ETV Bharat / state

ಭೀಕರ ಬರಗಾಲ.. ಜಾನುವಾರುಗಳ ಬಾಯಾರಿಕೆಗೆ ಉಳಿಸಿದ್ದ ನೀರು ಖಾಲಿ.. - ಭೀಕರ ಬರಗಾಲ

ಜಾನುವಾರುಗಳ ಬಾಯಾರಿಕೆ ನೀಗಲು ಉಳಿಸಿದ್ದ ಕೆರೆ ನೀರು ಸಂಪೂರ್ಣ ಬರಿದಾಗಿದ್ದು,  ಪಶುಗಳ ರಕ್ಷಣೆ ಮಾಡುವುದು ಹೇಗೆ ಎಂಬ ಆತಂಕ ಮೊಸಂಬಾಯನಹಳ್ಳಿ ಗ್ರಾಮಸ್ಥರಲ್ಲಿ ಮನೆಮಾಡಿದೆ.

ಭೀಕರ ಬರಗಾಲ: ಜಾನುವಾರಗಳ ಬಾಯಾರಿಕೆಗೆ ಉಳಿಸಿದ್ದ ನೀರು ಖಾಲಿ
author img

By

Published : Aug 3, 2019, 3:39 PM IST

ಮೈಸೂರು: ಜಾನುವಾರುಗಳ ಬಾಯಾರಿಕೆ ನೀಗಲು ಉಳಿಸಿದ್ದ ಕೆರೆ ನೀರು ಸಂಪೂರ್ಣ ಬರಿದಾಗಿದ್ದು, ನೀರಿಗೆ ಹಾಹಾಕಾರ ಎದುರಾಗಲಿದೆ ಎಂಬ ಆತಂಕ ಮೈಸೂರು ತಾಲೂಕಿನ ಮೊಸಂಬಾಯನಹಳ್ಳಿ ಗ್ರಾಮಸ್ಥರಲ್ಲಿ ಮೂಡಿದೆ.

ಭೀಕರ ಬರಗಾಲ.. ಜಾನುವಾರುಗಳಿಗೆ ಬಾಯಾರಿಕೆ

ಈ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಎದುರಾದ ಭೀಕರ ಬರಗಾಲದಿಂದ ಪಾಠ ಕಲಿತ ಇಲ್ಲಿನ ಜನರು, ಜಾನುವಾರುಗಳಿಗೆ ಕೆರೆ ನೀರನ್ನು ಮೀಸಲಿಟ್ಟು ಅದನ್ನು ಯಾರೂ ಕೂಡ ಗೃಹೋಪಯೋಗಕ್ಕೆ ಬಳಸದಂತೆ ಕಟ್ಟಪ್ಪಣೆ ವಿಧಿಸಿ ಬೋಡ್೯ ಕೂಡ ಹಾಕಿದರು.

ಇದರ ಪರಿಣಾಮವಾಗಿ ನಾಲ್ಕು ವರ್ಷಗಳ ಕಾಲ ಕೆರೆಯಲ್ಲಿ ನೀರಿದ್ದ ಪರಿಣಾಮವಾಗಿ ಬರಗಾಲ ಬಂದರೂ ಈ ಗ್ರಾಮದ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿರಲಿಲ್ಲ. ಇದರಿಂದ ರೈತರಲ್ಲಿ ಹಾಗೂ ಜಾನುವಾರು ಸಾಕಾಣೆ ಮಾಡುತ್ತಿದ್ದ ಜನರಲ್ಲಿ ನೆಮ್ಮದಿ ಇತ್ತು.

