ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಐದು ದಿನ ಬಾಕಿ ಇದ್ದು, ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಪಕ್ಷದ ಪ್ರಾಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನಾವು ತಲುಪಿಸುತ್ತೇವೆ ಎಂಬ ಶೀರ್ಷಿಕೆಯಡಿ ಈ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಠಾಕ್ರೆ, ಎಲ್ಲಾ ಪಕ್ಷಗಳು ಅವರು ಏನು ಮಾಡುತ್ತಾರೆ ಎಂಬ ಭರವಸೆಯನ್ನು ನೀಡಿದ್ದಾರೆ. ಆದರೆ, ನಾವು ಅಧಿಕಾರಕ್ಕೆ ಬಂದರೆ ಹೇಗೆ ನಮ್ಮ ಭರವಸೆ ಈಡೇರಿಸುತ್ತೇವೆ ಎಂದು ತಿಳಿಸಿದ್ದೇವೆ ಎಂದರು. ನಾವೇನು ಮಾಡಿದೆವು ಎಂಬ ಕುರಿತು ಹೊತ್ತಿಗೆ ಬಿಡುಗಡೆ ಮಾಡಿದ ಅವರು ಇದೇ ವೇಳೆ ಎಂಎನ್‌ಎಸ್ ಇತಿಹಾಸವನ್ನು ತಿಳಿಸಿದ್ದಾರೆ.
ಸೆಪ್ಟೆಂಬರ್ 2014ರಲ್ಲಿ ಬಿಡುಗಡೆಯಾದ ಮಹಾರಾಷ್ಟ್ರ ನೀಲಿನಕ್ಷೆಯಿಂದ ಅನೇಕ ಅಂಶಗಳನ್ನು ನಮ್ಮ ಪ್ರಣಾಳಿಕೆ ಪಡೆದಿದೆ. 10 ವರ್ಷಗಳ ಬಳಿಕವೂ ಅದೇ ಸಮಸ್ಯೆಗಳು ಜೀವನಂತವಾಗಿದ್ದು, ಜನರ ಸಮಸ್ಯೆ ಹಾಗೇ ಇದ್ದು, ಇಂದಿಗೂ ಮುಂದುವರೆದಿದೆ ಎಂದರು.
ನಾವು ಹೇಳುವುದಿಲ್ಲ ಮಾಡಿ ತೋರಿಸುತ್ತೇವೆ: ಎಂಎನ್‌ಎಸ್ ಪ್ರಣಾಳಿಕೆ ರಾಜ್ಯದ ಮತ್ತು ಜನರ ಎಲ್ಲಾ ದೃಷ್ಟಿಕೋನವನ್ನು ಹೊಂದಿದ್ದು, ನಾಲ್ಕು ವಿಭಿನ್ನ ಹಂತದಲ್ಲಿ ಮಾತನಾಡುತ್ತದೆ. ಮೊದಲ ಹಂತದಲ್ಲಿ ಮೂಲಭೂತ ಅಗತ್ಯ, ಜೀವನ ಗುಣಮಟ್ಟ, ಅಗತ್ಯ ಆಹಾರ ಮತ್ತು ನೀರು, ಕಾನೂನು ಸುವ್ಯವಸ್ಥೆ, ಮಹಿಳೆ ಭದ್ರತೆ, ಕ್ರೀಡೆಮ ಮಕ್ಕಳ ಆರೋಗ್ಯ, ಪ್ರಾಥಮಿಕ ಶಿಕ್ಷ ಮತ್ತು ಉದ್ಯೋಗ ಅಂಶ ಹೊಂದಿದೆ.
ಎರಡನೇ ಹಂತದಲ್ಲಿ ಸಂವಹನ, ವಿದ್ಯುತ್ಛಕ್ತಿ, ನೀರಿನ ಯೋಜನೆ, ಮಹಾರಾಷ್ಟ್ರದಾದ್ಯಂತ ನಗರಗಳಿಗೆ ಸಂಪರ್ಕ, ಘನ ತ್ಯಾಜ್ಯ ನಿರ್ವಹಣೆ, ಶುಚಿತ್ವ, ತೆರೆದ ಜಾಗ, ಪರಿಸರ, ಜೀವವೈವಿಧ್ಯತೆ. ಮೂರನೇ ಹಂತದಲ್ಲಿ ರಾಜ್ಯ ಕೈಗಾರಿಕಾ ನೀತಿ, ಉದ್ಯಮ ನೀತಿ, ಆಡಳಿತ ಮತ್ತು ಉದ್ಯಮ ನಿಯಂತ್ರಣ, ಕೃಷಿ, ಪ್ರವಾಸೋದ್ಯ, ಮತ್ತು ವೃತ್ತಿಪರ ಶಿಕ್ಷಣ ಹೊಂದಿದೆ.
