ETV Bharat / state

ಮಂತ್ರಾಲಯ ಗುರು ರಾಯರ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ - ಆರಾಧನಾ ಮಹೋತ್ಸವ

ಇಂದಿನಿಂದ ಏಳು ದಿನಗಳ ಕಾಲ ಆರಾಧನಾ ಮಹೋತ್ಸವವಿದೆ. ಆಗಸ್ಟ್​ 23ರಂದು ಪೂರ್ವಾರಾಧನೆ, 24 ಮಧ್ಯಾರಾಧನೆ, 25ರಂದು ಉತ್ತಾರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ..

aradhana-mahotsava-in-mantralaya
ಮಂತ್ರಾಲಯ ಗುರು ರಾಯರ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ
author img

By

Published : Aug 21, 2021, 9:42 PM IST

ರಾಯಚೂರು : ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಗುರು ಶ್ರೀರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವಕ್ಕೆ ಚಾಲನೆ ದೊರಕಿದೆ. ಶ್ರೀಮಠದ‌ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಧ್ವಜಾರೋಹಣ ನೆರವೇರಿಸಿ, ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

aradhana-mahotsava-in-mantralaya
ಶ್ರೀ ಸುಬುಧೇಂದ್ರ ತೀರ್ಥರಿಂದ ಧ್ವಜಾರೋಹಣ

ಧ್ವಜಾರೋಹಣಕ್ಕೂ ಮುನ್ನ ಶ್ರೀರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನ ದರ್ಶನ ಪಡೆದ ಬಳಿಕ ಗೋವು, ಅಶ್ವಪೂಜೆ, ಗಜಪೂಜೆ ಹಾಗೂ ಧಾರ್ಮಿಕ‌ ವಿಧಿ-ವಿಧಾನಗಳನ್ನ ನೆರವೇರಿಸಿದರು. ಭಕ್ತರ ಮೇಲೆ ಪುಷ್ಪ ಹಾಕುವ ಮೂಲಕ‌ ಆಶೀರ್ವದಿಸಿದರು.

ಆರಾಧನಾ ಮಹೋತ್ಸವ

ಮಂತ್ರಾಲಯ ಝಗಮಗ : ಆರಾಧನಾ ಮಹೋತ್ಸವ ಹಿನ್ನೆಲೆ ಶ್ರೀಮಠವು ಹೂವಿನ ಅಲಂಕಾರ, ಆಕರ್ಷಕ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಕೋವಿಡ್ ಹಿನ್ನೆಲೆ ಅಗತ್ಯ ಕ್ರಮ ಕೈಗೊಂಡಿದ್ದು, ಭಕ್ತರು ನಿಯಮ ಪಾಲನೆ ಮಾಡುವಂತೆ ಸೂಚಿಸಲಾಗಿದೆ.

ಇಂದಿನಿಂದ ಏಳು ದಿನಗಳ ಕಾಲ ಆರಾಧನಾ ಮಹೋತ್ಸವವಿದೆ. ಆಗಸ್ಟ್​ 23ರಂದು ಪೂರ್ವಾರಾಧನೆ, 24 ಮಧ್ಯಾರಾಧನೆ, 25ರಂದು ಉತ್ತಾರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಮಹೋತ್ಸವಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದಾರೆ.

ಇದನ್ನೂ ಓದಿ: ರಕ್ಷಾ ಬಂಧನ: ಇಲ್ಲಿ ಒಂದು ರಾಖಿಯ ಬೆಲೆ 2 ಲಕ್ಷ ರೂಪಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.