ಆದರೀಗ ಆ ನೆಮ್ಮದಿ ದೂರವಾಗುವಂತೆ ಕೆರೆ ತನ್ನ ಬರಿದಾದ ಮುಖ ತೋರಿಸುತ್ತಿದೆ.‌ ನಿಗದಿಯಂತೆ ಮೇ ತಿಂಗಳ ಆರಂಭದಲ್ಲಿಯೇ ಮುಂಗಾರು ಆರಂಭಗೊಳ್ಳಬೇಕಿತ್ತು. ಆದರೆ, ಅಗಸ್ಟ್ ಆರಂಭಗೊಂಡಿದ್ದರೂ ಕೂಡ ಇಂದಿಗೂ ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಬಿಸಿಲಿನ ವಾತಾವರಣವೇ ಇರುವುದರಿಂದ ಕೆರೆಯಲ್ಲಿ ನೀರು ಒಂದೆಡೆ ಆವಿಯಾದರೆ, ಮತ್ತೊಂದೆಡೆ ಜಾನುವಾರುಗಳು ನೀರನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತಿದೆ. ಇದರಿಂದ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ. ಆದರೆ, ಜಾನುವಾರುಗಳಿಗಾಗಿಯೇ ಕೆರೆ ನೀರನ್ನು ಮೀಸಲಿಟ್ಟು, ಕೆಲ ದಿನಗಳಿಂದ ನೀರು ಖಾಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಕೈಕೊಟ್ಟ ಮುಂಗಾರು:

ಕಳೆದ 10 ವರ್ಷಗಳಿಂದ ವಾಡಿಕೆಯಂತೆ ಮುಂಗಾರು ಮಳೆ ಆಗದಿರುವುದು ರೈತಾಪಿ ವರ್ಗದಿಂದ ಬೇಸರ ಮೂಡಿದೆ. ಭೀಕರ ಬರಗಾಲದಿಂದ ಎಚ್ಚೆತ್ತ ಗ್ರಾಮಸ್ಥರು ನಾಲ್ಕು ವರ್ಷಗಳ ಹಿಂದೆ ಜಾನುವಾರುಗಳಿಗಾಗಿ ಮೀಸಲಿಟ್ಟ ಕೆರೆ ನೀರು ಖಾಲಿಯಾಗಿರುವುದರಿಂದ ಮಳೆ ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಇವುಗಳ ರಕ್ಷಣೆ ಹೇಗೆ ಮಾಡುವುದು ಎಂಬ ಚಿಂತೆ ಆವರಿಸಿದೆ.