ಮರಾಠಿ ಅಸ್ಮಿತೆ ಉಳಿಸುತ್ತೇವೆ: ನಾಲ್ಕನೇ ಹಂತದಲ್ಲಿ ಮರಾಠಿ ಹಿರಿಮೆ, ಅಸ್ಥಿತ್ವ, ಮರಾಠಿ ಭಾಷಾ ಪ್ರೋತ್ಸಾಹ, ದೈನಂದಿನ ಮರಾಠಿ ಬಳಕೆ ಮತ್ತು ಉದ್ಯಮ, ಡಿಜಿಟಲ್ ಜಗತ್ತಿನಲ್ಲಿ ಮರಾಠಿ, ಜಾಗತಿಕ ಉದ್ಯಮ, ಐತಿಹಾಸಿಕ ಕೋಟೆ, ಸ್ಮಾರಕ ಸಂರಕ್ಷಣೆ ಮತ್ತು ಸಂಪ್ರದಾಯಿಕ ಕ್ರೀಡೆ ಗಳನ್ನು ಉಳಿಸಿಕೊಳ್ಳಲು ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ರಾಜ್ ಠಾಕ್ರೆ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಮಹಾಯುತಿ ಸರ್ಕಾರದ ಲಾಡ್ಕಿ ಬಹೀನ್ ಯೋಜನೆ ಕುರಿತು ಮಾತನಾಡಿದ ರಾಜ್ ಠಾಕ್ರೆ, ಮಹಿಳೆಯರಿಗೆ ಮಾಸಿಕ 1,500 ರೂ ನೀಡುವುದು ಉತ್ತಮವಾಗಿದೆ. ಆದರೆ ಇದು ಭವಿಷ್ಯದಲ್ಲಿ ಸಮಸ್ಯೆಯಾಗಬಾರದು ಎಂದರು. ಜೊತೆಗೆ ಛತ್ರಪತ್ರಿ ಶಿವಾಜಿ ಮಹಾರಾಜ್ ಸ್ಮರಣಾರ್ಥವಾಗಿ ದೇಗುಲ ನಿರ್ಮಾಣದ ಬದಲಾಗಿ ಕಲಿಕೆಯ ದೇಗುಲ ಅಂದರೆ ಶಾಲೆ - ಕಾಲೇಜುಗಳು ಅಗತ್ಯ ಎನ್ನುವ ಮೂಲಕ ಸಹೋದರ ಉದ್ದವ್ ಠಾಕ್ರೆ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಇದು ರಾಜ್ಯದ ಇತಿಹಾಸದಲ್ಲಿ ಎಂಎನ್‌ಎಸ್ ಸ್ಪರ್ಧಿಸುತ್ತಿರುವ ಅತ್ಯಂತ ಅಸಾಮಾನ್ಯ ಚುನಾವಣೆಯಾಗಿದೆ. 128 ಕ್ಷೇತ್ರಗಳಲ್ಲಿ ಎಂಎನ್‌ಎಸ್ ಸ್ಪರ್ಧಿಸುತ್ತಿದೆ. ಮಹಾಯುತಿ ಮತ್ತು ಮಹಾ ವಿಕಾಸ ಅಗಡಿ ಮೈತ್ರಿಗಳಿಗಿಂತಲೂ ಹೆಚ್ಚು ಸ್ಥಾನದಲ್ಲಿ ನಾವು ಸ್ಪರ್ಧಿಸಿದ್ದೇವೆ ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
ಇಂದು ಇಲ್ಲಿ ಯಾರಾದರೂ ಇದ್ದರೆ, ನಾಳೆಯೂ ಇರಲಿದ್ದಾರೆ. ಯಾರು ಯಾವಾಗ ಅಥವಾ ಎಲ್ಲಿ ಇರುತ್ತಾರೆ ಎಂಬುದು ತಿಳಿದಿಲ್ಲ. ಕಳೆದ ಬಾರಿ ಯಾರಿಗೆ ಮತ ಹಾಕಿದವರು ಇಂದು ಎಲ್ಲಿದ್ದಾರೆ ಎಂಬುದನ್ನು ಜನರು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇಂದು ಅವರು ಎಲ್ಲಿದ್ದಾರೆ. ನಿಮ್ಮ ಮತಗಳ ಮೌಲ್ಯ ಏನು ಎಂದರು.
ಇದನ್ನೂ ಓದಿ: 'ಮಹಾಯುತಿ ಮೈತ್ರಿಕೂಟ'ದಲ್ಲಿ ಬಿರುಕು ಸೃಷ್ಟಿಸಿದ ಸಿಎಂ ಯೋಗಿ ಘೋಷಣೆ!: ದೇವೇಂದ್ರ ಫಡ್ನವಿಸ್ ಸಮರ್ಥನೆ