ETV Bharat / state

ಮುಂದಿನ ಸೆಪ್ಟೆಂಬರ್ ಒಳಗೆ ಮೈಸೂರಿನಲ್ಲಿ ವಿಷ್ಣು ಸ್ಮಾರಕ ಪೂರ್ಣ: ಅನಿರುದ್ಧ ವಿಶ್ವಾಸ - Vishnuvardhan family visits of halalu village of Mysore Taluk

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ 12 ವರ್ಷ. ಅವರ 12 ನೇ ವರ್ಷದ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ಹಾಲಾಳು ಗ್ರಾಮಕ್ಕೆ ಅವರ ಕುಟುಂಬಸ್ಥರು ಭೇಟಿ ನೀಡಿ ವಿಷ್ಣುವರ್ಧನ್​ ಅವರನ್ನು ಸ್ಮರಿಸಿದರು.

ಅನಿರುದ್ಧ್
ಅನಿರುದ್ಧ್
author img

By

Published : Dec 30, 2021, 5:11 PM IST

ಮೈಸೂರು: ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕ ಮುಂದಿನ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳಲಿದೆ ಎಂದು ವಿಷ್ಣುವರ್ಧನ್ ಅಳಿಯ ಅನಿರುದ್ಧ ತಿಳಿಸಿದ್ದಾರೆ.

ಇಂದು ಸಾಹಸಸಿಂಹ ವಿಷ್ಣುವರ್ಧನ್ ರವರು ನಮ್ಮನ್ನು ಅಗಲಿ 12 ವರ್ಷ. ಅವರ 12 ನೇ ವರ್ಷದ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಿಷ್ಣು ಸ್ಮಾರಕದ ಬಳಿ ವಿಷ್ಣುವರ್ಧನ್ ರವರ ಪತ್ನಿ ಭಾರತಿ, ಅಳಿಯ ಅನಿರುದ್ಧ ಹಾಗೂ ಅಭಿಮಾನಿಗಳು ಸೇರಿ ಪೂಜೆ ನೇರವೇರಿಸಿದರು.

ವಿಷ್ಣುವರ್ಧನ್ ರವರ 12 ನೇ ವರ್ಷದ ವರ್ಷದ ಪುಣ್ಯ ಸ್ಮರಣೆ

ಈ ಸಂಧರ್ಭದಲ್ಲಿ ನಟ ಅನಿರುದ್ಧ ಮಾತನಾಡಿ, ಮುಂದಿನ ಸೆಪ್ಟೆಂಬರ್ ಒಳಗೆ ದಾದ ವಿಷ್ಣು ಅವರ ಸ್ಮಾರಕ ಪೂರ್ಣಗೊಳ್ಳಲಿದೆ. ಈಗಾಗಲೇ ಕಾಮಗಾರಿ ಕೆಲಸ ಪ್ರಾರಂಭವಾಗಿದೆ. ಸರ್ಕಾರದಿಂದಲೂ ನಮಗೆ ಬೆಂಬಲ ದೊರೆಯುತ್ತಿದೆ. ಹಾಗಾಗಿ ಮುಂದಿನ ಸೆಪ್ಟೆಂಬರ್ ಒಳಗೆ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

ಈ ಸ್ಮಾರಕದಲ್ಲಿ ವಿಷ್ಣು ದಾದಾ ರವರ 700 ಕ್ಕೂ ಅಧಿಕ ಫೋಟೋಗಳನ್ನು ಬಳಸಿ ಫೋಟೋ ಗ್ಯಾಲರಿ ಮಾಡಲಾಗುವುದು. ಜೊತೆಗೆ ರಂಗಭೂಮಿ ಶಿಬಿರಗಳು ಇಲ್ಲಿ ನಡೆಯುತ್ತವೆ. ಹಾಗೆ ಇನ್ನೂ ಅನೇಕ ಆಶ್ಚರ್ಯಕರ ವಿಚಾರಗಳು ಇವೆ ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ.

ಇಲ್ಲಿ ಇಂಡಿಯನ್ ಫಿಲಂ ಟೆಲಿವಿಷನ್ ಇನ್ಸ್ಟಿಟ್ಯೂಟ್ ಶಾಖೆಯನ್ನು ಪ್ರಾರಂಭಿಸುವ ಪ್ರಯತ್ನವು ನಡೆಯುತ್ತಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಬಂದ್ ವಿಚಾರವಾಗಿ ಮಾತನಾಡಿ, ಬಂದ್ ಎಲ್ಲದಕ್ಕೂ ಪರಿಹಾರ ಅಲ್ಲ. ಆದರೆ, ನಮ್ಮ ವಿಚಾರ, ಹೋರಾಟದ ವಿಷಯ ಬಂದ್ ನಿಂದ ಎಲ್ಲರಿಗೂ ತಿಳಿಯುತ್ತದೆ. ಆದರೆ, ಇದರಿಂದ ತುಂಬಾ ಜನರಿಗೆ ನಷ್ಟವಾಗುತ್ತದೆ. ಯಾವುದೇ ಹೋರಾಟಕ್ಕೆ ಬಂದ್ ಉತ್ತರವಲ್ಲ ಬೇರೆ ರೀತಿ ಹೋರಾಟ ಮಾಡಬೇಕು.ಈ ರೀತಿ ಬಂದ್ ಬೇಡ ಎಂದು ಅಭಿಪ್ರಾಯಪಟ್ಟರು.

ಕನ್ನಡ ಚಿತ್ರರಂಗದಲ್ಲಿ ನಾಯಕತ್ವದ ಕೊರತೆ ಇದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇಂದು ಬಹಿರಂಗವಾಗಿ ಎಲ್ಲರೂ ನಿಂತು ಹೋರಾಟ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಕೋವಿಡ್, ಮತ್ತೊಂದು ಕಡೆ ಕರ್ಫ್ಯೂ ಇದೆ. ಇಂತಹ ಸಂದರ್ಭಗಳಲ್ಲಿ ಒಂದೇ ವೇದಿಕೆಯಲ್ಲಿ ನಿಂತು ಹೋರಾಟದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ.

ಹಾಗಾಗಿ ಸಾಮಾಜಿಕ ಜಾಲತಾಣಗಳ ಮುಖಾಂತರ ನಟರು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳುತ್ತಿದ್ದಾರೆ. ಯಾವಾಗಲೂ ಕರ್ನಾಟಕ ಚಿತ್ರರಂಗ ಒಂದೇ ಅದು ಯಾವಾಗಲೂ ಕನ್ನಡ ಅಭಿಮಾನಿಗಳ ಜೊತೆಯಲ್ಲಿ ಕರ್ನಾಟಕದ ಜೊತೆಯಲ್ಲಿ ಒಂದಾಗಿ‌ ಇರುತ್ತದೆ ಎಂದರು.

ಕನ್ನಡ ಚಿತ್ರರಂಗದ ನಾಯಕರಾಗಿ ಶಿವಣ್ಣ ಇದ್ದಾರೆ. ಅವರು ಹಿರಿಯ ಕಲಾವಿದರು. ಕಲಾವಿದರ ಸಂಘ, ಮತ್ತು ವಾಣಿಜ್ಯ ಮಂಡಳಿ ಸೇರಿ ಅವರ ಜೊತೆ ಮಾತನಾಡಿ ಅವರನ್ನು ನಾಯಕರನ್ನಾಗಿ ಮಾಡಿದರೆ ನಮಗೆ ಸಂತೋಷ ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.