ರಾಯಚೂರು: ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರವೆಂದೇ ಬಿಂಬಿತವಾಗಿರುವ ಅರಕೇರಾ ಗ್ರಾಮವನ್ನ ಇತ್ತೀಚೆಗೆ ನಡೆದ ಕ್ಯಾಬಿನೆಟ್ ನಲ್ಲಿ ನೂತನ ತಾಲೂಕಾನ್ನಾಗಿ ಘೋಷಿಸಲಾಯ್ತು. ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ ಘೋಷಣೆಯಾದ ಎರಡು ತಾಲೂಕಿಗೆ ಸಮರ್ಪಕ ಸೌಲಭ್ಯ, ಆಡಳಿತ ವ್ಯವಸ್ಥೆಯನ್ನ ಸರ್ಕಾರ ಕಲ್ಪಿಸಿಲ್ಲ. ಇದರ ಮಧ್ಯೆ ಈಗ ಜಿಲ್ಲೆಗೆ ಮತ್ತೊಂದು ತಾಲೂಕು ಕೇಂದ್ರವನ್ನ ಘೋಷಣೆ ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಮಸ್ಕಿ, ಸಿರವಾರ ತಾಲೂಕುಗಳನ್ನು ಘೋಷಣೆ ಮಾಡುವ ಮೂಲಕ ಕಚೇರಿಗಳನ್ನ ಸಹ ಉದ್ಘಾಟಿಸಿದ್ರು. ತಾಲೂಕಿಗೆ ಒದಗಿಸಬೇಕಾದ ತಹಶೀಲ್ದಾರ್ ಕಚೇರಿ, ವಿವಿಧ ಇಲಾಖೆಗಳು, ಅಧಿಕಾರಿಗಳು, ಸಿಬ್ಬಂದಿಯನ್ನು ಅವ್ಯಶಕತೆ ಅನುಗುಣವಾಗಿ ನಿಯೋಜನೆ ಮಾಡಬೇಕು. ಆದ್ರೆ ಇದುವರೆಗೆ ಸರ್ಕಾರ ಆ ಕಾರ್ಯ ಮಾಡಿಲ್ಲ. ಇದರ ಮಧ್ಯೆ ಇದೀಗ ಅರಕೇರಾ ಗ್ರಾಮವನ್ನ ನೂತನ ತಾಲೂಕನ್ನಾಗಿ ಸರ್ಕಾರ ಘೋಷಿಸಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮ ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ದಿವಂಗತ ಮಾಜಿ ಸಂಸದ ಎ.ವೆಂಕಟೇಶ ನಾಯಕ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ರು. ಈಗಿನ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ರು. ಇದಾದ ಬಳಿಕ ಸಚಿವರಾಗಿದ್ರು. ಹೀಗಾಗಿ ಜಿಲ್ಲೆಯ ಮಟ್ಟಿಗೆ ರಾಜಕೀಯ ವಲಯದಲ್ಲಿ ಅರಕೇರಾ ಗ್ರಾಮ ರಾಜಕೀಯ ಶಕ್ತಿ ಕೇಂದ್ರವಾಗಿ ಬಿಂಬಿತವಾಗಿತ್ತು. ಹಾಲಿ ಶಾಸಕರಾಗಿರುವ ಕೆ.ಶಿವನಗೌಡ ನಾಯಕ ಅರಕೇರಾ ಗ್ರಾಮವನ್ನ ತಾಲೂಕಾಗಿ ಮಾಡುವುದಾಗಿ ಭರವಸೆ ನೀಡಿದ್ರು. ಈಗ ಕ್ಯಾಬಿನೇಟ್ ಅನುಮೋದನೆ ದೊರೆತಿದ್ದು, ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದ್ದಾರೆ.
ಅರಕೇರಾ ಗ್ರಾಮದ ವ್ಯಾಪ್ತಿಯಲ್ಲಿ 20 ಗ್ರಾ.ಪಂ. ಸದಸ್ಯರಿದ್ದು, ಜಿ.ಪಂ., ತಾ.ಪಂ., ಕ್ಷೇತ್ರಗಳು ಅರಕೇರಾ ಹೋಬಳಿ ವ್ಯಾಕ್ತಿಗೆ 10 ಪಂಚಾಯಿತಿ ಒಳಗೊಂಡಿದೆ. ಅರಕೇರಾ ಗ್ರಾಮವನ್ನ ನೂತನ ತಾಲೂಕಾಗಿ ಘೋಷಣೆ ಮಾಡಿರುವುದಕ್ಕೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿವೆ. ಯಾಕೆಂದ್ರೆ ದೇವದುರ್ಗ ತಾಲೂಕು ಮಟ್ಟಿಗೆ ಗಬ್ಬೂರು, ಜಾಲಹಳ್ಳಿ ಹೊಬಳಿ ದೊಡ್ಡ ಪ್ರದೇಶಗಳಾಗಿದ್ದು, ಈ ಹಿಂದೆ ಗಬ್ಬೂರನ್ನು ತಾಲೂಕು ಪ್ರದೇಶವೆಂದು ಘೋಷಣೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿ ಹೋರಾಟ ನಡೆಸಿದ್ರು. ಆದ್ರೆ ಶಾಸಕ ಕೆ.ಶಿವನಗೌಡ ನಾಯಕ ತಮ್ಮ ಸ್ವಕ್ಷೇತ್ರವನ್ನ ತಾಲೂಕು ಕೇಂದ್ರ ಮಾಡಬೇಕು ಎನ್ನುವ ಆಸೆಯಂತೆ ತಾಲೂಕನ್ನಾಗಿ ಘೋಷಣೆ ಮಾಡಿದ್ದಾರೆ
ಆದ್ರೆ, ಜಿಲ್ಲೆಯಲ್ಲಿ ಅರಕೇರಾ ಗ್ರಾಮ ನೂತನ ತಾಲೂಕನ್ನಾಗಿ ಕ್ಯಾಬಿನೇಟ್ ಅನುಮೋದನೆ ದೊರೆಯುವ ಮುನ್ನ ಈ ಮೊದಲು ನೂತನ ತಾಲೂಕುಗಳಾಗಿ ಆಸ್ತಿತ್ವಕ್ಕೆ ಬಂದ ಸಿರವಾರ, ಮಸ್ಕಿ ತಾಲೂಕಿಗೆ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ತಾಲೂಕಿಗೆ ಇರಬೇಕಾದ ಸವಲತ್ತು ದೊರಕಿಸಿಲ್ಲ. ಇದೀಗ ಅರಕೇರಾ ಗ್ರಾಮವನ್ನ ತಾಲೂಕೆಂದು ಘೋಷಿಸಿರುವ ಹಿನ್ನೆಲೆ ಇದಕ್ಕೂ ಮುನ್ನ ಘೋಷಣೆಯಾದ ತಾಲೂಕು ಕೇಂದ್ರಕ್ಕೆ ಅವಶ್ಯಕ ಸಂಪನ್ಮೂಲವನ್ನ ಸರ್ಕಾರ ಒದಗಿಸಬೇಕು ಎನ್ನುವುದು ಜಿಲ್ಲೆಯ ಜನತೆ ಒತ್ತಾಸೆಯಾಗಿದೆ.