ರಾಯಚೂರು: ಉಚಿತ ಬಸ್, ರೈಲ್ವೆ ಪಾಸ್, ಮಾಸಿಕ ಗೌರವ ಧನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆಯಲು ವಿಕಲಚೇತನರಿಗೆ ಬೇಕಾದ ಪ್ರಮಾಣ ಪತ್ರ ವಿತರಣಾ ಕಾರ್ಯ ಕೊರೊನಾ ಹಿನ್ನೆಲೆ ಆಗಸ್ಟ್ವರೆಗೆ ಸ್ಥಗಿತಗೊಳಿಸಿದ್ದ ಕಾರಣ ಫಲಾನುಭವಿಗಳು ತೊಂದರೆ ಅನುಭವಿಸಿದರು.
ಜಿಲ್ಲೆಯಲ್ಲಿಈವರೆಗೂ 45 ಸಾವಿರ ವಿಕಲಚೇತನರಿಗೆ ಪ್ರಮಾಣ ಪತ್ರ ವಿತರಿಸಲಾಗಿದೆ. ವಿಕಲಚೇತನ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಕೊರೊನಾಗೂ ಮುನ್ನ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳು ತೀರಾ ಸಮಸ್ಯೆಗೊಳಗಾಗಿದ್ದರು.
ಲಾಕ್‌ಡೌನ್ ಸಡಲಿಕೆ ನಂತರ ಸರ್ಕಾರದ ನಿಯಮದನುಸಾರ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಇಲಾಖೆಯ ಎರಡು ಖಾಯಂ ಹುದ್ದೆಗಳು ಮಂಜೂರಾತಿ ದೊರೆತಿದ್ದು, ಜಿಲ್ಲಾ ವಿಕಲಚೇತನರ ಅಧಿಕಾರಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಎಫ್‌ಡಿಸಿ ಹುದ್ದೆ ಖಾಲಿಯಾಗಿದೆ.
ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಂಬ್ಬದಿ ರಾಜೀನಾಮೆ ಸಲ್ಲಿಸಿದ್ದು, ಆ ಹುದ್ದೆ ಖಾಲಿಯಾಗಿದೆ. ಜಿಲ್ಲೆಯ ಎಲ್ಲಾ ಗ್ರಾಪಂ ಯುಡಿಐ, ಎಂಆರ್‌ಡಿ ಕಾರ್ಡ್ಗಳನ್ನು ವಿತರಿಸಲು ಯಾರಿಲ್ಲದ ಕಾರಣ ಹುದ್ದೆಗಳ ಭರ್ತಿಗೆ ಸರ್ಕಾರ ಆದೇಶಿಸಿದೆ.