Intro:ಬರಿದಾದ ಕೆರೆ

Body:ಬರಿದಾದ ಕೆರೆ

Conclusion:ಭೀಕರ ಬರಗಾಲ: ಜಾನುವಾರಗಳ ಬಾಯಾರಿಕೆಗೆ ಉಳಿಸಿದ್ದ ನೀರು ಖಾಲಿ
ಮೈಸೂರು: ಜಾನುವಾರುಗಳ ಬಾಯಾರಿಕೆ ನೀಗಲು ಉಳಿಸಿದ್ದ ಕೆರೆ ನೀರು ಸಂಪೂರ್ಣ ಖಾಲಿಯಾಗಿದ್ದು, ಮುಂಗಾರು ತಡವಾಗಿ ಆರಂಭವಾಗದಿದ್ದರೆ ಎದುರಾಗಲಿದೆ ನೀರಿಗೆ ಹಾಹಾಕಾರ.
ಹೌದು, ಮೈಸೂರು ತಾಲ್ಲೂಕಿನ ಮೊಸಂಬಾಯನಹಳ್ಳಿ ಗ್ರಾಮದಲ್ಲಿ ನಾಲ್ಕು ವರ್ಷಗಳ ಹಿಂದೆ ಎದುರಾದ ಭೀಕರ ಬರಗಾಲದಿಂದ ಪಾಠ ಕಲಿತ ಇಲ್ಲಿನ ಜನರು, ಜಾನುವಾರುಗಳಿಗೆ ಕೆರೆ ನೀರನ್ನು ಮೀಸಲಿಟ್ಟು, ಅದನ್ನು ಯಾರು ಗೃಹೋಪಯೋಗಕ್ಕೆ ಬಳಸದಂತೆ ಕಟ್ಟಾಪ್ಪಣೆ ವಿಧಿಸಿ ಬೋಡ್೯ ಕೂಡ ಹಾಕಿದರು.
ಇದರ ಪರಿಣಾಮವಾಗಿ ನಾಲ್ಕು ವರ್ಷಗಳ ಕಾಲ ಕೆರೆಯಲ್ಲಿ ನೀರಿದ್ದ ಪರಿಣಾಮ, ಬರಗಾಲ ಬಂದರು ಈ ಗ್ರಾಮದ ಜಾನುವಾರುಗಳಿಗೆ ನೀರಿನ ಸಮಸ್ಯೆ.ಎದುರಾಗುತ್ತಿರಲಿಲ್ಲ.‌ಇದರಿಂದ ರೈತರಲ್ಲಿ ಹಾಗೂ ಜಾನುವಾರು ಸಾಕಾಣೆ ಮಾಡುತ್ತಿದ್ದ ಜನರಲ್ಲಿ ನೆಮ್ಮದಿ ಇತ್ತು.
ಆದರೀಗ ಆ ನೆಮ್ಮದಿ ದೂರವಾಗುವಂತೆ ಕೆರೆ ತನ್ನ ಬರಿದಾದ ಮುಖ ತೋರಿಸುತ್ತಿದೆ.‌ ನಿಗದಿಯಂತೆ ಮೇ ತಿಂಗಳ ಆರಂಭದಲ್ಲಿಯೇ ಮುಂಗಾರು ಆರಂಭಗೊಳ್ಳಬೇಕಾಯಿತು.ಆದರೆ ಆಗಸ್ಟ್ ಆರಂಭಗೊಂಡಿದ್ದರು. ಇಂದಿಗೂ ಮುಂಗಾರು ಮಳೆ ಸಮರ್ಪಕವಾಗಿ ಆಗದೇ ಬಿಸಿಲಿನ ವಾತಾವರಣವೇ ಇರುವುದರಿಂದ ಕೆರೆಯಲ್ಲಿ ನೀರು ಒಂದೆಡೆ ಆವಿಯಾದರೆ, ಮತ್ತೊಂದೆಡೆ ಜಾನುವಾರುಗಳು ನೀರನ್ನು ಕುಡಿದು ದಾಹ ನೀಗಿಸಿಕೊಳ್ಳುತ್ತಿದೆ. ಇದರಿಂದ ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ.
ಆದರೆ ಜಾನುವಾರುಗಳಿಗಾಗಿಯೇ ಕೆರೆ ನೀರನ್ನು ಮೀಸಲಿಟ್ಟು , ಕೆಲ ದಿನಗಳಿಂದ ನೀರು ಖಾಲಿಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೈಕೊಟ್ಟ ಮುಂಗಾರು: ಕಳೆದ 10 ವರ್ಷಗಳಿಂದ ವಾಡಿಕೆಯಂತೆಯೂ ಮುಂಗಾರು ಮಳೆ ಆಗದಿರುವುದು ರೈತಾಪಿ ವರ್ಗದಿಂದ ಬೇಸರ ಮೂಡಿದೆ. ಭೀಕರ ಬರಗಾಲದಿಂದ ಎಚ್ಚೆತ್ತ ಗ್ರಾಮಸ್ಥರು ನಾಲ್ಕು ವರ್ಷಗಳ ಹಿಂದೆ ಜಾನುವಾರುಗಳಿಗಾಗಿ ಮೀಸಲಿಟ್ಟ ಕೆರೆ ನೀರು ಖಾಲಿಯಾಗಿರುವುದರಿಂದ ಮಳೆ ಬಾರದೇ ಇದ್ದರೆ ಮುಂದಿನ ದಿನಗಳಲ್ಲಿ ಇವುಗಳ ರಕ್ಷಣೆ ಹೇಗೆ ಮಾಡುವುದು ಎಂಬ ಚಿಂತೆ ಆವರಿಸಿದೆ.
ಕಬಿನಿ ಜಲಾಶಯಗಳ ನಾಲೆಗಳಿಗೆ ಹರಿಯಿಸುವ ನೀರಿನಲ್ಲಿ ಕೆರೆಗಳಿಗೂ ಸ್ವಲ್ಪ ಹರಿಸಿದರೆ.ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಕುರಿಗಾಹಿಗಳು.
ಈ ಸಂಬಂಧ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದ ರೈತ ನಂಜಪ್ಪ, ತಮ್ಮ ಸಂಕಟವನ್ನು ತೆರೆದಿಟ್ಟರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.