ETV Bharat / state

ರಾಜ್ಯದಲ್ಲಿ ಭಾರತ ಐಕ್ಯತಾ ಯಾತ್ರೆ: ಮೈಸೂರಿನ ಕೆಲವೆಡೆ ಸಂಚಾರ ಮಾರ್ಗ ಬದಲಾವಣೆ

ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಇಂದು, ನಾಳೆ ಹಾಗೂ ಸೆ. 2ರಂದು ವಾಹನ ಸಂಚಾರಕ್ಕೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.

bharat jodo yatra
ಭಾರತ್ ಜೋಡೋ ಯಾತ್ರೆ
author img

By

Published : Sep 30, 2022, 7:15 AM IST

Updated : Sep 30, 2022, 8:03 AM IST

ಮೈಸೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವುದರಿಂದ ಅ.1ರಂದು ಚಾಮರಾಜನಗರ ಜಿಲ್ಲೆಯ ಬೇಗೂರಿನಿಂದ ನಂಜನಗೂಡು ತಾಲೂಕಿನ ಕಳಲೆ ಗ್ರಾಮಕ್ಕೆ ಪಾದಯಾತ್ರೆ ಆಗಮಿಸಿ ನಂತರ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಲಿದೆ. ಬಳಿಕ ಕಳಲೆಯಿಂದ ಎಂಐಟಿ ಕಾಲೇಜಿಗೆ ಬಂದು ಅಲ್ಲಿ ವಾಸ್ತವ್ಯ ಮಾಡಲಿದ್ದಾರೆ.

ಅ. 2ರಂದು ವಾಹನದ ಮೂಲಕ ಎಂಐಟಿ ಕಾಲೇಜಿನಿಂದ ಬದನವಾಳು ಗ್ರಾಮಕ್ಕೆ ತೆರಳಿ, ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ನಂಜನಗೂಡಿನಿಂದ ಕಡಕೊಳಕ್ಕೆ ಆಗಮಿಸಿ, ಕಡಕೊಳದಿಂದ ಪಾದಯಾತ್ರೆ ಮೂಲಕ ಮೈಸೂರು ನಗರಕ್ಕೆ ಆಗಮಿಸಲಿದ್ದಾರೆ. ಅಂದು ಮೈಸೂರು ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕೆಲ ಸಂಚಾರ ಮಾರ್ಗಗಳನ್ನು ಬದಲಾಯಿಸಿದೆ.

ಪೊಲೀಸ್​ ಪ್ರಕಟಣೆ
ಪೊಲೀಸ್​ ಪ್ರಕಟಣೆ

ಇದನ್ನೂ ಓದಿ: ಇಂದು ಭಾರತ್​ ಜೋಡೋ ಯಾತ್ರೆ ರಾಜ್ಯ ಪ್ರವೇಶ: ಗುಂಡ್ಲುಪೇಟೆಯಲ್ಲಿ ಖಾಕಿ ಹೈ ಅಲರ್ಟ್

ಸೆ.30ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ನಂಜನಗೂಡು ಪಟ್ಟಣದ ಅಪೋಲೋ ವೃತ್ತ (ಬಿ.ಡಿ.ಓ ಸರ್ಕಲ್) ಕಡೆಯಿಂದ - ಗೋಳೂರು - ಬದನವಾಳು - ಕವಲಂದೆ - ಬದನಗುಪ್ಪೆ - ಚಾಮರಾಜನಗರ ಮುಖಾಂತರ ಗುಂಡ್ಲಪೇಟೆ ಕಡೆಗೆ ಸಂಚರಿಸಬಹುದಾಗಿದೆ.

ಅ. 1ರಂದು ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಮೈಸೂರು ನಗರದಿಂದ ನಂಜನಗೂಡು ಮಾರ್ಗವಾಗಿ ಗುಂಡ್ಲುಪೇಟೆ ಕಡೆಗೆ ವಾಹನಗಳನ್ನು ಬದಲಿ ಮಾರ್ಗವಾಗಿ ನಂಜನಗೂಡು ಪಟ್ಟಣದ ಅಪೋಲೋ ವೃತ್ತ (ಬಿ.ಡಿ.ಒ ಹೋಗುವ ಸರ್ಕಲ್) ಕಡೆಯಿಂದ - ಬದನವಾಳು - ಕವಲಂದೆ ಬದನಗುಪ್ಪೆ-ಚಾಮರಾಜನಗರ ಮುಖಾಂತರ ಗುಂಡ್ಲುಪೇಟೆ ಕಡೆಗೆ ತೆರಳಬಹುದಾಗಿದೆ.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ವಾಹನ ಸಂಚಾರ ಮಾರ್ಗ ಬದಲಾವಣೆ, ಮದ್ಯ ನಿಷೇಧ

ಅ.1 ಮತ್ತು 2ರಂದು ಮಧ್ಯಾಹ್ನ 2ರಿಂದ ರಾತ್ರಿ 9ರವರೆಗೆ ಮೈಸೂರು ನಗರದಿಂದ ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕಡೆಗೆ ಹೋಗಲು ಬದಲಿ ಮಾರ್ಗವಾಗಿ ಮೈಸೂರು ನಗರದ ರಿಂಗ್ ರೋಡ್ ಜಂಕ್ಷನ್​ನಿಂದ ವರುಣಾ ಮೇಗಳಪುರ - ಟಿ.ನರಸೀಪುರ - ಮೂಗೂರು - ಸಂತೇಮರಹಳ್ಳಿ - ಚಾಮರಾಜನಗರ ಮುಖಾಂತರ ಗುಂಡ್ಲುಪೇಟೆ ಕಡೆಗೆ ಸಂಚರಿಸಬಹುದಾಗಿದೆ.

Last Updated : Sep 30, 2022, 8:03 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.