ETV Bharat / state

ದೇವರಾಜ ಮಾರುಕಟ್ಟೆ ನೆಲಸಮ ಬಗ್ಗೆ ರಾಜವಂಶಸ್ಥ ಯದುವೀರ್ ಹೇಳಿದ್ದೇನು? - ದೇವರಾಜ ಮಾರುಕಟ್ಟೆ ನೆಲಸಮ ಸುದ್ದಿ

ಪಾರಂಪರಿಕ ಕಟ್ಟಡಗಳನ್ನು ಕೆಡವುದಕ್ಕಿಂತ ಅವುಗಳನ್ನು ಉಳಿಸುವುದು ಒಳ್ಳೆಯದು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

Yaduveer Odeyar reaction on Devaraja Market demolish
ರಾಜವಂಶಸ್ಥ ಯದುವೀರ್ ಹೇಳಿಕೆ
author img

By

Published : Jan 11, 2020, 7:36 PM IST

ಮೈಸೂರು: ಪಾರಂಪರಿಕ ಕಟ್ಟಡಗಳನ್ನು ಕೆಡವುದಕ್ಕಿಂತ ಅವುಗಳನ್ನು ಉಳಿಸುವುದು ಒಳ್ಳೆಯದು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ರಾಜವಂಶಸ್ಥ ಯದುವೀರ್ ಹೇಳಿಕೆ

ಇಂದು ಗೆಡ್ಡೆ-ಗೆಣಸು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡ ಇಲ್ಲಿನ ಸಂಸ್ಕೃತಿ ಪ್ರಪಂಚದಲ್ಲಿ ಎಲ್ಲೂ ಇಲ್ಲ. ನಮ್ಮ ಈ ಪಾರಂಪರಿಕ ಕಟ್ಟಡಗಳು ಉಳಿಯಬೇಕು ಎಂಬುದು ನನ್ನ ಅಭಿಪ್ರಾಯ. ಇದನ್ನು ಜಿಲ್ಲಾಧಿಕಾರಿಗಳು ಉಳಿಸುವ ಪ್ರಯತ್ನ ಮಾಡಬೇಕು. ನಮ್ಮ ಕಡೆಯಿಂದ ಏನಾದರೂ ಸಹಾಯ ಬೇಕಾದರೆ ನಾವು ಮಾಡಲು ಸಿದ್ಧವಿದ್ದೇವೆ ಎಂದು ರಾಜ ಮಾತೆ ಪ್ರಮೋದ ದೇವಿ ಒಡೆಯರ್ ಹೇಳಿದ್ದಾರೆ.

ಟೆಕ್ನಿಕಲ್ ಟೀಮ್ ನೀಡಿದ ವರದಿಯಲ್ಲಿ ಏನಿದೆ ಎಂಬುದರ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಹೆರಿಟೇಜ್ ಕಮಿಟಿಯಲ್ಲಿ ರಂಗರಾಜ್ ಬಿಟ್ಟರೆ ಯಾರಿದ್ದಾರೆ ಎಂದು ಗೊತ್ತಿಲ್ಲ. ಬೇರೆಯವರು ಸಿವಿಲ್ ಇಂಜಿನಿಯರ್ಸ್ ಇರುತ್ತಾರೆ. ಅವರಿಗೆ ಪಾರಂಪರಿಕ ಕಟ್ಟಡಗಳನ್ನು ಸುಣ್ಣ ಉಪಯೋಗಿಸಿ ಕಟ್ಟಿರುತ್ತಾರೆ ಎಂಬುದು ಮಾಹಿತಿ ಇರುವುದಿಲ್ಲ. ಈ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡುವ ವಿಚಾರದಲ್ಲಿ ಸಿವಿಲ್ ಇಂಜಿನಿಯರ್ಸ್ ಅಭಿಪ್ರಾಯ ತೆಗೆದುಕೊಳ್ಳುವುದು ತಪ್ಪು ಎಂದರು.

ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲಾನ್ಸ್ ಸ್ಟೋನ್ ಬಿಲ್ಡಿಂಗ್ ನೆಲಸಮ ಮಾಡುವ ಬದಲು ಅದನ್ನು ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆದು ನವೀಕರಣಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

Intro:ಮೈಸೂರು: ಪಾರಂಪರಿಕ ಕಟ್ಟಡಗಳನ್ನು ಕೆಡವುದಕ್ಕಿಂತ ಅವುಗಳನ್ನು ಉಳಿಸುವುದು ಒಳ್ಳೆಯದು ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ ನೀಡಿದ್ದಾರೆ.Body:

ಇಂದು ಗೆಡ್ಡೆ ಗೆಣಸು ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಸ್ಟೋನ್ ಬಿಲ್ಡಿಂಗ್ ಕಟ್ಟಡವನ್ನು ಸುರಕ್ಷಿತ ದೃಷ್ಟಿಯಿಂದ ನೆಲಸಮ ಮಾಡಲು ಪಾಲಿಕೆ ಮುಂದಾಗಿರುವ ಹಿನ್ನೆಲೆಯಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ ರಾಜವಂಶಸ್ಥರು ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡ ಇಲ್ಲಿನ ಸಂಸ್ಕೃತಿ ಪ್ರಪಂಚದಲ್ಲಿ ಎಲ್ಲೂ ಇಲ್ಲ , ನಮ್ಮ ಈ ಪಾರಂಪರಿಕ ಕಟ್ಟಡಗಳು ಉಳಿಯಬೇಕು ಎಂಬುದು ನನ್ನ ಅಭಿಪ್ರಾಯ, ಇದನ್ನು ಜಿಲ್ಲಾಧಿಕಾರಿಗಳು ಉಳಿಸುವ ಪ್ರಯತ್ನ ಮಾಡಬೇಕು. ನಮ್ಮ ಕಡೆಯಿಂದ ಏನಾದರೂ ಸಹಾಯ ಬೇಕಾದರೆ ನಾವು ಮಾಡಲು ಸಿದ್ದವಿದ್ದೇವೆ ,ಎಂದು ರಾಜ ಮಾತೆ ಪ್ರಮೋದ ದೇವಿ ಒಡೆಯರ್ ಹೇಳಿದ್ದಾರೆ ಎಂದ ಯದುವೀರ್ ಟೆಕ್ನಿಕಲ್ ಟೀಮ್ ನೀಡಿದ ವರದಿಯಲ್ಲಿ ಏನಿದೆ ಎಂಬುದು ನನಗೆ ಸರಿಯಾದ ಮಾಹಿತಿ ಇಲ್ಲ ಎರಿಟೇಜ್ ಕಮಿಟಿಯಲ್ಲಿ ರಂಗರಾಜ್ ಬಿಟ್ಟರೆ ಯಾರಿದ್ದಾರೆ ಎಂದು ಗೊತ್ತಿಲ್ಲ ಬೇರೆಯವರು ಸಿವಿಲ್ ಇಂಜಿನಿಯರ್ಸ್ ಇರುತ್ತಾರೆ ಅವರಿಗೆ ಪಾರಂಪರಿಕ ಕಟ್ಟಡಗಳನ್ನು ಸುಣ್ಣ ಉಪಯೋಗಿಸಿ ಕಟ್ಟಿರುತ್ತಾರೆ ಎಂಬುದು ಮಾಹಿತಿ ಇರುವುದಿಲ್ಲ. ಈ ಪಾರಂಪರಿಕ ಕಟ್ಟಡಗಳನ್ನು ನೆಲಸಮ ಮಾಡುವ ವಿಚಾರದಲ್ಲಿ ಸಿವಿಲ್ ಇಂಜಿನಿಯರ್ಸ್ ಅಭಿಪ್ರಾಯ ತೆಗೆದುಕೊಳ್ಳುವುದು ತಪ್ಪು ಎಂದು ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲಾನ್ಸ್ ಸ್ಟೋನ್ ಬಿಲ್ಡಿಂಗ್ ನೆಲಸಮ ಮಾಡುವ ಬದಲು ಅದನ್ನು ಪಾರಂಪರಿಕ ತಜ್ಞರ ಅಭಿಪ್ರಾಯ ಪಡೆದು ಪುನರ್ ನವೀಕರಣಗೊಳಿಸಬೇಕು ಎಂದು ರಾಜವಂಶಸ್ಥ ಯದುವೀರ್ ತಿಳಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.