ಮೈಸೂರು: ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಗೃಹಿಣಿ ತಮ್ಮ ತಂದೆಗೆ ಡೆತ್ ನೋಟ್ ಪೋಸ್ಟ್ ಮಾಡಿ ಪತಿಯ ಮನೆಯಲ್ಲಿ ನೇಣಿಗೆ ಶರಣಾಗಿರುವ ಘಟನೆ ಎನ್.ಆರ್.ಮೊಹಲ್ಲಾದ ಟ್ಯಾಂಕ್ ರೋಡ್ನಲ್ಲಿ ನಡೆದಿದೆ.
ಮೋಹನ್ ಕುಮಾರಿ (32) ಮೃತ ದುರ್ದೈವಿ. ಚಾರ್ಟೆಡ್ ಅಕೌಂಟೆಂಟ್ ಒಬ್ಬರ ಬಳಿ ಸಹಾಯಕಳಾಗಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರಿ 2013ರಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಎಂಬುವರನ್ನ ಪ್ರೀತಿಸಿ ಮದುವೆ ಆಗಿದ್ದರು.
ಮೋಹನ ಕುಮಾರಿ ಸಾಕಷ್ಟು ಸಾಲದ ಸುಳಿಯಲ್ಲಿ ಸಿಲುಕಿದ್ದರು. ಲಾಕ್‌ಡೌನ್ ಹಿನ್ನೆಲೆ ಪತಿಗೂ ಆದಾಯ ಕಡಿಮೆ ಆಗಿತ್ತು. ಇದರಿಂದ ಮನನೊಂದಿದ್ದ ಮೋಹನ್ ಕುಮಾರಿ, ನಾನು ತಂದೆಗೆ ಒಳ್ಳೆಯ ಮಗಳಾಗಿಲ್ಲ, ಗಂಡನಿಗೂ ಒಳ್ಳೆಯ ಪತ್ನಿ ಆಗಿಲ್ಲವೆಂದು ಡೆತ್ ನೋಟ್ನಲ್ಲಿ ಬರೆದು, ಅದನ್ನು ನಾಯ್ಡು ನಗರದಲ್ಲಿರುವ ತಂದೆ ಮಹೇಂದ್ರ ಅವರಿಗೆ ಕಳುಹಿಸಿ ಮನೆಯಲ್ಲಿ ಒಂದು ಡೆತ್ ನೋಟ್ ಪ್ರತಿ ಇಟ್ಟು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
ತಂದೆಗೆ ಡೆತ್ ನೋಟ್ ತಲುಪಿದ ನಂತರ ಎನ್.ಆರ್.ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರೊಂದಿಗೆ ಮಹೇಂದ್ರ ಮಗಳ ಮನೆಗೆ ಬಂದಾಗ ನೇಣುಬಿಗಿದ ಸ್ಥಿತಿಯಲ್ಲಿ ಪುತ್ರಿಯ ಶವ ಪತ್ತೆಯಾಗಿದೆ. ಈ ಸಂಬಂಧ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.