ETV Bharat / state

ಅದ್ಧೂರಿಯಾಗಿ ನಡೆದ ಶ್ರೀ ರಾಘವೇಂದ್ರ ಸ್ವಾಮಿ 400ನೇ ಪಟ್ಟಾಭಿಷೇಕ - Raichur

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮೀಜಿಗಳ 400ನೇ ಪಟ್ಟಾಭಿಷೇಕ ಅದ್ಧೂರಿಯಾಗಿ ನಡೆಯಿತು. ರಾಯರ ಪಟ್ಟಾಭಿಷೇಕವಾದ ದಿನವಾದ ಇಂದು ರಾಯರ ಪಾದುಕೆ‌ಗಳಿಗೆ ವಜ್ರ, ವೈಡೂರ್ಯಗಳಿಂದ ಅಭಿಷೇಕ ಮಾಡುವ ಮೂಲಕ ಪಟ್ಟಾಭಿಷೇಕ‌ ನೆರವೇರಿಸಲಾಯಿತು.

Raichur
ಅದ್ದೂರಿಯಾಗಿ ನಡೆದ ಶ್ರೀ ರಾಘವೇಂದ್ರ ಸ್ವಾಮಿ 400ನೇ ಪಟ್ಟಾಭಿಷೇಕ
author img

By

Published : Mar 15, 2021, 2:22 PM IST

ರಾಯಚೂರು: ಕಲಿಯುಗದ ಕಾಮಧೇನು, ಭಕ್ತರ ಇಷ್ಟಾರ್ಥ ಈಡೇರಿಸುವ ಕಲ್ಪವೃಕ್ಷ ಶ್ರೀ ರಾಘವೇಂದ್ರ ಸ್ವಾಮಿಗಳ 400ನೇ ಪಟ್ಟಾಭಿಷೇಕ ಅದ್ಧೂರಿಯಾಗಿ ನಡೆಯಿತು.

ಅದ್ಧೂರಿಯಾಗಿ ನಡೆದ ಶ್ರೀ ರಾಘವೇಂದ್ರ ಸ್ವಾಮಿ 400ನೇ ಪಟ್ಟಾಭಿಷೇಕ

ಬೆಳಗ್ಗೆ ಎಂದಿನಂತೆ ಮೂಲ ಬೃಂದವನಕ್ಕೆ ಪೂಜೆ ಕೈಕಾರ್ಯಗಳು ನಡೆದವು. ಮಠದ ಪೀಠಾಧಿಪತಿ ಶ್ರೀ ಸುಬುದೇಂಧ್ರ ತೀರ್ಥರು ‌ಮೂಲ‌ ರಾಮದೇವರ ಪೂಜೆ ನೇರವೇರಿಸಿ ಬಳಿಕ ಮಠದ ಪ್ರಾಂಗಣದ ಅಲಂಕೃತ ತೊಟ್ಟಿಲಲ್ಲಿ ರಾಯರ‌ ಚಿನ್ನದ ಪಾದುಕೆಗಳು ಇರಿಸಿ ಮಂತ್ರ ಘೋಷಗಳೊಂದಿಗೆ ಪುಷ್ಪಾಭಿಷೇಕ, ಕನಕ, ಮುತ್ತು, ರತ್ನ, ನವರತ್ನಗಳಿಂದ ಅಭಿಷೇಕ ಮಾಡಿ, ಮಹಾಮಂಗಳರಾತಿ ನೇರವೇರಿಸಿ, ನೆರದ ಭಕ್ತ ಗಣಕ್ಕೆ ರಾಯರ ಪಾದುಕೆಗಳ ದರ್ಶನ ಮಾಡಿಸಿದರು. ನಂತರ ಪಾದುಕೆಗಳನ್ನ ಚಿನ್ನದ ರಥದಲ್ಲಿ ಇರಿಸಿ ರಥೋತ್ಸವ ನಡೆಸಲಾಯಿತು ಹಾಗೂ ಶ್ರೀಗಳು ಭಕ್ತರಿಗೆ ಅನುಗ್ರಹ ಸಂದೇಶ ನೀಡಿದರು.

ಮಂತ್ರಾಲಯದ ಹೊರವಲಯದಲ್ಲಿರುವ ಕೊಂಡಪುರ ಬಳಿ ನೂತನ ಶ್ರೀ‌ ಅಭಯ ಆಂಜಿನೇಯ ಸ್ವಾಮಿ 32 ಅಡಿ ಎತ್ತರದ ಮೂರ್ತಿಯನ್ನ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪ್ರತಿಷ್ಠಾನ ಮಾಡಲಾಯಿತು. ಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆ ಮೂಲ ಬೃಂದವನ ಹಾಗೂ ದೇಗುಲಕ್ಕೆ ವಿಶೇಷ ಪುಷ್ಪಾಂಲಕರವನ್ನ ಮಾಡಲಾಗಿತ್ತು. ಮಹೋತ್ಸವವನ್ನ ನೋಡಲು ದೇಶದ ನಾನಾ‌ ಭಾಗಗಳಿಂದ ಬಂದ ಭಕ್ತರು, ಭಕ್ತಿಯಿಂದ ಬೇಡಿಕೊಂಡರೆ ಶ್ರೀರಾಘವೇಂದ್ರ ಸ್ವಾಮಿ ಇಷ್ಟಾರ್ಥಗನ್ನು ಈಡೇರಿಸುತ್ತಾರೆ ಎನ್ನುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಿದ ಬಳಿಕ ವಾರಗಳ ಕಾಲ ನಡೆಯುವ ಗುರು ವೈಭವ ಉತ್ಸವದ 2ನೇ ದಿನವಾದ ಇಂದು ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.