ಮೈಸೂರು: ಆಹಾರ ಹುಡುಕುತ್ತಾ ಕಾಡಿನಿಂದ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗವೊಂದು ಜನರಲ್ಲಿ ಆತಂಕ ಉಂಟು ಮಾಡಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ.
ನಾಗರಹೊಳೆ ಅಭಯಾರಣ್ಯದಿಂದ ಆಹಾರ ಅರಸಿ ಕಳೆದ ರಾತ್ರಿ ನಾಡಿಗೆ ಬಂದ ಒಂಟಿ ಸಲಗ, ಇಂದು ಬೆಳಗ್ಗೆ ಬೂದನೂರು ಗ್ರಾಮಕ್ಕೆ ನುಗ್ಗಿತು. ಆನೆಯನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡು ಕಲ್ಲನ್ನು ಎಸೆಯುವ ಮೂಲಕ ಓಡಿಸಲು ಪ್ರಯತ್ನಿಸಿದರು. ಇದರಿಂದ ರೊಚ್ಚಿಗೆದ್ದ ಸಲಗ ಗ್ರಾಮದ ಮನೆಯೊಂದನ್ನು ಹಾಗೂ ಎತ್ತಿನ ಗಾಡಿಯನ್ನು ಪುಡಿಗಟ್ಟಿದೆ.
ಇದನ್ನೂ ಓದಿ: ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗ: ಆತಂಕದಲ್ಲಿ ಗ್ರಾಮಸ್ಥರು
ಇನ್ನೂ ಆನೆ ಗ್ರಾಮದಲ್ಲೇ ಓಡಾಡುತ್ತಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿದ್ದಾರೆ. ಪಟಾಕಿ ಸಿಡಿಸಿ ಒಂಟಿ ಸಲಗವನ್ನು ಕಾಡಿಗಟ್ಟುವ ಪ್ರಯತ್ನ ಮಾಡಲಾಗುತ್ತಿದೆ.