ರಾಯಚೂರು : ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ನಟಿ ಹರ್ಷಿಕಾ ಪೂಣಚ್ಚ ಒತ್ತಾಯಿಸಿದ್ದಾರೆ.
ಅಭಿಯಾನಕ್ಕೆ ಬೆಂಬಲಿಸಿ ಮಾತನಾಡಿದ ಹರ್ಷಿಕಾ, ಪ್ರಕರಣದ ಕುರಿತಂತೆ ಓರ್ವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ಕ್ರೂರ ಕೃತ್ಯವೆಸಗಲು ಒಬ್ಬ ಆರೋಪಿಯಿಂದ ಸಾಧ್ಯವಿಲ್ಲ. ಇದರಲ್ಲಿ ಇನ್ನೂ ಕೆಲವರು ಶಾಮೀಲಾಗಿದ್ದು, ಎಲ್ಲಾ ಆರೋಪಿಗಳನ್ನ ಬಂಧಿಸಬೇಕೆಂದು ಒತ್ತಾಯಿಸಿದ್ರು.
ಅಲ್ಲದೇ ಅಭಿಯಾನದಲ್ಲಿ ಕೊನೆಯವರಗೆ ಭಾಗಿಯಾಗಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಸಿಗುವರೆಗೂ ಹೋರಾಟ ನಡೆಸುವುದಾಗಿ ಹೇಳಿದರು. ಸಂತ್ರಸ್ತೆ ಪೋಷಕರಿಗೆ ಸಾಂತ್ವನ ಹೇಳುವ ಮೂಲಕ ದುಃಖದಲ್ಲಿ ಭಾಗಿಯಾಗುವುದಾಗಿ ಹೇಳಿದ್ರು. ದೇಶದಲ್ಲಿಯೇ ರಾಯಚೂರು ವಿದ್ಯಾರ್ಥಿನಿ ಸಾವು ಮರುಕಳುಹಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ರು.