ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ ಯಾರು ಕಾರಣ ಎಂಬುದು ಗೊತ್ತು. ಆದರೆ, ಅವರ ಹೆಸರುಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯೆ ನೀಡಿದರು.
ಓದಿ: ಜೆಡಿಎಸ್-ಬಿಜೆಪಿ 29 ಕಡೆ ಒಳ ಒಪ್ಪಂದ ಮಾಡಿಕೊಂಡಿದ್ದು ನಿಜ: ಹೆಚ್‌ಡಿಕೆಗೆ ಮತ್ತೆ ತಿವಿದ ಸಿದ್ದರಾಮಯ್ಯ
ಸ್ವಪಕ್ಷೀಯರಿಂದಲೇ ತನಗೆ ಸೋಲು ಎಂಬ ಸಿದ್ದರಾಮಯ್ಯ ಹೇಳಿಕೆಗೆ ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕೆಲವರ ಆಸೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಇವರೆಲ್ಲ ವಿರೋಧ ಪಕ್ಷದವರ ಜೊತೆ ಕೈಜೋಡಿಸಿದರು. ಇದರಿಂದಲೇ ನಾನು ಮತ್ತು ಸಿದ್ದರಾಮಯ್ಯ ಸೋಲಬೇಕಾಯಿತು ಎಂದು ಕಾರಣ ನೀಡಿದರು.
ಓದಿ : ನನ್ನ ಸೋಲಿಗೆ ನಮ್ಮ ಪಕ್ಷದವರೇ ಕಾರಣ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
1999 ಚುನಾವಣೆಯಲ್ಲೇ ಸಿದ್ದರಾಮಯ್ಯರಿಗೆ ಹೇಳಿದ್ದೆ. ಅದೇ ಪರಿಸ್ಥಿತಿ ಪುನರಾವರ್ತನೆಯಾಗಿದೆ. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ನಾನು ಸಭೆಗಳಿಗೆ ಹಾಜರಾಗುತ್ತಿಲ್ಲ. ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಬೆನ್ನು ನೋವಾಗಿತ್ತು. ಇದಕ್ಕೆ ಆಪರೇಷನ್ ಮಾಡಲಾಗಿದೆ. ಜೊತೆಗೆ ಕಣ್ಣಿನ ಸಮಸ್ಯೆ ಸಹ ಇದೆ. ಇದರಿಂದ ಜನರ ಬಳಿ ಬಂದರೆ ಅಲರ್ಜಿ ಆಗುತ್ತೆ ಎಂಬ ಕಾರಣಕ್ಕೆ ಬಂದಿರಲಿಲ್ಲ. ಇದಕ್ಕೆ ಬೇರೆ ವಿಶೇಷ ಆರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ನನ್ನ ಮತ್ತು ಸಿದ್ದರಾಮಯ್ಯ ಸಂಬಂಧ ಚೆನ್ನಾಗಿದೆ. ಕೆಲವರು ಹುಳಿ ಹಿಂಡುವ ಕೆಲಸ ಮಾಡುತ್ತಲೇ ಇರುತ್ತಾರೆ. ಇದಕ್ಕೆ ತಲೆ ಕೆಡಿಸಿಕೊಳ್ಳುಬಾರದು ಎಂದು ಬೇಸರ ಹೊರಹಾಕಿದರು.