ETV Bharat / state

ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದ್ದೇನು?.. ಅವರ ಮಾತಲ್ಲೇ ಕೇಳಿ! - etv bharat karnataka

ಮೈಸೂರು ಅರಮನೆಯಲ್ಲಿ ನವರಾತ್ರಿ ಹಿನ್ನೆಲೆ ನಡೆಯುವ ರತ್ನ ಖಚಿತ ಸಿಂಹಾಸನ ಪೂಜೆ, ಖಾಸಗಿ ದರ್ಬಾರ್, ಆಯುಧ ಪೂಜೆ ಸೇರಿದಂತೆ ಇತರ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

yadhuvir-krishnadatta-chamaraja-wadeyar-interview-with-etv-bharat-mysuru
ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜವಂಶಸ್ಥ ಯಧುವೀರ್ ಒಡೆಯರ್ ಹೇಳಿದ್ದೇನು?
author img

By ETV Bharat Karnataka Team

Published : Oct 21, 2023, 3:34 PM IST

Updated : Oct 21, 2023, 5:07 PM IST

ರಾಜವಂಶಸ್ಥ ಯಧುವೀರ್ ಒಡೆಯರ್ ಸಂದರ್ಶನ

ಮೈಸೂರು: ಮೈಸೂರು ದಸರಾದಲ್ಲಿ ರಾಜವಂಶಸ್ಥರು ಅರಮನೆಯ ಒಳಗೆ ನಡೆಸುವ ಸಾಂಪ್ರದಾಯಿಕ ಶರನ್ನವರಾತ್ರಿ ಪೂಜೆ ಕೈಂಕರ್ಯಗಳು ಇತಿಹಾಸದ ಹಿನ್ನೆಲೆಯನ್ನು ಹೊಂದಿದೆ. ಅರಮನೆಯ ಒಳಗೆ ನವರಾತ್ರಿಯಲ್ಲಿ ನಡೆಯುವ ರತ್ನ ಖಚಿತ ಸಿಂಹಾಸನ ಪೂಜೆ, ಖಾಸಗಿ ದರ್ಬಾರ್, ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ, ಆಯುಧ ಪೂಜೆ, ವಿಜಯ ದಶಮಿ ಆಚರಣೆ ಸೇರಿದಂತೆ ಇತರ ಸಾಂಪ್ರದಾಯಿಕ ಪೂಜೆಗಳ ಬಗ್ಗೆ ರಾಜ ವಂಶಸ್ಥ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಟಿವಿ ಭಾರತಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅರಮನೆಯ ಧಾರ್ಮಿಕ ಸಂಪ್ರದಾಯಿಕಗಳ ಬಗ್ಗೆ ವಿವರಿಸಿದ್ದಾರೆ.

yadhuvir-krishnadatta-chamaraja-wadeyar-interview-with-etv-bharat-mysuru
ರತ್ನಖಚಿತ ಸಿಂಹಾಸನದಲ್ಲಿ ಆಸಿನರಾಗಿರುವ ರಾಜವಂಶಸ್ಥ ಯಧುವೀರ್ ಒಡೆಯರ್

400 ವರ್ಷಗಳಿಂದ ಶರನ್ನವರಾತ್ರಿ ಪೂಜೆ: ಯದು ವಂಶ ಸುಮಾರು 400 ವರ್ಷಗಳಿಂದ ಶರನ್ನವರಾತ್ರಿಯ ಪೂಜೆಗಳನ್ನು ಆಚರಿಸಿಕೊಂಡು ಬರುತ್ತಿದೆ. ಅದೇ ಆಚರಣೆಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದು, ಅದಕ್ಕಿಂತ ಹಿಂದೆ ವಿಜಯ ನಗರದ ಅರಸರು ದಸರಾ ಆಚರಿಸುತ್ತಿದ್ದರು. ಆನಂತರ ಸರ್ಕಾರದವರು ಈಗ ಸಾರ್ವಜನಿಕವಾಗಿ ಆಚರಿಸುತ್ತಿದ್ದಾರೆ. ಅದು ಪಬ್ಲಿಕ್ ದಸರಾ, ಈಗ ನಾಡಹಬ್ಬ ಆಗಿದೆ ಎಂದರು.

