ಮೈಸೂರು: ಕನ್ನಡಿಗರಿಗೆ ಉದ್ಯೋಗ ಹಾಗೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬೇಕು ಎಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ನಡೆದ ಘಟನೆಯಿಂದ ಸುತ್ತಲಿದ್ದ ಸಾರ್ವಜನಿಕರು ಬಿದ್ದುಬಿದ್ದು ನಕ್ಕ ಪ್ರಸಂಗ ನಡೆಯಿತು.
ರೈಲ್ವೆ ನಿಲ್ದಾಣ ಕಚೇರಿ ಸಮೀಪ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಕನ್ನಡಿಗರಿಗೆ ಉದ್ಯೋಗ ಹಾಗೂ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬೇಕು ಎಂದು ಘೋಷಣೆ ಕೂಗುತ್ತಿದ್ದರು. ಈ ವೇಳೆಯಲ್ಲಿ ವಾಟಾಳ್ ನಾಗರಾಜ್ ಅವರು 'ಮಧ್ಯಂತರ ಚುನಾವಣೆ' ಎನ್ನುತ್ತಾರೆ. ಆಗ ಪ್ರತಿಭಟನಾ ಘೋಷಣೆ ಕೂಗುತ್ತಿದ್ದ ಸಹಪಾಠಿ 'ಮಧ್ಯಂತರ ಚುನಾವಣೆ ಬೇಡ' ಎನ್ನುತ್ತಾರೆ. ಇದರಿಂದ ತಾಳ್ಮೆ ಕಳೆದುಕೊಂಡ ವಾಟಾಳ್, ನನ್ನ 50 ವರ್ಷದ ಹೋರಾಟದಲ್ಲಿ ಯಾವತ್ತೂ ಹೀಗೆ ಆಗಿರಲಿಲ್ಲ ಎಂದು ಹೇಳುತ್ತಿದ್ದಂತೆ ನೆರೆದಿದ್ದ ಸಾರ್ವಜನಿಕರು ಬಿದ್ದು ಬಿದ್ದು ನಕ್ಕರು.
ನಂತರ ಪ್ರತಿಭಟನೆ ಮುಂದುವರಿಸಿದ ವಾಟಾಳ್ ನನಗೆ ಮಧ್ಯಂತರ ಚುನಾವಣೆ ಬೇಕು, ನಿನಗೆ ಬೇಡವೆಂದು ಸಹಪಾಠಿಗೆ ಹೇಳಿದ್ದಾರೆ.