ETV Bharat / state

ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದಂತೆ ಹೆಚ್ಚಳವಾಯ್ತು ಕೋವಿಡ್​ ತ್ಯಾಜ್ಯ... ನಿರ್ವಹಣೆ ತಲೆನೋವು!

ಕೊರೊನಾ ಸೋಂಕಿತರ ಚಿಕಿತ್ಸೆಯ ಬಳಿಕ ಬಹುದೊಡ್ಡ ವೈದ್ಯಕೀಯ ತ್ಯಾಜ್ಯವೇ ಸೃಷ್ಟಿಯಾಗಲಿದೆ. ಇದು ಹಲವೆಡೆ ಜಿಲ್ಲಾಡಳಿತಕ್ಕೆ ತಲೆನೋವು ತಂದಿಟ್ಟರೆ. ಇಂತಹ ತ್ಯಾಜ್ಯಗಳ ನಿರ್ವಹಣೆ ಸಹ ಕೊರೊನಾ ತಡೆಯುವಲ್ಲಿ ಪ್ರಮುಖವೆನಿಸಿವೆ.

an-increase-covid-waste-in-terms-of-increase-in-covid-cases
ಸೋಂಕಿತರ ಸಂಖ್ಯೆ ಏರಿಕೆಯಾದಂತೆ ಹೆಚ್ಚಳವಾಗಿದೆ ಕೋವಿಡ್​ ತ್ಯಾಜ್ಯ
author img

By

Published : Sep 5, 2020, 4:20 PM IST

Updated : Sep 5, 2020, 4:57 PM IST

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಸೋಂಕಿತರನ್ನು ರೋಗ ಲಕ್ಷಣದ ಆಧಾರದ ಮೇಲೆ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್, ಕ್ವಾರಂಟೈನ್ ಮಾಡುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಈ ನಡುವೆ ಸೋಂಕಿತರು ಹೋಂ ಐಸೋಲೇಷನ್ ಆಗುವ ಮೂಲಕ ಚಿಕಿತ್ಸೆ ಪಡೆಯಬಹುದಾಗಿದೆ.

ಸೋಂಕು ಹರಡುವಿಕೆ ತಡೆಗಟ್ಟಲು ಹಲವು ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದ್ದು, ಸೋಂಕಿತರ ಚಿಕಿತ್ಸೆ ಬಳಿಕ ತ್ಯಾಜ್ಯ ವಿಲೇವಾರಿ ಬಹಳ ಪ್ರಮುಖವಾಗಿದೆ. ಜಿಲ್ಲೆಯಲ್ಲಿ ಆರಂಭದ ದಿನಗಳಲ್ಲಿ ಕಡಿಮೆ ಸಂಖ್ಯೆಯಲ್ಲಿ ರೋಗಿಗಳಿದ್ದ ಕಾರಣ ಕಡಿಮೆ ಪ್ರಮಾಣದಲ್ಲಿ ಕಸ ಸಂಗ್ರಹವಾಗುತ್ತಿತ್ತು. ಆದ್ರೆ ಇದೀಗ ಸೋಂಕಿತರ ಸಂಖ್ಯೆ ಏರಿಕೆಯಿಂದ ಕಸದ ಸಂಗ್ರಹಣೆ ಹೆಚ್ಚಳವಾಗಿ ನಿತ್ಯ ಸರಿ ಸುಮಾರು 50 ಕೆ.ಜಿಗೂ ಮೇಲ್ಪಟ್ಟು ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಅದನ್ನು ರಿಮ್ಯಾಕ್ಟ್(ರಾಯಚೂರು ಮೆಡಿಕಲ್ ಕಾಮನ್ ಟ್ರೀಟ್​​ಮೆಂಟ್ ಪ್ಲಾಂಟ್) ನಿರ್ವಹಣೆ ಮಾಡುತ್ತಿದೆ.

ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದಂತೆ ಹೆಚ್ಚಳವಾಯ್ತು ಕೋವಿಡ್​ ತ್ಯಾಜ್ಯ

ಸೋಂಕಿತರಿರುವ ಕೋವಿಡ್ ಆಸ್ಪತ್ರೆ, ವಾರ್ಡ್, ಕೇರ್ ಸೆಂಟರ್ ಹಾಗೂ ಕ್ವಾರಂಟೈನ್ ಸೆಂಟರ್​​ಗಳಲ್ಲಿ ಕಸವನ್ನು ಎರಡು ವಿಧಾನದಲ್ಲಿ ಸಂಗ್ರಹ ಮಾಡಲಾಗುತ್ತದೆ. ಪ್ರಥಮವಾಗಿ ಆಸ್ಪತ್ರೆಯಲ್ಲಿ ಸಂಗ್ರಹವಾಗುವ ಜೈವಿಕ ತ್ಯಾಜ್ಯ ಎಂದಿನಂತೆ ವಿಲೇವಾರಿ ಮಾಡಲಾಗುತ್ತಿದ್ದರೆ, ಕೋವಿಡ್ ಆಸ್ಪತ್ರೆಯ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ನಿರ್ವಹಣೆ ಮಾಡಲಾಗುತ್ತಿದೆ.

ನಗರ ಪ್ರದೇಶದಲ್ಲಿ ನಿತ್ಯ ತ್ಯಾಜ್ಯವನ್ನ ಸಂಗ್ರಹಿಸಿದರೆ, ನಗರ ಪ್ರದೇಶ ಹೊರತುಪಡಿಸಿ ತಾಲೂಕು, ಗ್ರಾಮಾಂತರ ಪ್ರದೇಶಗಳಲ್ಲಿ ಒಂದು ದಿನ ಬಿಟ್ಟು ಸಂಗ್ರಹಿಸಿ ನಿರ್ವಹಣೆ ಮಾಡಲಾಗುತ್ತದೆ. ಆದರೆ ಹೋಂ ಐಸೋಲೇಷನ್​ನಲ್ಲಿರುವ ತ್ಯಾಜ್ಯ ವಿಲೇವಾರಿಯನ್ನು ನಗರಸಭೆಗೆ ನಿರ್ವಹಣೆ ಮಾಡುವ ಕಸದಲ್ಲಿ ಸಂಗ್ರಹವಾಗುತ್ತದೆ.

ಹೋಂ ಐಸೋಲೇಷನ್​ನಲ್ಲಿ ಸೋಂಕಿನ ಲಕ್ಷಣಗಳಿಲ್ಲದ ರೋಗಿಗಳು ಇರುವುದರಿಂದ ತ್ಯಾಜ್ಯ ಸಂಗ್ರಹವಾಗುವುದಿಲ್ಲ. ಕೇವಲ ಮಾತ್ರೆಗಳನ್ನು ಮಾತ್ರ ಚಿಕಿತ್ಸೆಗಾಗಿ ಬಳಸುತ್ತಾರೆ. ಅವರು ನಗರಸಭೆಗೆ ಕಸ ನೀಡುತ್ತಾರೆ. ಇದರಿಂದ ಸೋಂಕು ಹರಡುವಿಕೆ ಸಾಧ್ಯತೆ ಕಡಿಮೆ. ಇನ್ನೂ ಜಿಲ್ಲೆಯಲ್ಲಿ 2020 ಮಾ.18ರಿಂದ ಆ.21ರವರೆಗೆ ಕೋವಿಡ್ ಆಸ್ಪತ್ರೆಯಿಂದ 3,063 ಕೆ.ಜಿಯಷ್ಟು ತ್ಯಾಜ್ಯ ವಿಲೇವಾರಿ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ. ಅನಿರುದ್ಧ್​ ಕುಲಕರ್ಣಿ ತಿಳಿಸಿದ್ದಾರೆ.

Last Updated : Sep 5, 2020, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.