್ಯೆ ಪ್ರಕರಣದ ಆರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಲಹಳ್ಳಿಯಲ್ಲಿ ನಡೆದ ಹತ್ಯೆ ಪ್ರಕರಣದ ಆರು ಆರೋಪಿಗಳ ಬಂಧನ

ಕಾಟಮಳ್ಳಿ ಗ್ರಾಮದ ಮೆಹಬೂಬ್ ಸಾಬ್, ಗಲಗ ಗ್ರಾಮದ ನಿಂಗಯ್ಯ, ಸುಭಾಶ, ಆಂಜನೇಯ, ಚನ್ನಬಸವ ಬಂಧಿತ ಆರೋಪಿಗಳು. ದೇವದುರ್ಗ ತಾಲೂಕಿನ ‌ಗಲಗ ಗ್ರಾಮದ ಬಳಿಯ ಕಳೆದ ಮಾರ್ಚ್ 11ರಂದು ರಸ್ತೆ ಬದಿಯಲ್ಲಿ ಶವ ಪತ್ತೆಯಾಗಿತ್ತು. ಇನ್ನು ಶವವನ್ನು ಗಮನಿಸಿ ಅನುಮಾನಗೊಂಡ ಪೊಲೀಸರು ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದರು.

ಅಕ್ರಮ ಮರಳು ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳಿಗೆ ಶೇಖರಪ್ಪ ಅಡ್ಡಿಪಡಿಸುತ್ತಿದ್ದರು. ಇದರಿಂದ ಮುನಿಸಿಟ್ಟುಕೊಂಡ ಈ ಆರು ಜನ ಮರಳಿನ ಟ್ರ್ಯಾಕ್ಟರ್ ಆತನ ಮೇಲೆ ಹಾಯಿಸಿ, ಅದೊಂದು ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದರು. ಆದ್ರೆ ತನಿಖೆ ವೇಳೆ ಕೊಲೆ ಮಾಡಿರುವುದು ತಿಳಿದು ಬಂದಿದ್ದು, ಆರೋಪಿಗಳನ್ನ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.