ರಾಯಚೂರು: ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಚುನಾವಣೆಗೆ 6,054 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮೊದಲ ಹಂತದಲ್ಲಿ 92 ಗ್ರಾಮ ಪಂಚಾಯತಿಗಳ ಒಟ್ಟು 1,816 ಸ್ಥಾನಗಳಿಗೆ 6,054 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದರಲ್ಲಿ ಹೈಕೋರ್ಟ್ ತಡೆಯಾಜ್ಞೆ ನೀಡಿರುವ ರಾಯಚೂರು ತಾಲೂಕಿನ ಅತ್ಕೂರು ಗ್ರಾಮ ಪಂಚಾಯತಿಗಳ 23 ಸ್ಥಾನಗಳಿಗೆ 56 ನಾಮಪತ್ರಗಳು ಸಲ್ಲಿಕೆಯಾಗಿವೆ.
ಮೊದಲ ಹಂತದಲ್ಲಿ ರಾಯಚೂರು, ಮಾನ್ವಿ, ಸಿರವಾರ ಮತ್ತು ದೇವದುರ್ಗ ತಾಲೂಕಿನ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯಕ್ಕೆ ಮೀಸಲಿರುವ ಸ್ಥಾನಗಳಿಗೆ 1,530, ಪರಿಶಿಷ್ಟ ಪಂಗಡ(ಎಸ್ಟಿ) ಸಮುದಾಯಕ್ಕೆ ಮೀಸಲಿರುವ ಸ್ಥಾನಗಳಿಗೆ 1,535, ಬಿಸಿಎಗೆ ಮೀಸಲಿರುವ ಸ್ಥಾನಗಳಿಗೆ 296, ಬಿಸಿಬಿಗೆ ಮೀಸಲಿರುವ ಸ್ಥಾನಗಳಿಗೆ 38 ಮತ್ತು ಸಾಮಾನ್ಯ ವರ್ಗದ ಸ್ಥಾನಗಗಳಿಗೆ 2,655 ಜನರು ನಾಮಪತ್ರ ಸಲ್ಲಿಸಿದ್ದಾರೆ.
ಓದಿ: ’’ಬದುಕಿದ್ದಾಗ ಅವರ ಬಗ್ಗೆ ಮಾತನಾಡುವುದು ಗಂಡಸ್ತನ’’: ತೆಲುಗು ನಟನಿಗೆ ಕಿಚ್ಚ ವಾರ್ನ್
ರಾಯಚೂರು ತಾಲೂಕಿನ 33 ಗ್ರಾಮ ಪಂಚಾಯತಿಗಳ 654 ಸ್ಥಾನಗಳಿಗೆ 2,340 ಅಭ್ಯರ್ಥಿಗಳು, ಮಾನ್ವಿ ತಾಲೂಕಿನ 17 ಗ್ರಾಮ ಪಂಚಾಯತಿಗಳ 341 ಸ್ಥಾನಗಳಿಗೆ 1,165 ಅಭ್ಯರ್ಥಿಗಳು, ಸಿರವಾರ ತಾಲೂಕಿನ 14 ಗ್ರಾಮ ಪಂಚಾಯತಿಗಳ 277 ಸ್ಥಾನಗಳಿಗೆ 941 ಜನರು, ದೇವದುರ್ಗ ತಾಲೂಕಿನ 28 ಗ್ರಾಮ ಪಂಚಾಯತಿಗಳ 544 ಸ್ಥಾನಗಳಿಗೆ 1,608 ಜನರು ನಾಮಪತ್ರ ಸಲ್ಲಿಸಿದ್ದಾರೆ.
ರಾಯಚೂರು ತಾಲೂಕಿನ ಆತ್ಕೂರು ಗ್ರಾಪಂನ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಕಾರಣ ಗ್ರಾಪಂ ಚುನಾವಣೆಯ ಅಧಿಸೂಚನೆ ವಾಪಸ್ ಪಡೆಯಲಾಗಿದೆ.