ಮೈಸೂರು: ದುಡ್ಡಿರುವವರ ಮೋಜಿಗಾಗಿ ಬರುವ ಹೆಲಿ ಟೂರಿಸಂನಿಂದ ಲಲಿತ್ ಮಹಲ್ ಸುತ್ತಮುತ್ತಲಿನ ಪರಿಸರ ಹಾಳಾಗುತ್ತದೆ. ಆದ್ದರಿಂದ, ಮೈಸೂರಿಗೆ ಹೆಲಿ ಟೂರಿಸಂ ಬೇಡ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಲಲಿತ್ ಮಹಲ್ ಹೆಲಿ ಪ್ಯಾಡ್ನ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಹೆಲಿ ಟೂರಿಸಂ ಹಣ ಇರುವವರ ಮೋಜಿಗಾಗಿ. ಇದರಿಂದ ಲಲಿತ್ ಮಹಲ್ ಹೋಟೆಲ್ ಮುಂಭಾಗದಲ್ಲಿ ಇರುವ ಬೃಹತ್ ಮರಗಳನ್ನ ಕತ್ತರಿಸಲಾಗುತ್ತದೆ. ಇದರಿಂದ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ನೈಸರ್ಗಿಕ ಸಂಪತ್ತು ನಾಶವಾಗುತ್ತದೆ. ಮೈಸೂರಿನ ಕಾರಂಜಿ ಕೆರೆಗೆ ಬೇರೆ ಬೇರೆ ದೇಶಗಳಿಂದ ಪಕ್ಷಿಗಳು ವಲಸೆ ಬಂದು ಸಂತಾನೋತ್ಪತ್ತಿ ಮಾಡುತ್ತವೆ. ಜೊತೆಗೆ ಮೃಗಾಲಯದಲ್ಲಿ ಹಲವು ವಿಧದ ಪ್ರಾಣಿ ಪಕ್ಷಿಗಳು ಇದ್ದು. ಹೆಲಿ ಟೂರಿಸಂನಿಂದ ಅವುಗಳಿಗೆ ತೊಂದರೆಯಾಗುತ್ತದೆ ಎಂದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹೆಲಿ ಟೂರಿಸಂ ಬಂದರೆ ಮೈಸೂರಿನ ಪಾರಂಪರಿಕ ಸಂಸ್ಕೃತಿಗೆ ತೊಂದರೆಯಾಗುತ್ತದೆ. ಹೆಲಿ ಟೂರಿಸಂನಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುವುದಿಲ್ಲ. ಸರ್ಕಾರ ಯಾವ ಕಾರಣಕ್ಕೂ ಮೈಸೂರಿಗೆ ಹೆಲಿ ಟೂರಿಸಂ ತರಬಾರದು. ತಂದರೆ ದೊಡ್ಡ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಯುಪಿ ವಿಧಾನಸಭೆ ಚುನಾವಣೆಯಿಂದ 'ಭಾರತದ ಭವಿಷ್ಯ ನಿರ್ಧಾರ': ಅಮಿತ್ ಶಾ