ETV Bharat / state

ಆರ್​ಟಿಪಿಎಸ್​ ಹಾರೋಬೂದಿ ಸಾಗಣೆಯಲ್ಲಿ ಅಕ್ರಮದ ವಾಸನೆ... ಆರ್​ಟಿಒ ಅಧಿಕಾರಿಯಿಂದ 5 ಲಾರಿ ಸೀಜ್​ - undefined

ರಾಯಚೂರಿನ ವಿದ್ಯುತ್ ಶಾಖೋತ್ಪನ್ನ ಕೇಂದ್ರದ ಹಾರೋಬೂದಿ ಸಾಗಣೆಯಲ್ಲಿ ಅಕ್ರಮದ ವಾಸನೆ ಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಆರ್​ಟಿಪಿಎಸ್ ಘಟಕದಿಂದ ದಾಖಲೆಯಿಲ್ಲದೆ ಹಾರೋಬೂದಿಯನ್ನ ಸರಬರಾಜು ಮಾಡುತ್ತಿದ್ದ ಲಾರಿಗಳನ್ನು ಆರ್​ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರ್​ಟಿಪಿಎಸ್​ ಹಾರೋಬೂದಿ ಸಾಗಣೆಯಲ್ಲಿ ಅಕ್ರಮ
author img

By

Published : Apr 26, 2019, 3:06 PM IST

ರಾಯಚೂರು: ಜಿಲ್ಲೆಯನ್ನ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಕೇಂದ್ರವೆಂದು ಗುರುತಿಸಲಾಗಿದೆ. ಇಲ್ಲಿನ ವಿದ್ಯುತ್ ಶಾಖೋತ್ಪನ್ನ ಕೇಂದ್ರದಲ್ಲಿ ಹಾರೋಬೂದಿ ಸಾಗಣೆ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ಇಂದು ಕೂಡಾ ನಡೆದಿದೆ.

ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಆರ್​ಟಿಪಿಎಸ್) ಶೇ.40ರಷ್ಟು ವಿದ್ಯುತನ್ನು ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸುವ ಹೆಗ್ಗಳಿಕೆ ಪಡೆದಿದೆ. ಆದ್ರೆ ಈ ಕೇಂದ್ರದಲ್ಲಿ ಈಗ ಅಕ್ರಮ ದಂಧೆ ನಡೆದಿದೆ ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ.

ವಿದ್ಯುತ್ ಉತ್ಪಾದನೆಯಿಂದ ಹೊರ ಬರುವ ಹಾರೋಬೂದಿಯನ್ನ ನಿಯಮಗಳ ಪ್ರಕಾರ ಅನುಮತಿಯೊಂದಿಗೆ ಸಾಗಿಸಬೇಕು. ಆದ್ರೆ 13 ಲಾರಿಗಳಲ್ಲಿ ಸಾಗಿಸುತ್ತಿದ್ದ ಲಾರಿಗಳ ಪೈಕಿ, 5 ಲಾರಿಗಳಲ್ಲಿ ಯಾವುದೇ ದಾಖಲೆಯಿಲ್ಲದೆ ರಾಜ್ಯ ಹಾಗೂ ಅಂತಾರಾಜ್ಯಕ್ಕೆ ಸಾಗಣಿಕೆ ದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಆರ್​ಟಿಪಿಎಸ್​ನಲ್ಲಿ ಅಕ್ರಮ ದಂಧೆ ನಡೆಯುತ್ತಿದೆ ಎಂಬ ಶಂಕೆ ಮೂಡಿದೆ.

ಆರ್​ಟಿಓ ಅಧಿಕಾರಿಯಿಂದ 5 ಲಾರಿ ಸೀಜ್​

5 ಲಾರಿಗಳು ಸೀಜ್​...

