ETV Bharat / state

ಮಠಾಧೀಶರು ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮದೇ ಸಮುದಾಯದ ಬಡ ಮಕ್ಕಳಿಗೆ ಎಷ್ಟು ಉಚಿತ ಸೀಟ್ ನೀಡಿದ್ದಾರೆ : ವಾಟಾಳ್

ಯಡಿಯೂರಪ್ಪ ಅಧಿಕಾರಕ್ಕೆ ಬಂದು ಆಡಳಿತ ಕೇಂದ್ರವನ್ನ ಅಪವಿತ್ರ ಮಾಡಿದ್ದಾರೆ. ಕೇಂದ್ರವನ್ನ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಮಠಾಧಿಪತಿಗಳನ್ನ ಬೀದಿಗೆ ತಂದಿದ್ದಾರೆ. ಆದರೆ,ಮಠಾಧಿಪತಿಗಳು, ರಾಜಕಾರಣಿಗಳಿಗಾಗಿ ಬೀದಿಗೆ ಬರಬಾರದು..

ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು

author img

By

Published : Jul 21, 2021, 3:29 PM IST

ಮೈಸೂರು : ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಅವರ ಪರವಾಗಿ ನಿಂತಿರುವ ಶ್ರೀಮಂತ ಮಠಗಳು ತಮ್ಮ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಬಡವರು, ಲಿಂಗಾಯತ, ವೀರಶೈವ ಬಡ ವಿದ್ಯಾರ್ಥಿಗಳಿಗೆ ಎಷ್ಟು ಸೀಟ್ ಉಚಿತವಾಗಿ ಕೊಟ್ಟಿದ್ದಾರೆ ಎಂಬುವುದನ್ನ ಬಹಿರಂಗ ಪಡಿಸಿಲಿ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದ್ದಾರೆ.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು..

ನಗರದ ಹಾಡ್ವಿಂಗ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಠಾಧೀಶರು ರಾಜಕಾರಣಿಗಳ ಪರವಾಗಿ ಬೀದಿಗೆ ಬಂದಿರಲಿಲ್ಲ. ಅವರು ಬೀದಿಗೆ ಬರಲು ಆತ್ಮವೇ ಒಪ್ಪಲ್ಲ. ಆದರೆ,ಇಂದು ಬೀದಿಗೆ ಬಂದಿದ್ದಾರೆ. ಯಡಿಯೂರಪ್ಪ ಆಡಳಿತದಲ್ಲಿ ಮಠಗಳನ್ನ ಅಪವಿತ್ರ ಮಾಡಿದ್ದಾರೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ನಿಜಲಿಂಗಪ್ಪ, ಬಿ‌.ಡಿ. ಜತ್ತಿ, ವೀರೇಂದ್ರ ಪಾಟೀಲ್ ಅಧಿಕಾರ ಮಾಡಿದರು. ಆದರೆ, ಅವರು ಯಾವತ್ತೂ ಮಠಗಳನ್ನು ಉಪಯೋಗಿಸಿಕೊಂಡಿಲ್ಲ. ವೀರೇಂದ್ರ ಪಾಟೀಲ್ ಅಧಿಕಾರ ಕಳೆದುಕೊಳ್ಳುವಾಗ ಮಠಾಧೀಶರು ಬರಲಿಲ್ಲ, ಯಾವ ಮಠಾಧೀಶರನ್ನ ಅವರು ಕೇಳಲಿಲ್ಲ. ಅವರೊಬ್ಬ ಆದರ್ಶ ಮುಖ್ಯಮಂತ್ರಿ.

ಯಡಿಯೂರಪ್ಪ ಅಧಿಕಾರಕ್ಕೆ ಬಂದು ಆಡಳಿತ ಕೇಂದ್ರವನ್ನ ಅಪವಿತ್ರ ಮಾಡಿದ್ದಾರೆ. ಕೇಂದ್ರವನ್ನ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಮಠಾಧಿಪತಿಗಳನ್ನ ಬೀದಿಗೆ ತಂದಿದ್ದಾರೆ. ಆದರೆ,ಮಠಾಧಿಪತಿಗಳು, ರಾಜಕಾರಣಿಗಳಿಗಾಗಿ ಬೀದಿಗೆ ಬರಬಾರದು ಎಂದು ಕುಟುಕಿದರು.

ಇದನ್ನೂ ಓದಿ : ರಾಜ್ಯ ರಾಜಕೀಯ ಬೆಳವಣಿಗೆ ಕುರಿತು ಕೋಡಿಶ್ರೀ ನುಡಿದ್ರು ಮಹತ್ವದ ಭವಿಷ್ಯ

ವೀರಶೈವ-ಲಿಂಗಾಯತ ವಿಶ್ವದಲ್ಲಿ ಅದ್ಭುತ ಸಮಾಜ. ಬಸವ ತತ್ವ ಸಿದ್ಧಾಂತ ವಿಶ್ವಕ್ಕೆ ದಾರಿ ದೀಪ. ಆದರೆ, ಸಮಾಜವನ್ನ ಕತ್ತಲೆಯಲ್ಲಿ ಯಡಿಯೂರಪ್ಪ ಇಡುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸರ್ಕಾರ ಅಸ್ಥಿರತೆಗೆ ಬಂದು ಆರು ತಿಂಗಳಾಯಿತು. ಈಗ ತುತ್ತತುದಿಗೆ ಬಂದಿದೆ. ಸಿಎಂ ಬದಲಾವಣೆ ಒಂದು ವರ್ಗ ತೀವ್ರ ಒತ್ತಾಯ ಮಾಡುತ್ತಿದೆ. ಬಿಎಸ್​​ವೈ ಸಿಎಂ ಆಗಿ ಉಳಿಯಲು ದೊಡ್ಡ ಸರ್ಕಸ್ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಡಳಿತ ಕುಸಿತು ಬಿದ್ದಿದೆ ಎಂದು ರಾಜ್ಯಪಾಲರಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು. ಯಡಿಯೂರಪ್ಪ ಸಿಎಂ ಆಗಿ ಇರಲು ಅರ್ಹತೆ ಇಲ್ಲ. ರಾಜ್ಯದ ಹಿತದೃಷ್ಟಿಯಿಂದ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.