ಮೈಸೂರು : ಮೈಮುಲ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ನ್ಯಾಯಾಲಯವೂ ಸಂಬಂಧಪಟ್ಟವರಿಗೆ ಡಿಸೆಂಬರ್ 4ರಂದು ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರ ಸಲ್ಲಿಸುವಂತೆ ತಿಳಿಸಿದೆ ಎಂದು ವಕೀಲ ಎಮ್ ಟಿ ಕುಮಾರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಮೈಮುಲ್ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಈ ಪ್ರಕ್ರಿಯೆಯನ್ನು ರದ್ದು ಮಾಡಬೇಕೆಂದು ಶಾಸಕ ಸಾ.ರಾ. ಮಹೇಶ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ನ್ಯಾಯಾಲಯವು ವಾದ-ವಿವಾದ ಆಲಿಸಿ, ನೇಮಕಾತಿ ಪ್ರಕ್ರಿಯೆ ನಡೆಸಿದ ವಿವರ, ಕೀ ಉತ್ತರ, ಒಎಮ್ಆರ್ ಪ್ರತಿ, ಪ್ರಶ್ನೆ ಪತ್ರಿಕೆಗಳನ್ನು ವೆಬ್ಸೈಟ್ನಲ್ಲಿ ಹಾಕಿರುವ ಬಗ್ಗೆ ಮಾಹಿತಿಯನ್ನು ಡಿಸೆಂಬರ್ 4ರೊಳಗೆ ಕೋರ್ಟ್ಗೆ ಸಲ್ಲಿಸಬೇಕು ಎಂದಿದೆ.
ಇದನ್ನು ಓದಿ:ತಾಯಿ ಮುಂದೆಯೇ ಬಾಲಕನಿಗೆ ಟ್ಯಾಂಕರ್ ಡಿಕ್ಕಿ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಪರೀಕ್ಷೆ ನಡೆದ ನಂತರ ಕೀ ಉತ್ತರಗಳನ್ನು ಏಕೆ ಪಬ್ಲಿಷ್ ಮಾಡಿಲ್ಲ ಎಂಬ ವಿವರವನ್ನು ಸಲ್ಲಿಸಬೇಕು. ನೇಮಕಾತಿ ಪ್ರಕ್ರಿಯೆಗೆ 187 ಅಭ್ಯರ್ಥಿಗಳಿಗೆ ನೋಟಿಫಿಕೇಶನ್ ಮಾಡಿ, ಉಳಿದ 25 ಹುದ್ದೆಗಳನ್ನು ಹೆಚ್ಚುವರಿಯಾಗಿ ಏಕೆ ತೆಗೆದುಕೊಂಡಿರಿ ಎಂಬ ಬಗ್ಗೆ ವಿವರವನ್ನು ಹೈಕೋರ್ಟ್ ಕೇಳಿದೆ.
ಮೈಮುಲ್ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಡಿ.4ರೊಳಗೆ ಹೈಕೋರ್ಟ್ಗೆ ಸಲ್ಲಿಸಬೇಕೆಂದು ಆದೇಶ ನೀಡಿದೆ. ಡಿಸೆಂಬರ್ 16ರಂದು ಮೈಮುಲ್ ನೇಮಕಾತಿ ಬಗ್ಗೆ ತೀರ್ಪು ನೀಡಲಿದೆ ಎಂದು ಎಮ್ ಟಿ ಕುಮಾರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.