ಹಾರೋಬೂದಿಯನ್ನ ಲಾರಿಯ ಟ್ಯಾಂಕರ್ ಮೂಲಕ ಸಾಗಣಿಸಬೇಕು. ಯಾಕೆಂದ್ರ ಈ ಬೂದಿ ಗಾಳಿಯಲ್ಲಿ ಹರಡಿದ್ರೆ ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಇದರಿಂದ ಜನರ ಆರೋಗ್ಯದ ಮೇಲೂ ದುಷ್ಪಾರಿಮ ಬೀರುತ್ತದೆ. ಆದ್ರೆ ಲಾರಿಗಳಲ್ಲಿ ಈ ಹಾರೋ ಬೂದಿಯನ್ನ ಸಾಗಿಸಲಾಗಿದೆ. ಅದರಲ್ಲಿ ಓವರ್​​ಲೋಡ್ ಹಾಕಿಕೊಂಡು ಲಾರಿಯಲ್ಲಿ ಬೂದಿಯನ್ನ ಕೊಂಡೊಯ್ಯುವುದನ್ನ ಗಮನಿಸಿದ ಸ್ಥಳೀಯ ಜೈ ಕರ್ನಾಟಕ ರಕ್ಷಣ ವೇದಿಕೆ ಸಂಘಟನೆ ಮುಖಂಡರು ಮತ್ತು ಸ್ಥಳೀಯರು ಲಾರಿ ನಿಲ್ಲಿಸಿ, ರಾಯಚೂರು ಸಾರಿಗೆ ಅಧಿಕಾರಿ(ಆರ್​ಟಿಒ)ಗೆ ಮಾಹಿತಿ ನೀಡಿದ್ದರು.

ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಸಾರಿಗೆ ಅಧಿಕಾರಿ 13 ಲಾರಿಗಳನ್ನ ತಪಾಸಣೆ ನಡೆಸಿದ್ದಾರೆ. 8 ಲಾರಿಗಳಲ್ಲಿ ನಿಯಮ ಪ್ರಕಾರವಾಗಿ ಲೋಡ್ ಮಾಡಲಾಗಿದ್ದು, ಸರಿಯಾದ ದಾಖಲೆಗಳೂ ಇವೆ. ಇನ್ನುಳಿದ 5 ಲಾರಿಗಳಲ್ಲಿ ಓವರ್​ಲೋಡ್ ಪತ್ತೆಯಾಗಿದೆ. ಅಲ್ಲದೆ ಸರಿಯಾದ ದಾಖಲೆಗಳೂ ಇಲ್ಲ. ಹೀಗಾಗಿ ಲಾರಿ ಚಾಲಕರು ಕೂಡಾ ಪರಾರಿಯಾಗಿದ್ದಾರೆ.

ಇನ್ನು ಹಾರೋಬೂದಿಯಲ್ಲಿ ಅಕ್ರಮ ಸಾಗಣಿಕೆ ಕುರಿತಾಗಿ ಕೆಲ ದಿನಗಳ ಹಿಂದೆ ಅಧಿಕಾರಿಗಳನ್ನ ಅಮಾನತುಗೊಳಿಸಿದ್ದರೆ, ಇನ್ನು ಕೆಲವರನ್ನ ಆರ್​ಟಿಪಿಎಸ್ ಘಟಕದಿಂದ ವೈಟಿಪಿಎಸ್​ಗೆ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಆರ್​ಟಿಪಿಎಸ್​ನಲ್ಲಿ ಅಕ್ರಮ ಕಂಡುಬಂದಿರುವುದು ಹಲವು ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಅಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಾರೋಬೂದಿಯನ್ನ ಹಣದಾಸೆಗೆ ಬಾಯ್ಬಿಟ್ಟು ಆರ್​ಟಿಪಿಎಸ್​ನ ಕೆಲ ಅಧಿಕಾರಿಗಳು ಇಂತಹ ಅಕ್ರಮ ದಂಧೆಗಳನ್ನು ನಡೆಸಿದ್ದಾರೆ ಎನ್ನುವ ಶಂಕೆ ಮೂಡಿದೆ.

ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ನಷ್ಟ ತಪ್ಪಿಸಬೇಕಿದೆ. ಇಂತಹ ಘಟನೆ ಮರುಕಳಿಸದಂತೆ ಸರ್ಕಾರ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕ ಒತ್ತಾಯವಾಗಿದೆ.

