ETV Bharat / state

ಎಣ್ಣೆ ಬೆಲೆ ಇಳಿಸದೇ ಹೋದರೆ ಸರ್ಕಾರಕ್ಕೆ ಮದ್ಯಾಭಿಷೇಕ.. ಕುಡುಕರ ಕಷ್ಟಕ್ಕೂ ಕರಗಿದ ಕನ್ನಡ ಕಾವಲಿಗ ವಾಟಾಳ್.. - Vatal Nagaraj urged to reduce alcohol price news

ಬೆಲೆ ಏರಿಕೆ ಮಾಡಿ ಜನರನ್ನ ಮತ್ತಷ್ಟು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಕಾಸರಗೂಡಿನಲ್ಲಿ ಕೇರಳ ಸರ್ಕಾರ ಕನ್ನಡದ ಹೆಸರಗಳನ್ನು ಬದಲಾವಣೆ ಮಾಡಿದರೆ, ಕೇರಳ ಹಾಗೂ ಕರ್ನಾಟಕ ರಸ್ತೆ ಬಂದ್ ಮಾಡಲಾಗುವುದು. ಕನ್ನಡ ಹೆಸರುಗಳು ಹಾಗೆಯೇ ಉಳಿಯಬೇಕು. ಇಲ್ಲವಾದರೆ ಉಗ್ರ ಹೋರಾಟ..

Vatal Nagaraj urged to reduce alcohol price
ಗುಂಡು ಪ್ರಿಯರ ಪರ ವಾಟಾಳ್​ ಬ್ಯಾಟಿಂಗ್
author img

By

Published : Jun 27, 2021, 3:29 PM IST

ಮೈಸೂರು : ಮುಖ್ಯಮಂತ್ರಿ ‌ಬಿ‌ ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಒಂದು ತಿಂಗಳೊಳಗೆ ಪತನವಾಗಲಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ. ಬೆಲೆ ಏರಿಕೆ ಖಂಡಿಸಿ ಹಾರ್ಡಿಂಗ್ ವೃತ್ತದ ಬಳಿ ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಿ ವಿನೂತನ ಪ್ರತಿಭಟನೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಭ್ರಷ್ಟರಲ್ಲಿ ದೊಡ್ಡ ಭ್ರಷ್ಟಚಾರಿ ಯಡಿಯೂರಪ್ಪ ಅವರು. ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ಇದ್ದರೂ, ಮತ್ತೊಂದು ಪ್ರತಿಮೆ ಮಾಡಲು ಹೊರಟಿದ್ದಾರೆ. ಇದನ್ನು ಮಾಡಿದರೆ ಬಸವಣ್ಣನವರಿಗೆ ಅವಮಾನ ಮಾಡಿದಂತೆ ಎಂದು ಕಿಡಿಕಾರಿದರು.

ಗುಂಡು ಪ್ರಿಯರ ಪರ ವಾಟಾಳ್​ ಬ್ಯಾಟಿಂಗ್

ದೇಶದಲ್ಲಿ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಿದೆ. ಕೊರೊನಾದಿಂದ ಜನರು ತತ್ತರಿಸಿದ್ದಾರೆ. ಇದರ ನಡುವೆ ಬೆಲೆ ಏರಿಕೆ ಮಾಡಿ ಜನರನ್ನ ಮತ್ತಷ್ಟು ಸಂಕಷ್ಟಕ್ಕೀಡು ಮಾಡಲಾಗುತ್ತಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಕಾಸರಗೂಡಿನಲ್ಲಿ ಕೇರಳ ಸರ್ಕಾರ ಕನ್ನಡದ ಹೆಸರಗಳನ್ನು ಬದಲಾವಣೆ ಮಾಡಿದರೆ, ಕೇರಳ ಹಾಗೂ ಕರ್ನಾಟಕ ರಸ್ತೆ ಬಂದ್ ಮಾಡಲಾಗುವುದು. ಕನ್ನಡ ಹೆಸರುಗಳು ಹಾಗೆಯೇ ಉಳಿಯಬೇಕು. ಇಲ್ಲವಾದರೆ ಉಗ್ರ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಮದ್ಯ ಬೆಲೆ ಇಳಿಸಿ : ನಾನು ಎಂದೂ ಮದ್ಯ ಕುಡಿದಿಲ್ಲ. ಆದರೆ, ಮದ್ಯಪ್ರಿಯರ ಪರವಾಗಿ ಮದ್ಯ ಬೆಲೆ ಇಳಿಸಿ ಎಂದು ಒತ್ತಾಯ ಮಾಡುತ್ತಿದ್ದೀನಿ. ಮದ್ಯ ಬೆಲೆ ಇಳಿಸದೇ ಹೋದರೆ ಸರ್ಕಾರಕ್ಕೆ ಮದ್ಯ ಅಭಿಷೇಕ ಮಾಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.