ಮೈಸೂರು : ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ಮೃತಪಟ್ಟ ಪ್ರಾಣಿಗಳ ಅಂತ್ಯಸಂಸ್ಕಾರ ಮಾಡದಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹೊರಡಿಸಿರುವ ಆದೇಶ ಸ್ವಾಗತಾರ್ಹ. ಇದು ಜೀವ ವ್ಯವಸ್ಥೆಯ ಸಮತೋಲನಕ್ಕೆ ಕಾರಣವಾಗುತ್ತದೆ ಎಂದು ವನ್ಯಜೀವಿ ತಜ್ಞರಾದ ಕೃಪಾಕರ್ ಅವರು ಈಟಿವಿ ಭಾರತ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.
ಅರಣ್ಯ ಪ್ರದೇಶದಲ್ಲಿ ಹುಲಿಯನ್ನು ಹೊರತುಪಡಿಸಿ ಸ್ವಾಭಾವಿಕವಾಗಿ ಮೃತಪಟ್ಟ ಪ್ರಾಣಿಗಳ ಅಂತ್ಯಸಂಸ್ಕಾರ ಮಾಡದಂತೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹೊರಡಿಸಿರುವ ಆದೇಶ ಸ್ವಾಗತಾರ್ಹ. ಇದು ಜೀವ ವ್ಯವಸ್ಥೆಯ ಸಮತೋಲನಕ್ಕೆ ಕಾರಣವಾಗುತ್ತದೆ. ಈ ಆದೇಶ ಕಾಡಿಗೆ ಹಾಗೂ ಜೀವ ಪರಿಸರಕ್ಕೆ ಪೂರಕವಾದದ್ದು ಎಂದು ಅವರು ತಿಳಿಸಿದ್ದಾರೆ.
ಕಾಡಿನಲ್ಲಿ ಮೃತಪಟ್ಟ ಪ್ರಾಣಿಗಳ ಶವವನ್ನ ಅಂತ್ಯ ಸಂಸ್ಕಾರ ಮಾಡದೆ ಹಾಗೆ ಬಿಟ್ಟರೆ ಅದು ಕೊಳೆಯುತ್ತದೆ. ಇದರಿಂದ ಹಲವಾರು ಜೀವಾಣುಗಳಿಗೆ ಉಪಯೋಗವಾಗುತ್ತದೆ. ಜೊತೆಗೆ ಅದನ್ನು ಕೆಲವು ಪ್ರಾಣಿಗಳು ತಿನ್ನುತ್ತವೆ. ಇದು ಜೀವ ಪರಿಸರ. ಹುಟ್ಟು-ಸಾವು ನೈಸರ್ಗಿಕ ಪ್ರಕ್ರಿಯೆ. ನಾವು ಜೀವ ಪರಿಸರ ವ್ಯವಸ್ಥೆಯಲ್ಲಿ ಕೈಹಾಕಬಾರದು. ಆದರೆ, ನಾವು ಅದನ್ನು ಮಾಡುತ್ತೇವೆ. ಅದು ತಪ್ಪು ಎಂದರು.
ಅಮೆರಿಕಾದಲ್ಲಿ ಸುಮಾರು 870 ವರ್ಷಗಳಿಂದ ಒಂದು ವ್ಯವಸ್ಥೆ ಚಾಲ್ತಿಯಲ್ಲಿದೆ. ಅದೇನೆಂದರೆ ಪ್ರಿಸರ್ವೇಶನ್ ಆಫ್ ಲ್ಯಾಂಡ್ ಸ್ಕೇಪ್( preservation of landscape) ಅಂದರೆ ಇರುವಂತಹದನ್ನ ಮುಟ್ಟದೆ ಅದು ಇರುವ ರೀತಿಯೇ ಸಂರಕ್ಷಣೆ ಮಾಡುವುದು. ಆದರೆ, ಆ ರೀತಿ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಕಾಡಿನ ನಿರ್ವಹಣೆ, ಜೀವ ವ್ಯವಸ್ಥೆಯನ್ನು ಯಾವ ರೀತಿ ಕಾಪಾಡಬೇಕು ಎಂಬುದರ ಕೊರತೆ ಇದೆ ಎಂದರು.
ಓದಿ: ಒಮಿಕ್ರಾನ್ ನಂತರ ಇದೀಗ XE, ME ರೂಪಾಂತರಿ ಭೀತಿ ; ತುರ್ತು ಸಭೆ ನಡೆಸಿದ ತಾಂತ್ರಿಕ ಸಲಹಾ ಸಮಿತಿ..