ETV Bharat / state

ಪ್ರವಾಹ ಪೀಡಿತ ಸ್ಥಳಗಳಿಗೆ ಬಿ.ವೈ ವಿಜಯೇಂದ್ರ ಭೇಟಿ

ಭಾರಿ ಮಳೆಗೆ ನಿನ್ನೆ ಕುಸಿತಗೊಂಡಿದ್ದ ಮೈಸೂರಿನ ಅಗ್ನಿಶಾಮಕ ದಳದ ಕಟ್ಟಡದ ಸ್ಥಳಕ್ಕೆ ಸಿಎಂ ಬಿಎಸ್​ವೈ  ಪುತ್ರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲಿಸಿದ್ದಾರೆ.

author img

By

Published : Aug 10, 2019, 11:20 AM IST

ಪ್ರವಾಹ ಪೀಡಿತ ಸ್ಥಳಗಳಿಗೆ ಪುತ್ರ ವಿಜಯೇಂದ್ರ ಭೇಟಿ

ಮೈಸೂರು: ಭಾರಿ ಮಳೆಗೆ ನಿನ್ನೆ(ಶುಕ್ರವಾರ) ಕುಸಿತಗೊಂಡಿದ್ದ ನಗರದ ಅಗ್ನಿಶಾಮಕ ದಳ ಕಟ್ಟಡದ ಸ್ಥಳಕ್ಕೆ ಸಿಎಂ ಬಿಎಸ್​ವೈ ಪುತ್ರ, ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಿನ್ನೆ ಸುರಿದ ಧಾರಾಕಾರ ಮಳೆಗೆ ನಗರದ ಸರಸ್ವತಿ ಪುರಂನಲ್ಲಿರುವ ಅಗ್ನಿಶಾಮಕ ದಳದ ಮುಖ್ಯ ಕಚೇರಿ ಮುಂಭಾಗದ ನಾಮಫಲಕದ ಗೋಡೆ ಕುಸಿದಿತ್ತು.

ಪ್ರವಾಹ ಪೀಡಿತ ಸ್ಥಳಗಳಿಗೆ ಪುತ್ರ ವಿಜಯೇಂದ್ರ ಭೇಟಿ

ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಸೂಚನೆ ಹಿನ್ನೆಲೆಯಲ್ಲಿ ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ನೆರೆ ಪ್ರದೇಶಗಳಲ್ಲಿ ವಿಜಯೇಂದ್ರ ನೇತೃತ್ವದ ತಂಡ ಪ್ರವಾಸ ಮಾಡಲಿದೆ.

ಹುಣಸೂರು ತಾಲೂಕಿನ ವೀರನಹೊಸಹಳ್ಳಿಯ ಅಬ್ಬೂರು ಹಾಡಿಯಲ್ಲಿ ಮೃತಪಟ್ಟಿದ್ದ ಗಣೇಶ್ ಕುಟುಂಬಕ್ಕೆ ಸಾಂತ್ವನ ನಂತರ ಮುಳುಗಡೆ ಆಗಿರುವ ಹೈರಿಗೆ ಸೇತುವೆ, ಕಬಿನಿ ಜಲಾಶಯದ ಪ್ರದೇಶಗಳಿಗೆ ಭೇಟಿ ನೀಡಲಿರುವ ವಿಜಯೇಂದ್ರ ಅಲ್ಲಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂಜನಗೂಡಿನ ನೆರೆ ಪೀಡಿತ ಭಾಗಗಳಿಗೆ ಭೇಟಿ ನೀಡಿ, ನಂತರ ಚಾಮರಾಜನಗರಕ್ಕೆ ತೆರಳಲಿದ್ದಾರೆ. ಸ್ಥಳಿಯ ಶಾಸಕರಾದ ನಾಗೇಂದ್ರ ಹಾಗೂ ಗುಂಡ್ಲುಪೇಟೆ ಶಾಸಕ ನಿರಂಜನ್ ಸಾಥ್​ ನೀಡಲಿದ್ದಾರೆ.

Intro:ಮೈಸೂರು: ಮಳೆ ಹಾನಿಯಿಂದ ನೆನ್ನೆ ಕುಸಿತವಾಗಿದ್ದ ಆಗ್ನಿಶಾಮಕ ದಳದ ಕಟ್ಟಡಕ್ಕೆ ಸಿಎಂ ಪುತ್ರ ಶಾಸಕರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Body:

ನೆನ್ನೆ ಧಾರಕಾರ ಮಳೆಗೆ ನಗರದ ಸರಸ್ವತಿ ಪುರಂನಲ್ಲಿರುವ ಅಗ್ನಿಶಾಮಕ ದಳದ ಮುಖ್ಯ ಕಚೇರಿಯ ಮುಂಭಾಗದ ನಾಮಫಲಕದ ಗೋಡೆ ಕುಸಿದಿದ ಹಿನ್ನಲೆಯಲ್ಲಿ ಇಂದು ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಸ್ಥಳಿಯ ಶಾಸಕರಾದ ನಾಗೇಂದ್ರ ಹಾಗೂ ಗುಂಡ್ಲುಪೇಟೆ ಶಾಸಕ ನಿರಂಜನ್ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಿಜೇಂದ್ರ ನೇತೃತ್ವದಲ್ಲಿ ಬಿಜೆಪಿ ತಂಡ ಪ್ರವಾಸ:- ಮುಖ್ಯಮಂತ್ರಿ ಬಿಎಸ್‌. ಯಡಿಯೂರಪ್ಪ ಆದೇಶದ ಹಿನ್ನಲೆಯಲ್ಲಿ ಚಾಮರಾಜ ನಗರ ಹಾಗೂ ಮೈಸೂರು ಜಿಲ್ಲೆಯ ನೆರೆ ಪ್ರದೇಶಗಳಿಗೆ ಪ್ರವಾಸ ಮಾಡಲಿದ್ದು ಬೆಳಿಗ್ಗೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯ ಅಬ್ಬೂರು ಹಾಡಿಯಲ್ಲಿ ನೆನ್ನೆ ಮೃತಪಟ್ಟಿದ್ದ ಗಣೇಶ್ ಕುಟುಂಬಕ್ಕೆ ಸಂತ್ವಾನ ನಂತರ ಮುಳುಗಡೆ ಆಗಿರುವ ಹೈರಿಗೆ ಸೇತುವೆ ವಿಕ್ಷಣೆ ನಂತರ ಕಬಿನಿ ಜಲಾಶಯದ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ನಂಜನಗೂಡಿನ ನೆರೆ ಪೀಡಿತ ಭಾಗಗಳಿಗೆ ಭೇಟಿ ನೀಡಿ, ನಂತರ ಚಾಮರಾಜನಗರಕ್ಕೆ ತೆರಳಲಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.