ಮೈಸೂರು: ಐತಿಹಾಸಿನ ನಂಜನಗೂಡಿನ ನಂಜುಂಡೇಶ್ವರನ ಸನ್ನಿಧಿಯಲ್ಲಿ ಯದುವಂಶಸ್ಥರಾದ ಯದುವೀರ್ ಮತ್ತು ಫ್ಯಾಮಿಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಪತ್ನಿ ತ್ರಿಷಿಕಾ ಕುಮಾರಿ, ಪುತ್ರ ಆದ್ಯವೀರ್ನೊಂದಿಗೆ ನಂಜುಂಡೇಶ್ವರ ದೇವಾಲಯಕ್ಕೆ ಆಗಮಿಸಿದ್ದರು. ಯದುವೀರ್ ಕುಟುಂಬವನ್ನು ದೇವಾಲಯದ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ರಾಜವಂಶಸ್ಥ ಯದುವೀರ್ ಇಂದು ಕುಟುಂಬ ಸಮೇತ ನಂಜನಗೂಡಿನ ನಂಜುಂಡೇಶ್ವರನ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್, ಪತ್ನಿ ರಿಷಿಕಾ ಯದುವೀರ್ ಹಾಗೂ ಪುತ್ರ ಆದ್ಯವೀರ್ ಜೊತೆ ಆಗಮಿಸಿ ನಂಜುಂಡನ ದರುಶನ ಪಡೆದರು. ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಅನ್ನದಾತನಿಗೆ ಶುಭ ಕೋರಿ ಪೂಜೆ ಸಲ್ಲಿಸಿದರು. ಸುಮಾರು ಅರ್ಧಗಂಟೆಗಳ ಕಾಲ ಗರ್ಭಗುಡಿ ಮುಂದೆ ಕುಳಿತ ಕುಟುಂಬ ರಾಜ್ಯದ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ದೇವಾಲಯದ ಸುತ್ತ ಪ್ರದರ್ಶನ ಮಾಡಿದರು.
ಇದನ್ನೂ ಓದಿ: ಭರಚುಕ್ಕಿ ಜಲಪಾತದ ಸುತ್ತ ಆನೆ ಹಾವಳಿ.. ಮಕ್ಕಳ ಉದ್ಯಾನದ ಮೇಲೆ ನಿತ್ಯ ದಾಳಿ..