ETV Bharat / state

ರಾಯಚೂರು: ಲಾರಿ ಹರಿದು ಬಳೆ ವ್ಯಾಪಾರಿ ಸಾವು - ಈಟಿವಿ ಭಾರತ ಕನ್ನಡ

ಮದುವೆ ಸಮಾರಂಭಕ್ಕೆ ಬಳೆ ಹಾಕಲು ಹೊರಟಿದ್ದ ಮಹಿಳಾ ಬಳೆ ವ್ಯಾಪಾರಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.

kn_rcr_
ಲಾರಿ ಹರಿದು ಬಳೆ ವ್ಯಾಪಾರಿ ಸಾವು
author img

By

Published : Nov 25, 2022, 8:42 PM IST

ರಾಯಚೂರು: ಮದುವೆ ಸಮಾರಂಭದಲ್ಲಿ ಬಳೆ ಹಾಕಲು ತೆರಳುತ್ತಿದ್ದ ಮಹಿಳೆ ಮೇಲೆ ಲಾರಿ ಹರಿದು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ.

ಚಂದ್ರಬಂಡಾ ಗ್ರಾಮದ ಬೀಬೀ ಮಹೆಬೂಬ್(27) ಮೃತ ಮಹಿಳೆ. ಬಳೆ ವ್ಯಾಪಾರ ಮಾಡುತ್ತಿದ್ದ ಇವರು ಇಂದು ಬೆಳಗ್ಗೆ 9.30ರ ಸುಮಾರಿಗೆ ಯರಮರಸ್​ ಕ್ಯಾಂಪ್​ನಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದಲ್ಲಿ ಬಳೆ ಹಾಕಲು ಎಂದು ತಮ್ಮ ವಾಹನದಲ್ಲಿ ತೆರಳುತ್ತಿದ್ದರು. ಇದೇ ವೇಳೆ ಹೈದರಾಬಾದ್​ ನಿಂದ ಬರುತ್ತಿದ್ದ ಲಾರಿಯೊಂದು ಮಹಿಳೆಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಬೀಬಿ ಮಹೆಬೂಬ್​ ಅವರು ಕೆಳ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಲಾರಿ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಲಾರಿ ಮಧ್ಯಪ್ರದೇಶಕ್ಕೆ ಸೇರಿದ್ದಾಗಿದ್ದು, ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು, ಚಾಲಕ ಜನತ್​ ಸಿಂಗ್​ ಅನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ರಾಯಚೂರು ಸಂಚಾರಿ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೊಲೆರೊ ವಾಹನಕ್ಕೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ: ಓರ್ವ ಸಾವು, 7 ಮಂದಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.