ಮೈಸೂರು: ಬಾಳೆ ಗೊನೆ ಸಾಗಿಸುವ ವಾಹನದಲ್ಲಿ ಬೀಟೆ ಮರದ ನಾಟಾಗಳನ್ನು ಬಚ್ಚಿಟ್ಟು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಇಲಾಖೆಯ ಪೊಲೀಸರು ಬಂಧಿಸಿರುವ ಘಟನೆ ಆನೆಚೌಕೂರಿನಲ್ಲಿ ನಡೆದಿದೆ.
![Transit of beta tree](https://etvbharatimages.akamaized.net/etvbharat/prod-images/8429070_747_8429070_1597478393006.png)
ಅಬ್ದುಲ್ ಕಲಾಂ ಅಜಾದ್ ಬಂಧಿತ ಆರೋಪಿ. ಈತ ಕೊಡಗು ಜಿಲ್ಲೆಯ ವಿರಾಜಪೇಟೆಯವನ್ನಾಗಿದ್ದು, ಬಾಳೆ ಗೊನೆ ಸಾಗಿಸುವ ಕ್ಯಾಂಟರ್ನಲ್ಲಿ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ. ಗುರುವಾರ ಮಧ್ಯರಾತ್ರಿ ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ಬರುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ತಡೆದು ಚೆಕ್ ಮಾಡಿದಾಗ ಬಾನೆ ಗೊನೆ ಕೆಳಗೆ 16 ಬೀಟೆ ನಾಟಗಳು ಪತ್ತೆಯಾಗಿವೆ. ವಾಹವನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.