Intro:ಸ್ಲಗ್: ಹಾರೋಬೂದಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೨೫-೦೪-೨೦೧೯
ಸ್ಥಳ: ರಾಯಚೂರು

ಆಂಕರ್: ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರ ಹಾರೋಬೂದಿ ಸಾಗಣಿಕೆಯಲ್ಲಿ ಅಕ್ರಮ ಎಗ್ಗಿಲ್ಲದೆ ಸಾಗುತ್ತಿದಿಯ ಎನ್ನುವ ಅನುಮಾನ ಬಲವಾದ ಆರೋಪ ಕೇಳಿ ಬಂದಿದೆ. ಇದಕ್ಕೆ ಪುಷ್ಠಿಯಂಬತೆ ಆರ್ಟಿಪಿಎಸ್ ಹಾರೋಬೂದಿ ಘಟಕದಿಂದ ದಾಖಲೆಯಿಲ್ಲದೆ ಲಾರಿಗಳಲ್ಲಿ ಹಾರೋಬೂದಿಯನ್ನ ಸರಬರಾಜು ಆರ್ ಟಿಒ ಲಾರಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಡಿಟೇಲ್ ಸ್ಟೋರಿ ಇಲ್ಲಿದೆ ನೋಡಿ.
Body:ವಾಯ್ಸ್ ಓವರ್.೧: ಬಿಸಿಲೂರು ರಾಯಚೂರು ಜಿಲ್ಲೆಯನ್ನ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿ ಕೇಂದ್ರವೆಂದು ಗುರುತಿಸಲಾಗಿದೆ. ಶಕ್ತಿನಗರದ ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರದ(ಆರ್ಟಿಪಿಎಸ್) ರಾಜ್ಯಕ್ಕೆ ಶೇ.೪೦ರಷ್ಟು ಪ್ರತಿಶತ ವಿದ್ಯುತ್ ಉತ್ಪಾದಿಸುವ ಮೂಲಕ ರಾಜ್ಯ ವಿದ್ಯುತ್ ಜಾಲಕ್ಕೆ ರವಾನೆ ಮಾಡುವ ಹೆಗ್ಗಳಿಕೆ ಪಡೆದಿದೆ. ಆದ್ರೆ ಕೇಂದ್ರದಲ್ಲಿ ಈಗ ಅಕ್ರಮ ದಂಧೆ ನಡೆದಿದೆ ಎನ್ನುವ ದಟ್ಟ ಅನುಮಾನಗಳು ಹುಟ್ಟಿಕೊಂಡಿವೆ. ಹೌದು, ವಿದ್ಯುತ್ ಉತ್ಪಾದನೆಯಿಂದ ಹೊರ ಬರುವ ಹಾರೋಬೂದಿಯನ್ನ ನಿಯಮಗಳ ಪ್ರಕಾರ ಅನುಮತಿಯೊಂದಿಗೆ ಸಾಗಣಿಕೆ. ಆದ್ರೆ 13 ಲಾರಿಗಳಲ್ಲಿ ಸಾಗಣಿಕೆ ಮಾಡುತ್ತಿದ್ದ ಲಾರಿಗಳ ಪೈಕಿ 5 ಲಾರಿಗಳಲ್ಲಿ ಯಾವುದೇ ದಾಖಲೆಯಿಲ್ಲದ ಹಾರೋಬೂದಿಯನ್ನ ರಾಜ್ಯ ಮತ್ತು ಅಂತರಾಜ್ಯಕ್ಕೆ ಸಾಗಣಿಕೆ ದಂಧೆ ನಡೆಸಿರುವುದು ಬೆಳಕಿಗೆ ಬರುವ ಮೂಲಕ ಆರ್ಟಿಪಿಎಸ್ನಲ್ಲಿ ಅಕ್ರಮ ದಂಧೆ ವಾಸನೆ ತಗುಲಿದೆ.
