ETV Bharat / state

ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕು: ಬಡಗಲಪುರ ನಾಗೇಂದ್ರ - Badaglapura Nagendra

ಸಾರಿಗೆ ನೌಕರರು ತಮ್ಮ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಈ ರೀತಿ ಮುಷ್ಕರ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ.

Badaglapura Nagendra
ಬಡಗಲಪುರ ನಾಗೇಂದ್ರ
author img

By

Published : Apr 7, 2021, 6:11 PM IST

ಮೈಸೂರು: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರವನ್ನು ಕೈಬಿಟ್ಟು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮನವಿ ಮಾಡಿದ್ದಾರೆ.

ಬಡಗಲಪುರ ನಾಗೇಂದ್ರ

ವಿಡಿಯೋ ಮೂಲಕ ಮುಷ್ಕರನಿರತ ಸಾರಿಗೆ ನೌಕರರಲ್ಲಿ ಮನವಿ ಮಾಡಿರುವ ಬಡಗಲಪುರ ನಾಗೇಂದ್ರ, ಸರ್ಕಾರ ಮುಷ್ಕರನಿರತ ಸಾರಿಗೆ ನೌಕರರ ಬೇಡಿಕೆಯನ್ನು ಸಹಾನುಭೂತಿಯಿಂದ ಪರಿಶೀಲನೆ ನಡೆಸಿ ಪ್ರಮಾಣಿಕವಾಗಿ ಬಗೆಹರಿಸಿಕೊಡಬೇಕು. ಏಕೆಂದರೆ ಸಾರಿಗೆ ಇಲಾಖೆಗೆ ಸೇರಿಕೊಳ್ಳುವವರು ಶ್ರೀಮಂತರು, ರಾಜಕಾರಣಿ ಮಕ್ಕಳು ಹಾಗೂ ಅಧಿಕಾರಿಗಳ ಮಕ್ಕಳಲ್ಲ. ಮಧ್ಯಮ ವರ್ಗದವರು ಈ ಕೆಲಸಕ್ಕೆ ಸೇರಿಕೊಳ್ಳುತ್ತಾರೆ‌.

ಆದ್ದರಿಂದ ಸಾಧ್ಯವಾದಷ್ಟು ಬೇಗ ಸರ್ಕಾರ ಮಾತುಕತೆ ಮೂಲಕ ಇವರ ಸಮಸ್ಯೆ ಬಗೆಹರಿಸಬೇಕಾಗುತ್ತದೆ. ಆದರೆ ಕರ್ತವ್ಯಕ್ಕೆ ಹಾಜರಾಗದೆ ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ರೈತ ಸಂಘ ಬೆಂಬಲಿಸುವುದಿಲ್ಲ. ಈ ರೀತಿ ಚಳವಳಿಯಿಂದ ಸಾರ್ವಜನಿಕರ ಕೋಪಕ್ಕೆ ಗುರಿಯಾಗದಿರಿ ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.