ETV Bharat / state

ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಬೌದ್ಧ ಸನ್ಯಾಸಿಗಳು ನೀರುಪಾಲು

ಕಾವೇರಿ ನದಿಗೆ ಈಜಲು ತೆರಳಿದ್ದ ಇಬ್ಬರು ಬೌದ್ಧ ಸನ್ಯಾಸಿಗಳು ನೀರುಪಾಲಾದ ದುರ್ಘಟನೆ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ರಾಣಿಗೇಟ್ ಬಳಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Dec 9, 2021, 9:24 AM IST

ಮೈಸೂರು: ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಪೆನ್ನಲೆ ತೋ (18) ಹಾಗು ಫೆಮಸೀರಮಗ್ (18) ಎಂಬಿಬ್ಬರು ಬೌದ್ಧ ಸನ್ಯಾಸಿಗಳು ಮೃತಪಟ್ಟಿದ್ದಾರೆ.

ಪೆನ್ನಾಲೆ ತೋ ಎಂಬವರ ಮೃತದೇಹವನ್ನು ಮಂಗಳವಾರ ಕಾವೇರಿ ನದಿಯಿಂದ ಹೊರ ತೆಗೆಯಲಾಗಿದೆ. ಆ ಬಳಿಕ ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ‌ಹಸ್ತಾಂತರಿಸಲಾಗಿದೆ. ಫೆಮಸೀರಮಗ್ ಅವರ ಮೃತದೇಹವನ್ನು ಬುಧವಾರ ಪೊಲೀಸರು ಹೊರತೆಗೆದರು.

ಲಾಮಾ ಕ್ಯಾಂಪಿನ ಸೆರಾಜೆ ಮುಖ್ಯಸ್ಥ ಲೋಪ್ ಸಾಂಗ್ ಹೋಜರ್ ಅವರು ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಬಾರ್ ಮಾಲೀಕನ ಹತ್ಯೆ ಸಂಚು: ಆರ್​ಟಿಐ ಕಾರ್ಯಕರ್ತ ಸೇರಿ ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.