ನವರಾತ್ರಿಯಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳು: ಅರಮನೆಯ ಶರನ್ನವರಾತ್ರಿಯ ಪೂಜಾ ವಿಧಿ ವಿಧಾನಗಳನ್ನು ನಮ್ಮ ಯದು ವಂಶದವರೇ ಮಾಡಬೇಕು. ಅದೇ ಪರಂಪರೆಯನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ವಿಶೇಷವಾಗಿ ಆಶ್ವಯುಜ ಮಾಸದ ಪಾಡ್ಯ ದಿನದಿಂದ ಆರಂಭವಾದ ಶರನ್ನವರಾತ್ರಿಯ ಪೂಜೆಗಳು, ದಶಮಿಯ ದಿನದ ವಿಜಯ ದಶಮಿಯವರೆಗೆ ನಡೆಯುತ್ತದೆ. ಅದರ ಮಧ್ಯೆ 10 ದಿನಗಳು ಶರನ್ನವರಾತ್ರಿಯ ಆಚರಣೆಗಳು ನಡೆಯುತ್ತವೆ. ಬೇರೆ ಬೇರೆ ರೀತಿಯ ಪೂಜೆಗಳು ನಡೆಯುತ್ತವೆ. ಅದರಲ್ಲಿ ವಿಶೇಷವಾಗಿ ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ, ಕೊನೆಯಲ್ಲಿ ರುದ್ರ ಪೂಜೆ ಮತ್ತು ಶಮಿ ಪೂಜೆ ನಡೆಯುತ್ತದೆ ಎಂದು ಯಧುವೀರ್ ಒಡೆಯರ್ ಮಾಹಿತಿ ನೀಡಿದರು.

ಖಾಸಗಿ ದರ್ಬಾರ್​ನಲ್ಲಿ ರಾಜವಂಶಸ್ಥ ಯಧುವೀರ್ ಒಡೆಯರ್

ಚಾಮುಂಡಿ ತಾಯಿ ನಮ್ಮ ಕುಲ ದೇವತೆ: ಚಾಮುಂಡೇಶ್ವರಿ ತಾಯಿಯನ್ನು ಚಾಮುಂಡಿ ಬೆಟ್ಟದಲ್ಲಿ ಋಷಿ ಮಾರ್ಕಂಡೇಯ ತಪಸ್ಸು ಮಾಡುವಾಗ ಸ್ಥಾಪನೆ ಮಾಡಿದ್ದು ಐತಿಹಾಸಿಕ ವಿಚಾರ. ಚಾಮುಂಡೇಶ್ವರಿ ತಾಯಿಗೆ ಬೇರೆ ಬೇರೆ ರಾಜ ವಂಶಸ್ಥರು ಪೂಜೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ವಂಶಸ್ಥರು ಚಾಮುಂಡೇಶ್ವರಿಯ ಕೃಪೆಯಿಂದ ಇಲ್ಲಿಯವರೆಗೆ ಮುಂದುವರಿದಿದ್ದು, ಚಾಮುಂಡೇಶ್ವರಿ ಈಗ ನಮ್ಮ ಕುಲದೇವತೆಯೂ ಹೌದು. ಆದ್ದರಿಂದ ನಾವು ಚಾಮುಂಡೇಶ್ವರಿಯನ್ನ ಪೂಜಿಸುತ್ತೇವೆ. ಅರಮನೆಯಲ್ಲಿ ಶರನ್ನವರಾತ್ರಿಯ ಮೊದಲ ದಿನ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸುವ ನಮ್ಮ ಪರಂಪರೆ ಈಗಲೂ ಮುಂದುವರಿದಿದ್ದು, ಇದು ದಸರೆಯ ಸಂದರ್ಭದಲ್ಲಿ ನಾವು ನಡೆಸುವ ಒಂದು ಪೂಜಾ ವಿಧಾನ ಎಂದು ರತ್ನ ಖಚಿತ ಸಿಂಹಾಸನದ ಮೇಲೆ ಖಾಸಗಿ ದರ್ಬಾರ್ ನಡೆಸುವ ಬಗ್ಗೆ, ಅದರ ಪರಂಪರೆಯ ಬಗ್ಗೆ ತಿಳಿಸಿದರು.

ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಪೂಜೆ

ಆಯುಧ ಪೂಜೆಯ ಹಿನ್ನೆಲೆ ಏನು: ನವರಾತ್ರಿಯ 9ನೇ ದಿನ ಅರಮನೆಯಲ್ಲಿ ಆಯುಧ ಪೂಜೆ ನಡೆಯುತ್ತದೆ. ನವಮಿಯ ದಿನ ಪಟ್ಟದ ಆನೆ, ಕುದುರೆ, ಹಸು, ಖಾಸಗಿ ವಾಹನಗಳು ಮತ್ತು ಎಲ್ಲ ಅರಮನೆಯ ಖಾಸಗಿ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಹಿಂದೆ ರಾಜರು ಯುದ್ದದಲ್ಲಿ ಜಯಗಳಿಸಲು ಆಯುಧಗಳ ಆಶೀರ್ವಾದ ಬೇಕಿತ್ತು. ಜೊತೆಗೆ ಯುದ್ದಗಳಲ್ಲಿ ವಿಜೇತರಾಗಬೇಕು ಎಂದು ಪ್ರಾರ್ಥನೆ ಸಲ್ಲಿಸಲು ಆಯುಧ ಪೂಜೆ ನಡೆಸಲಾಗುತ್ತದೆ. ಈಗಲೂ ಜೀವನದಲ್ಲಿ ಹಲವಾರು ಆಯುಧಗಳನ್ನು ಬಳಸುತ್ತೇವೆ. ಜೊತೆಗೆ ವಾಹನಗಳನ್ನು ಆಧುನಿಕ ಸಾರಿಗೆಯಲ್ಲಿ ಬಳಸುವುದರಿಂದ ಅದಕ್ಕೆಲ್ಕ ಆರಾಧನೆ ಮಾಡುವುದೇ ಆಯುಧ ಪೂಜೆ. ಇದು ಪರಂಪರೆಯಿಂದ ನಡೆದುಕೊಂಡು ಬರುತ್ತಿದೆ ಎಂದು ಆಯುಧ ಪೂಜೆ ವಿಶೇಷತೆ ಬಗ್ಗೆ ವಿವರಿಸಿದರು.

ವಿಜಯದಶಮಿಯ ದಿನ ವಿಜಯ ಯಾತ್ರೆ ಹೊರಟು, ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಿ, ವಾಪಸ್ ಅರಮನೆಗೆ ಬಂದು ಹಿಂದೆ ಮಹಾರಾಜರು ಅಂಬಾರಿಯಲ್ಲಿ ಹೋಗುತ್ತಿದ್ದರು. ಈಗ ಸರ್ಕಾರ ಮಾಡುವ ದಸರಾದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಜಂಬೂಸವಾರಿ ಮೆರವಣಿಗೆ ಹೋಗುತ್ತಾಳೆ. ನಾವು ಸಹ ಪುಷ್ಪಾರ್ಚನೆಯಲ್ಲಿ ಭಾಗವಹಿಸುತ್ತೇವೆ ಎಂದು ವಿಜಯ ದಶಮಿಯ ಆಚರಣೆ ಬಗ್ಗೆ ಯಧುವೀರ್ ಒಡೆಯರ್ ಮಾಹಿತಿ ನೀಡಿದರು.

ಇದು ನನ್ನ ಸೌಭಾಗ್ಯ: ಕಳೆದ ಎಂಟು ವರ್ಷಗಳಿಂದ ಅರಮನೆಯಲ್ಲಿ ಶರನ್ನವರಾತ್ರಿಯ ಪೂಜೆಗಳನ್ನು ಮಾಡುತ್ತಿದ್ದು‌‌. ಇದು ನನ್ನ ಸೌಭಾಗ್ಯ ಹಾಗೂ ನಮ್ಮ ಮೇಲಿನ ಜವಾಬ್ದಾರಿಯಾಗಿದೆ. ಈ ಸಂಪ್ರದಾಯದ ಬಗ್ಗೆ ಜನರಿಗೆ ಗೌರವವಿದೆ. ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದು, ತಾಯಿಯ ಆಶೀರ್ವಾದ ಮತ್ತು ಸಲಹೆಯಿಂದ ಈಗಲೂ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ ಎಂದು ಈಟಿವಿ ಭಾರತದೊಂದಿಗೆ ಯಧುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ: ಆಕರ್ಷಕ ದೀಪಾಲಂಕಾರದಿಂದ ಮೈಸೂರು ನಗರ ಝಗಮಗ-ವಿಡಿಯೋ

Last Updated : Oct 21, 2023, 5:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.