ETV Bharat / state

ತಮಿಳುನಾಡಿಗರು ಮೈಸೂರು ಪಾಕ್ ತಿನ್ನುವುದನ್ನು ಮರೆಯಬೇಕಾಗುತ್ತದೆ: ವಾಟಾಳ್ ಆಕ್ರೋಶ

author img

By

Published : Sep 18, 2019, 9:50 PM IST

ಮೈಸೂರು ಪಾಕ್ ನಮ್ಮದು ಎಂದು ಹೇಳಿದ ತಮಿಳುನಾಡಿಗರ ವಿರುದ್ಧ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿನೂತನ ಪ್ರತಿಭಟನೆ ನಡೆಸಿದರು.

ಮೈಸೂರ್​ಪಾಕ್​ ತಿಂದು ವಾಟಾಳ್​ ವಿನೂತನ ಪ್ರತಿಭಟನೆ

ಮೈಸೂರು: ಮೈಸೂರು ಪಾಕ್ ನಮ್ಮದು ಎಂದು ಹೇಳಿದ ತಮಿಳುನಾಡಿಗರ ವಿರುದ್ಧ ಮೈಸೂರು ಪಾಕ್​ನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ವಾಟಾಳ್ ನಾಗರಾಜ್ ಅವರು ವಿಶೇಷವಾಗಿ ಆಕ್ರೋಶ ವ್ಯಕ್ತಪಡಿಸಿದ್ರು.

ವಾಟಾಳ್​ ನಾಗರಾಜ್​ ವಿನೂತನ ಪ್ರತಿಭಟನೆ

ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಎಲ್ಲದಕ್ಕೂ ಕ್ಯಾತೆ ತೆಗೆಯುತ್ತಾರೆ. ಕಾವೇರಿ, ಮೇಕೆದಾಟು ಆಯ್ತು‌ ಈಗ ಮೈಸೂರು ಪಾಕ್ ನಮ್ಮದು ಎನ್ನುತ್ತಿದ್ದಾರೆ. ತಮಿಳುನಾಡು ರಾಜಕೀಯ ಮಾಡಿಕೊಂಡು ಬರುತ್ತಿದೆ ಎಂದು ಕಿಡಿಕಾರಿದರು.

ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕವಾಗಿ ನಮಗೇ ಸೇರಿದೆ. ಆದರೆ ಇದರಲ್ಲಿ ಕ್ಯಾತೆ ತೆಗೆದರೆ ತಮಿಳುನಾಡಿಗರು ಮೈಸೂರು ಪಾಕ್ ತಿನ್ನುವುದನ್ನು ಮರೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಔರಾದ್ಕರ್ ವರದಿಗೆ ಒತ್ತಾಯ:

ಹಿಂದಿನ ಸರ್ಕಾರ ಪೊಲೀಸರ ಅನುಕೂಲಕ್ಕಾಗಿ ಔರಾದ್ಕರ್ ವರದಿಗೆ ಒಪ್ಪಿಗೆ ಸೂಚಿಸಿತು. ಆದರೆ ಬಿಜೆಪಿ ಸರ್ಕಾರ ವರದಿಯನ್ನು ತಳ್ಳಿ ಹಾಕಿದೆ. ಇದರ ವಿರುದ್ದ ಹೋರಾಟ ಮಾಡುತ್ತೇನೆ ಎಂದು ತಿಳಿಸಿದರು.

ಹಿಂದಿ ಹೇರಿಕೆ ಮಾಡಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಹುನ್ನಾರ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧವೂ ಅವರು ಹರಿಹಾಯ್ದರು.

Intro:ವಾಟಲ್ ಪ್ರತಿಭಟನೆ

Body:ವಾಟಲ್ ಪ್ರತಿಭಟನೆ

Conclusion:ಯಾವಾಗಲು ಕ್ಯಾತೆ ತೆಗೆಯೋದು ತಮಿಳುನಾಡು ಕೆಲಸ: ವಾಟಲ್ ನಾಗರಾಜ್
ಮೈಸೂರು: ಮೈಸೂರು ನಮ್ಮದು ಎಂದು ಹೇಳಿದ ತಮಿಳುನಾಡಿಗರ ವಿರುದ್ಧ ಮೈಸೂರು ಪಾಕ್ ಅನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ವಾಟಲ್ ಪಕ್ಷದ ಅಧ್ಯಕ್ಷ ವಾಟಲ್ ನಾಗರಾಜ್ ಅವರು ವಿನೂತನ ಪ್ರತಿಭಟನೆ ನಡೆಸಿದರು.
ಮೈಸೂರು ರೈಲ್ವೆ ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡಿನವರು ಎಲ್ಲದಕ್ಕೂ ಕ್ಯಾತೆ ತೆಗೆಯುತ್ತಾರೆ.ಕಾವೇರಿ, ಮೇಕೆದಾಟು ಆಯ್ತು‌ ಈಗ ಮೈಸೂರು ಪಾಕ್ ಬಗ್ಗೆ ಕ್ಯಾತೆ ತೆಗೆಯುತ್ತಿದೆ.ತಮಿಳುನಾಡು ರಾಜಕೀಯ ಮಾಡಿಕೊಂಡು ಬರುತ್ತಿದೆ ಎಂದು ಕಿಡಿಕಾರಿದರು.
ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕವಾಗಿ ಮೈಸೂರು ಪಾಕ್ ನಮಗೆ ಸೇರಿದೆ, ಆದರೆ ಇದರಲ್ಲಿ ಕ್ಯಾತೆ ತೆಗೆದರೆ ತಮಿಳುನಾಡಿಗರು ಮೈಸೂರು ಪಾಕ್ ತಿನ್ನುವುದನ್ನು ಮರೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಶ್ವರಪ್ಪನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ: ಸಚಿವ ಕೆ.ಎಸ್.ಈಶ್ವರಪ್ಪ ನನಗೂ ಸ್ನೇಹಿತ ,ಆತನ ಮಾತನ್ನು ಯಾರು ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು.
ಔರದ್ಕರ್ ವರದಿಗೆ ಒತ್ತಾಯ: ಹಿಂದಿನ ಸರ್ಕಾರ ಪೊಲೀಸರ ಅನುಕೂಲಕ್ಕಾಗಿ ಔರದ್ಕರ್ ವರದಿಗೆ ಒಪ್ಪಿಗೆ ಸೂಚಿಸಿತು.ಆದರೆ ಬಿಜೆಪಿ ಸರ್ಕಾರ ವರದಿಯನ್ನು ತಳ್ಳಿ ಹಾಕಿದೆ.ಇದರ ವಿರುದ್ದ ಹೋರಾಟ ಮಾಡುತ್ತಿನಿ ಎಂದು ತಿಳಿಸಿದರು.
ಹಿಂದಿ ಹೇರಿಕೆ ಮಾಡಲು ಬಿಜೆಪಿ ಹಾಗೂ ಆರ್ ಎಸ್ ಎಸ್ ಹುನ್ನಾರ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

( ಮೊಜೊ ಮೊಬೈಲ್ ನಲ್ಲಿ ಬೈಟ್ ವಿಡಿಯೋ ಎರರ್ ಆಗಿದೆ, ಅದ್ದರಿಂದ ಬೈಟ್ ಅನ್ನು ನ್ಯೂಸ್ ವ್ರ್ಯಾಪ್ ನಲ್ಲಿ ಕಳುಹಿಸಲಾಗಿದೆ)
ETV Bharat Logo

Copyright © 2024 Ushodaya Enterprises Pvt. Ltd., All Rights Reserved.