ಮೈಸೂರು: ಇಲ್ಲಿಯವರೆಗೆ ಬೇರೆ ಅಭ್ಯರ್ಥಿಗಳಿಗೆ ಮತ ಹಾಕುತ್ತಿದ್ದೆ. ಇದೇ ಮೊದಲ ಬಾರಿಗೆ ನನ್ನ ಮತವನ್ನು ನನ್ನ ಹೆಸರಿನ ಮುಂದೆ ಹಾಕಿಕೊಂಡೆ. ಬಹಳ ಖುಷಿ ಅನ್ನಿಸುತ್ತಿದೆ ಎಂದು ಕೃಷ್ಣರಾಜ ಮತ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀವತ್ಸ ಅವರು ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡರು. ಇದೇ ವೇಳೆ ಮೊದಲ ಬಾರಿಗೆ ಮತ ಚಲಾಯಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ ವಾಗೇಶ್ ಎನ್ನುವವರು ಕೂಡ ತಮ್ಮ ಸಂತಸವನ್ನು ಹಂಚಿಕೊಂಡರು.
ಮತಗಟ್ಟೆ ಸಂಖ್ಯೆ 139ರ ಸರ್ಕಾರಿ ಸಂಸ್ಕೃತ ಪಾಠಶಾಲೆಯಲ್ಲಿ ಮತ ಚಲಾಯಿಸಿದ ಶ್ರೀವತ್ಸ, ನಾನು ಇಲ್ಲಿಯವರೆಗೆ ಬೇರೆಯವರಿಗೆ ಮತ ಹಾಕುತ್ತಿದ್ದೆ. ಆ ಅನುಭವ ಬೇರೆ ಇತ್ತು. ಇದೇ ಮೊದಲ ಬಾರಿಗೆ ನನ್ನ ಹೆಸರಿನ ಮುಂದೆ ನಾನೇ ಮತ ಹಾಕಿಕೊಂಡಿದ್ದು ರೋಮಾಂಚನ ಅನ್ನಿಸುತ್ತಿದೆ. ಇದು ಹೊಸ ಅನುಭವ. ಕೆಲವು ಕಡೆ ಮತ ಕೇಂದ್ರಗಳಲ್ಲಿ ಕತ್ತಲೆಯಿದ್ದು, ಅದನ್ನು ಸರಿಪಡಿಸುವಂತೆ ಹೇಳಿದ್ದೇನೆ ಎಂದರು.
ಮೊದಲ ಬಾರಿ ಮತ ಚಲಾಯಿಸಿದ ಯುವಕ: ಇದೇ ಮೊದಲ ಬಾರಿಗೆ ನಾನು ಮತ ಚಲಾಯಿಸಿದೆ. ಮತದಾನ ಮಾಡಿದ್ದು ಖುಷಿಯಾಗಿದೆ. ಮೊದಲ ಬಾರಿಗೆ ಮತ ಚಲಾಯಿಸಲು ಬಂದಿದ್ದರಿಂದ ಸ್ವಲ್ಪ ಗೊಂದಲ, ಮತ್ತು ಭಯವಾಯಿತು. ಆದರೆ, ಚುನಾವಣಾ ಸಿಬ್ಬಂದಿ ಸಹಾಯ ಮಾಡಿದರು. ಮೊದಲು ಸ್ಕೂಲ್ ಮತ್ತು ಕಾಲೇಜುಗಳಲ್ಲಿ ಮತ ಚಲಾಯಿಸುತ್ತಿದ್ದೆ. ಆದರೆ, ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ್ದು ಖುಷಿಯಾಗಿದೆ ಎಂದು ಇಂಜಿನಿಯರಿಂಗ್ ವಿದ್ಯಾರ್ಥಿ ವಾಗೇಶ್ ತಮ್ಮ ಖುಷಿ ಹಂಚಿಕೊಂಡರು.
ಇದನ್ನೂ ಓದಿ: ಆ್ಯಂಬುಲೆನ್ಸ್ನಲ್ಲಿ ಬಂದು ಸ್ಟ್ರೆಚರ್‌ನಲ್ಲಿ ಸಾಗಿ ಮತ ಚಲಾಯಿಸಿದ ವ್ಯಕ್ತಿ- ವಿಡಿಯೋ