ವಾಯ್ಸ್ ಓವರ್.೨: ಹಾರೋಬೂದಿಯನ್ನ ಲಾರಿಯ ಟ್ಯಾಂಕರ್ ಮೂಲಕ ಸಾಗಣಿಕೆ ಮಾಡಬೇಕು. ಯಾಕೆಂದ್ರ ಹಾರೋಬೂದಿ ಗಾಳಿಯಲ್ಲಿ ಹರಡಿದ್ರೆ ಸಾರ್ವಜನಿಕ ಆರೋಗ್ಯದ ದುಷ್ಪಾರಿಮ ಮತ್ತು ಪರಿಸರಕ್ಕೆ ಹಾನಿ ಉಂಟಾಗುತ್ತದೆ. ಆದ್ರೆ ೧೩ ಲಾರಿಗಳಲ್ಲಿ ಈ ಹಾರೋ ಬೂದಿಯನ್ನ ಲಾರಿಗಳಲ್ಲಿ ಸಾಗಟ ಮಾಡಲಾಗಿದೆ. ಅದರಲ್ಲಿ ಓವರ್ ಲೋಡ್ ಹಾಕಿಕೊಂಡು ಲಾರಿಯಲ್ಲಿ ಹಾರೋಬೂದಿಯನ್ನ ಕೊಂಡುಯ್ಯುವುದನ್ನ ಗಮನಿಸಿದ ಸ್ಥಳೀಯ ಜೈ ಕರ್ನಾಟಕ ರಕ್ಷಣ ವೇದಿಕೆ ಸಂಘಟನೆ ಮುಖಂಡರು ಮತ್ತು ಸ್ಥಳೀಯರು ಲಾರಿ ನಿಲ್ಲಿಸಿ, ರಾಯಚೂರು ಸಾರಿಗೆ ಅಧಿಕಾರಿ(ಆರ್ ಟಿಒ) ಮಾಹಿತಿಯನ್ನ ನೀಡಿದ್ರೆ. ಆಗ ಸ್ಥಳಕ್ಕೆ ಆಗಮಿಸಿದ ಸಾರಿಗೆ ಅಧಿಕಾರಿ ೧೩ ಲಾರಿಗಳನ್ನ ತಪಾಸಣೆ ಮಾಡುವ ವೇಳೆ ೮ ಲಾರಿಗಳಲ್ಲಿ ದಾಖಲೆ ಮತ್ತು ಲೋಡ್ ನಿಯಮ ಪ್ರಕಾರವಿದ್ದಾರೆ, ಇನ್ನೂಲಿದ ೫ ಲಾರಿಗಳಲ್ಲಿ ಹಾರೋ ಬೂದಿಯ ಸಾಗಣಿಕೆ ದಾಖಲೆ ಮತ್ತು ಓವರ್ ಲೋಡ್ ಇರುವುದು ಪತ್ತೆಯಾಗಿದ್ದು, ಲಾರಿ ಚಾಲಕರು ಪರಾರಿಯಾಗಿದ್ದಾರೆ.
ಬೈಟ್.೧: ವೆಂಕಟೇಶ್ವರಾವ್, ಆರ್ಟಿಒ ಅಧಿಕಾರಿ
Conclusion:
ವಾಯ್ಸ್ ಓವರ್.೩: ಇನ್ನು ಹಾರೋಬೂದಿಯಲ್ಲಿ ಅಕ್ರಮ ಸಾಗಣಿಕೆ ಕುರಿತಾಗಿ ಕೆಲ ದಿನಗಳ ಹಿಂದೆ ಅಧಿಕಾರಿಗಳನ್ನ ಅಮಾನುತುಗೊಳಿಸಿದ್ದರೆ, ಇನ್ನು ಕೆಲವರನ್ನ ಆರ್ಟಿಪಿಎಸ್ ಘಟಕದಿಂದ ವೈಟಿಪಿಎಸ್ಗೆ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿತ್ತು. ಈ ಪ್ರಕರಣ ಮಾಸ ಮುನ್ನವೇ ಮತ್ತೆ ಆರ್ಟಿಪಿಎಸ್ ಅಕ್ರಮದ ವಾಸನೆ ಬಡಿದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಹಾರೋ ಬೂದಿಯನ್ನ ಹಣದಾಸೆಗೆ ಆರ್ಟಿಪಿಎಸ್ ಕೆಲ ಅಧಿಕಾರಿಗಳು ಇಂತಹ ಅಕ್ರಮ ದಂಧೆಗಳಿಗೆ ನಡೆಸಿದ್ದರೆ ಎನ್ನುವ ಅನುಮಾನ ಹುಟ್ಟಿಕೊಟ್ಟಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ, ಸರ್ಕಾರದ ಭೂಕಸಕ್ಕೆ ಉಂಟಾಗುವ ನಷ್ಟ ತಪ್ಪಿಸಿ, ಇಂತಹ ಘಟನೆ ಮರುಕಳಿಸದಂತೆ ಸರಕಾರ ಗಮನ ಹರಿಸಬೇಕು ಎನ್ನುವುದು ಸಾರ್ವಜನಿಕ ಒತ್ತಾಸೆಯಾಗಿದೆ.
-ಮಲ್ಲಿಕಾರ್ಜುನ ಸ್ವಾಮಿ, ಈಟಿವಿ ಭಾರತ್, ರಾಯಚೂರು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.