ಮೈಸೂರು: ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಿ.ನರಸೀಪುರ ತಾಲೂಕಿನಲ್ಲಿ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
ತಾಲೂಕಿನ ಗಾಣಿಗನ ಕೊಪ್ಪಲು ಗ್ರಾಮದ 76 ವರ್ಷದ ವ್ಯಕ್ತಿ ಹಾಗೂ ಬನ್ನೂರು ಪಟ್ಟಣದ ಬಿಸ್ಮಿಲ್ಲಾ ನಗರದ 80 ವರ್ಷದ ವೃದ್ಧ ಕೊರೊನಾಗೆ ಬಲಿಯಾಗಿದ್ದಾರೆ. ವೃದ್ಧರ ಸಾವಿನ ವರದಿ ಇಂದು ಸಂಜೆ ಬಿಡುಗಡೆಯಾಗುವ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ನಲ್ಲಿ ಪ್ರಕಟವಾಗಲಿದೆ.
ಬನ್ನೂರು ಪಟ್ಟಣದಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿ ಮೂವರು ಪುರುಷರಿಗೆ ಕೊರೊನಾ ಸೋಂಕು ತಗುಲಿದೆ. ಕೈಯಂಬಳ್ಳಿ ಗ್ರಾಮದ 27 ವರ್ಷದ ಯುವಕ ಹಾಗೂ ಬನ್ನಹಳ್ಳಿ ಹುಂಡಿ ಗ್ರಾಮದ ಮಹಿಳೆಗೆ ಕೊರೊನಾ ದೃಢಪಟ್ಟಿದೆ. ಈ ಮೂಲಕ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆಯಾಗಿದೆ.