ETV Bharat / state

ಎಲ್ಲ ದೇವಾಲಯಗಳನ್ನು ತೆರವು ಮಾಡುತ್ತಿಲ್ಲ: ಶಾಸಕ ರಾಮದಾಸ್ ಸ್ಪಷ್ಟನೆ

ಮೈಸೂರಿನಲ್ಲಿ ದೇವಾಲಯಗಳ ತೆರವು ವಿಚಾರವಾಗಿ ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟನೆ ನೀಡಿದರು.

MLA Ramadas
ಶಾಸಕ ರಾಮದಾಸ್
author img

By

Published : Sep 11, 2021, 3:53 PM IST

ಮೈಸೂರು: ರಸ್ತೆ ಪಕ್ಕದಲ್ಲಿರುವ ಕೆಲವು ದೇವಾಲಯಗಳು ಹೋಗುತ್ತವೆ. ಕಾನೂನಡಿ ಉಳಿಸಿಕೊಳ್ಳಬಹುದಾದ, ಸ್ಥಳಾಂತರ ಮಾಡಬಹುದಾದ ದೇವಸ್ಥಾನಗಳನ್ನು ತೆರವು ಮಾಡಲ್ಲ ಎಂದು ಶಾಸಕ ಎಸ್.ಎ.ರಾಮದಾಸ್ ಸ್ಪಷ್ಟಪಡಿಸಿದ್ದಾರೆ.

ಶಾಸಕ ರಾಮದಾಸ್ ಸುದ್ದಿಗೋಷ್ಠಿ

ನಗರದ ಖಾಸಗಿ ಹೋಟೆಲ್​​​​ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಪ್ರೀಂ ತೀರ್ಪಿನ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ದೇವಾಲಯಗಳನ್ನು ತೆರವು ಮಾಡುವುದಿಲ್ಲ. ಕಾನೂನಡಿ ಉಳಿಸಿಕೊಳ್ಳಬಹುದಾದ, ಸ್ಥಳಾಂತರ ಮಾಡಬಹುದಾದ ದೇವಾಲಯಗಳನ್ನು ತೆರವು ಮಾಡಲ್ಲ. ಮಸೀದಿ, ಚರ್ಚ್, ಹಿಂದೂ ಮಂದಿರ ಇರಲಿ‌ ಅದೆಲ್ಲವೂ ಅಕಾಮಡೇಟ್ ಮಾಡ್ತೇವಿ ಎಂದರು.

ದೇವಾಲಯ ತೆರವು ವಿಚಾರಕ್ಕೆ ನಿಮ್ಮ ಪಕ್ಷದ ಸಂಸದರು ವಿರೋಧ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೆ ನನ್ನದೇ ಆದ ಮಿತಿ ಇರುತ್ತದೆ. ಅವರ(ಪ್ರತಾಪಸಿಂಹ) ಅಭಿಪ್ರಾಯ ಬೇರೆ, ನನ್ನ ಅಭಿಪ್ರಾಯವೇ ಬೇರೆ. ನಾವುಗಳು ಜನರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಮೈಸೂರು ನಗರದ ಎಲ್ಲ ದೇವಾಲಯಗಳ ತೆರವು ಮಾಡಲ್ಲ. ನಾವು ಜಿಲ್ಲಾಡಳಿತಕ್ಕೆ ಸಹಕಾರ ಕೊಡುತ್ತಿದ್ದೇವೆ ಎಂದೇಳಿದರು.

ದೇವಾಲಯ ತೆರವು ಆದೇಶ ಖಂಡಿಸಿ ಪ್ರತಿಭಟನೆ

ರಸ್ತೆಯಲ್ಲಿರುವ ದೇವಾಲಯಗಳನ್ನು ತೆರವು ಮಾಡಬೇಕೆಂಬ ಜಿಲ್ಲಾಡಳಿತ ಆದೇಶ ಖಂಡಿಸಿ ವಿಶ್ವ ಹಿಂದೂ ಪರಿಷತ್ ಜಿಲ್ಲಾಧಿಕಾರಿ ಕಚೇರಿ ಸಮೀಪ ಪ್ರತಿಭಟನೆ ನಡೆಸಿತು. ಜಿಲ್ಲಾಡಳಿತ ಸುಪ್ರಿಂಕೋರ್ಟ್ ತೀರ್ಪನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ದೇವಾಲಯಗಳನ್ನು ತೆರವು ಮಾಡಲು ಮುಂದಾಗುತ್ತಿದೆ. ಇದು ಜಿಲ್ಲಾಡಳಿತದ ಅಕ್ರಮ ಕಾರ್ಯಾಚರಣೆಯಾಗಿದೆ. ತೆರವು ಮಾಡಿದರೆ ಎಲ್ಲ ಧರ್ಮದ ದೇವಾಲಯಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ಓದಿ: ಸಾರಿಗೆ ನೌಕರರಿಗೆ ಗುಡ್​ನ್ಯೂಸ್.. ನಾಳೆಯಿಂದ ಶುರುವಾಗಲಿದೆ ಕೆಎಸ್ಆರ್​ಟಿಸಿ ಕೋವಿಡ್ ಆಸ್ಪತ್ರೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.