ಮೈಸೂರು: ನಾವು ಒರಿಜಿನಲ್ ಜೆಡಿಎಸ್, ನಮ್ಮ ಶಾಸಕರೂ ಜೆಡಿಎಸ್, ನಮ್ಮ ಎಂಎಲ್ಸಿ ಜೆಡಿಎಸ್, ದೇವರಿಗೆ ಯಾವುದೇ ಪಕ್ಷ ಗೊತ್ತಿಲ್ಲ ಎಂದು ಪುಟ್ಟರಾಜು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕಿನ ಮೂಗೂರಿನ ಶ್ರೀ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲು ಆಗಮಿಸಿದ್ರು. ಈ ಸಂದರ್ಭದಲ್ಲಿ ತಮ್ಮ ಮನೆ ದೇವರಾದ ತಿಬ್ಬಾದೇವಿ ದೇವಸ್ಥಾನಕ್ಕೆ ಆಗಮಿಸಿದ ಜೆಡಿಎಸ್ನ ಪಾಂಡುಪುರ ಶಾಸಕ ಪುಟ್ಟರಾಜು ಅವರು ಸಚಿವ ಸೋಮಣ್ಣ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಸ್ವಾಗತಿಸಿದಾಗ ಸೋಮಣ್ಣ ಅವರು ತಕ್ಷಣ ಆ ಹೂವಿನ ಹಾರವನ್ನು ಪುಟ್ಟರಾಜುಗೆ ಹಾಕಿದರು.
ನಂತರ ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಸಚಿವರ ಜೊತೆ ಮಾತನಾಡಿದರು. ಸಚಿವರ ಜೊತೆ ನಡೆದುಕೊಂಡ ರೀತಿ ನೋಡಿ ತಾವು ಬಿಜೆಪಿ ಕಡೆಗೆ ಹೋಗುತ್ತಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುಟ್ಟರಾಜು, ನಾನು ಒರಿಜಿನಲ್ ಜೆಡಿಎಸ್, ನಮ್ಮ ಶಾಸಕರು ಜೆಡಿಎಸ್, ನಮ್ಮ ಎಮ್ಎಲ್ಸಿ ಜೆಡಿಎಸ್. ಆದರೆ ದೇವರಿಗೆ ಯಾವ ಪಕ್ಷ ಗೊತ್ತಿಲ್ಲ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಡೆಯಿಂದ ಹಣ ಬಿಡುಗಡೆ ಮಾಡಿಸುತ್ತೇನೆ, ನಮ್ಮ ಪಕ್ಷ ಜೆಡಿಎಸ್ ಆದರೆ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಿಸುತ್ತೇವೆ ಎಂದರು.
ಜೆಡಿಎಸ್ ಶಾಸಕರಾದ ಪುಟ್ಟರಾಜು ತಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್, ಎಮ್.ಎಲ್.ಸಿ ಶ್ರೀಕಂಠೇಗೌಡ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಎಲ್ಲರೂ ಒಟ್ಟಾಗಿ ಊಟ ಮಾಡಿ ಇದರಲ್ಲಿ ರಾಜಕೀಯ ಇಲ್ಲ. ದೇವರ ಕಾರ್ಯ ಎಂದು ಸಚಿವ ಸೋಮಣ್ಣ ಸಮಜಾಯಿಷಿ ನೀಡಿದರು.