ETV Bharat / state

ಲಾಕ್​ಡೌನ್​ ಸಡಿಲಿಕೆಯಿಂದ ಕೈಗಾರಿಕೆಗಳು ನಿರಾಳ, ಕಾರ್ಮಿಕರಲ್ಲಿ ಮೂಡಿದ ಮಂದಹಾಸ

3ನೇ ಹಂತದ ಲಾಕ್​ಡೌನ್​ನಲ್ಲಿ ಕೈಗಾರಿಕೆಗೆ ವಿನಾಯಿತಿ ನೀಡಿರುವುದರಿಂದ, ಮೈಸೂರಿನ‌ ಹೆಬ್ಬಾಳು, ಕೂರ್ಗಳ್ಳಿ, ಮೇಟಗಳ್ಳಿ, ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳು ಇಂದಿನಿಂದ ಕೆಲಸ ಪ್ರಾರಂಭಿಸಿವೆ.

author img

By

Published : May 4, 2020, 7:06 PM IST

Factories
ಕೈಗಾರಿಕೆ

ಮೈಸೂರು: ಲಾಕ್​​​​​ಡೌನ್ ನಿಂದ 40 ದಿನಗಳಿಂದ ಕೆಲಸವಿಲ್ಲದೇ ಪರದಾಡುತ್ತಿದ್ದ ಕಾರ್ಮಿಕರಲ್ಲಿ‌ ಕೊಂಚ ಮಂದಹಾಸ ಮಾಡಿದ್ದು, ಕಟ್ಟಿಹಾಕಿದ್ದ ಕೈಗಳಿಗೆ ದುಡಿಮೆ ಮಾಡಲು ಅವಕಾಶ ಸಿಕ್ಕಿದೆ.

ಹೌದು, ಕೊರೋನ ವೈರಸ್(ಕೋವಿಡ್-19) ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಎರಡು ಹಂತದ ಲಾಕ್ ಡೌನ್ ಪೂರ್ಣಗೊಳಿಸಿ, ಈಗ ಮೂರನೇ ಹಂತದಲ್ಲಿ ಲಾಕ್​​​​​ಡೌನ್ ನಲ್ಲಿ ಕೈಗಾರಿಕೆಗೆ ವಿನಾಯಿತಿ ನೀಡಿರುವುದರಿಂದ ಕಾರ್ಮಿಕ ವಲಯದಲ್ಲಿ ತುಸು ಸಮಾಧಾನ ತಂದಿದೆ. ಆದರೆ, ಕೈಗಾರಿಕೆಗಳು ಚೇತರಿಸಿಕೊಳ್ಳಲು 2 ವರ್ಷ ಬೇಕಂತೆ.

ಕೆಲಸ ಶುರು ಮಾಡಿದ ಕಾರ್ಖಾನೆಗಳು

ಸಾಂಸ್ಕೃತಿಕ ನಗರಿ ಮೈಸೂರು ರೆಡ್ ಜೋನ್​ನಲ್ಲಿ ಇರುವುದರಿಂದ ಕಂಟೇನ್ಮೆಂಟ್ ವಲಯ ಬಿಟ್ಟು ಉಳಿದ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ಸಡಿಲಿಕೆ ನೀಡಿರುವುದರಿಂದ ಕೈಗಾರಿಕಾ ವಲಯದ ಕಾರ್ಮಿಕರಿಗೆ ಕೊಂಚ ನಿರಾಳತೆ ತಂದಿದೆ. ಲಾಕ್ ಡೌನ್ ನಿಂದ 40 ದಿನಗಳಿಂದ ಮನೆಯಲ್ಲಿದ್ದ ಕಾರ್ಖಾನೆ ಕಾರ್ಮಿಕರು ಖುಷಿಯಿಂದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಮೈಸೂರಿನ‌ ಹೆಬ್ಬಾಳು, ಕೂರ್ಗಳ್ಳಿ, ಮೇಟಗಳ್ಳಿ, ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸಣ್ಣ ಕೈಗಾರಿಕೆಗಳು ಹಾಗೂ ಬೃಹತ್ ಕೈಗಾರಿಕೆ ಕಾರ್ಖಾನೆಗಳು ಶೇ.33ರಷ್ಟು ಮಂದಿ ನೌಕರರನ್ನು ಕೆಲಸಕ್ಕೆ ಕರೆಸಿಕೊಂಡಿದೆ. ಇಂದು ಕಾರ್ಖಾನೆಗೆ ಬಂದಿರುವ ಕಾರ್ಮಿಕರು ಕಾರ್ಖಾನೆ ಹಾಗೂ ಯಂತ್ರೋಪಕರಣಗಳ ಸ್ವಚ್ಛಗೊಳಿಸಿ ಕೆಲಸದಲ್ಲಿ ನಿರತರಾಗಿದ್ದಾರೆ.

ಗ್ರೀನ್ ಜೋನ್, ರೆಡ್ ಜೋನ್ ಗಳಲ್ಲಿ ಕೈಗಾರಿಕೆಗಳು ತೆರೆಯಲು ಅವಕಾಶ ನೀಡದಂತೆ, ರೆಡ್ ಜೋನ್ ಗಳಲ್ಲಿ ನಂಜನಗೂಡು ಹಾಗೂ ಕಂಟೇನ್ಮೆಂಟ್ ವಲಯ ಬಿಟ್ಟು ಕೈಗಾರಿಕಾ ಪ್ರದೇಶಗಳಲ್ಲಿ ಇಂದಿನಿಂದ ಕೈಗಾರಿಕೆ ಆರಂಭಗೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.