ETV Bharat / state

ರಾಯಚೂರು ಜಿಲ್ಲೆಯಲ್ಲಿ 12 ಬಾಲ್ಯ ವಿವಾಹ ಪ್ರಕರಣ ದೃಢ

author img

By

Published : Oct 28, 2020, 9:39 AM IST

ರಾಯಚೂರು ಜಿಲ್ಲೆಯಲ್ಲಿ ಏಪ್ರಿಲ್​​ನಿಂದ ಈವರೆಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ 50 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 12 ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು, ಉಳಿದ 38 ಪ್ರಕರಣಗಳನ್ನು ತಡೆಯುವಲ್ಲಿ ಸಮಿತಿ ಯಶಸ್ವಿಯಾಗಿದೆ.

raichur
ರಾಯಚೂರು ಜಿಲ್ಲೆಯಲ್ಲಿ 12 ಬಾಲ್ಯವಿವಾಹ ಪ್ರಕರಣ ದೃಢ

ರಾಯಚೂರು: ಸಾಮಾಜಿಕ ಅನಿಷ್ಠ ಪದ್ಧತಿಗಳಲ್ಲಿ ಒಂದಾಗಿರುವ ಬಾಲ್ಯ ವಿವಾಹ ಪ್ರಕರಣಗಳು ಜಿಲ್ಲೆಯಲ್ಲಿ ಇನ್ನೂ ಜೀವಂತವಾಗಿವೆ. ಇಲ್ಲಿಯವರೆಗೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ 50 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 12 ಬಾಲ್ಯ ವಿವಾಹ ಪ್ರಕರಣಗಳು ನಡೆದಿರುವುದು ದೃಢಪಟ್ಟಿದೆ.

ರಾಯಚೂರು ಜಿಲ್ಲೆಯಲ್ಲಿ 12 ಬಾಲ್ಯ ವಿವಾಹ ಪ್ರಕರಣ ದೃಢ: ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ

ಏಪ್ರಿಲ್​​ನಿಂದ ಈವರೆಗೆ ಮಕ್ಕಳ ಕಲ್ಯಾಣ ಸಮಿತಿ ಮುಂದೆ 50 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 12 ಬಾಲ್ಯ ವಿವಾಹ ಪ್ರಕರಣಗಳು ನಡೆದಿದ್ದು, ಉಳಿದ 38 ಪ್ರಕರಣಗಳನ್ನು ತಡೆಯುವಲ್ಲಿ ಸಮಿತಿ ಯಶಸ್ವಿಯಾಗಿದೆ. ದೃಢಪಟ್ಟ 12 ಪ್ರಕರಣಗಳಲ್ಲಿ 4 ಪ್ರಕರಣಗಳ ಆರೋಪಿತರ ವಿರುದ್ಧ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳಿದ ಪ್ರಕರಣಗಳ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬಾಲ್ಯ ವಿವಾಹ ತಡೆ ಹಿಡಿಯಲಾದ 38 ಪ್ರಕರಣಗಳ ಪಾಲಕರನ್ನು ಸಮಿತಿ ಮುಂದೆ ಹಾಜರುಪಡಿಸಿ ಹೆಣ್ಣುಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಮಚ್ಚಳಿಕೆ ಪತ್ರ ಪಡೆಯಲಾಗಿದೆ. ನಿಯಮ ಮೀರಿದರೆ ಕಾನೂನು ಪ್ರಕಾರ ಶಿಕ್ಷೆಯ ಕುರಿತು ಎಚ್ಚರಿಕೆ ನೀಡಲಾಗಿದೆ. ಬಾಲ್ಯ ವಿವಾಹ ಹಾಗೂ ಮಕ್ಕಳ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ಪ್ರತಿ ಹಳ್ಳಿಯ ಶಾಲೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲದೆ 1098 ಮಕ್ಕಳ ಸಹಾವಾಣಿ ಕೇಂದ್ರ ಕುರಿತು ಮಕ್ಕಳಿಗೆ ಮಾಹಿತಿ ನೀಡಿರುವುದು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತಿದೆ.

ಬಡತನ, ವಲಸೆ ಹಾಗೂ ತಂದೆ-ತಾಯಿಂದಿರ ಒತ್ತಡ, ಬಾಲ್ಯ ವಿವಾಹ ಪ್ರಕರಣಗಳ ಕುರಿತು ಅರಿವಿನ ಕೊರತೆಯಿಂದ ಪ್ರಕರಣಗಳು ನಡೆಯಲು ಕಾರಣವಾಗಿದೆ. 2020-21ನೇ ಸಾಲಿನ ಒಂದನೇ ಮತ್ತು ಎರಡನೇ ತ್ರೈಮಾಸಿಕದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಕ್ಕಳ ಸಹಾಯವಾಣಿ ಮುಂದೆ 12 ಬಾಲ್ಯ ವಿವಾಹ, 9 ಪೋಕ್ಸೋ ಪ್ರಕರಣ, 4 ಮನೆ ಬಿಟ್ಟು ಬಂದ ಮಕ್ಕಳು, 3 ರಕ್ಷಣೆ ಮತ್ತು ಪೋಷಣೆ, 130 ಬಾಲಕಾರ್ಮಿಕರು, 5 ನವಜಾತ ಶಿಶುಗಳ ಪ್ರಕರಣಗಳು ಬಂದಿವೆ.

ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾಧ್ಯಕ್ಷೆ ಮಂಗಳಾ ಹೆಗ್ಗಡೆ ಮಾತನಾಡಿ, ಏಪ್ರಿಲ್ ತಿಂಗಳಿನಿಂದ ಇಲ್ಲಿಯವರೆಗೂ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದ 50 ಪ್ರಕರಣಗಳಲ್ಲಿ 12 ಬಾಲ್ಯ ವಿವಾಹ ಪ್ರಕರಣಗಳು ದೃಢಪಟ್ಟಿದ್ದು, 4 ಪ್ರಕರಣಗಳ ಆರೋಪಿತರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಉಳಿದ ಪ್ರಕರಣಗಳ ಆರೋಪಿತರ ವಿರುದ್ಧ ದೂರು ದಾಖಲಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಪ್ರಾರಂಭಿಸಲಾಗಿರುವ 1098 ಮಕ್ಕಳ ಸಹಾಯವಾಣಿ ಕೇಂದ್ರ ಬಾಲ್ಯ ವಿವಾಹ, ಮಕ್ಕಳ ದೌರ್ಜನ್ಯ ಪ್ರಕರಣಗಳ ತಡೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಬಸವರಾಜ ಬ್ಯಾಗವಾಟ್ ಮಾತನಾಡಿ, ಬಾಲ್ಯ ವಿವಾಹ, ಅಪೌಷ್ಟಿಕತೆ, ಮಕ್ಕಳ ದೌರ್ಜನ್ಯ ಪ್ರಕರಣಗಳು ಸಮಿತಿ ಮುಂದೆ ಬಂದಿವೆ. ಬಾಲ್ಯ ವಿವಾಹ ಕುರಿತು ಸಮುದಾಯದಲ್ಲಿ ಜಾಗೃತಿ ಕೊರತೆಯಿಂದ ಪ್ರಕರಣಗಳು ನಡೆಯುತ್ತಿವೆ. ಅಲ್ಲದೆ ಬಡತನ, ವಲಸೆ, ಪಾಲಕರ ಒತ್ತಾಯದಿಂದ ಪ್ರಕರಣಗಳು ಹೆಚ್ಚಾಗಿವೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾಗೃತಿ ಕಾರ್ಯ ನಡೆಯುತ್ತದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.