IND vs SA 4th T20: ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 4ನೇ ಮತ್ತು ಕೊನೆಯ T20 ಪಂದ್ಯವನ್ನು ಆಡಲು ಸಜ್ಜಾಗಿದೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಗೆದ್ದು ಮುನ್ನಡೆ ಸಾಧಿಸಿರುವ ಭಾರತ ಇಂದು ಕೊನೆಯ ಪಂದ್ಯವನ್ನು ಆಡಲಿದೆ.
ಸರಣಿ ನಿರ್ಣಾಯಕ ಪಂದ್ಯವಾದ ಇದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದರೆ ಭಾರತ ಸರಣಿ ಕೈವಶ ಮಾಡಿಕೊಳ್ಳಲಿದೆ. ಮತ್ತೊಂದೆಡೆ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಡ್ರಾ ಮಾಡಲು ಹರಿಣ ಪಡೆ ಮುಂದಾಗಿದೆ.
ಮೈದಾನದ ಅಂಕಿ - ಅಂಶ: ಇದುವರೆಗೂ ಈ ಮೈದಾನದಲ್ಲಿ ಒಟ್ಟು 26 ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮತ್ತು ಚೇಸಿಂಗ್ ಮಾಡಿದ ತಂಡಗಳು ತಲಾ 13 ಬಾರಿ ಗೆದ್ದು ಸಮಬಲ ಸಾಧಿಸಿವೆ. 260 ಈ ಮೈದಾನದಲ್ಲಿ ದಾಖಲಾದ ಹೈಸ್ಕೋರ್ ಆಗಿದ್ದರೇ, 83ಕ್ಕೆ10 ಕನಿಷ್ಠ ಸ್ಕೋರ್ ಆಗಿದೆ. ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ಒಟ್ಟು 30 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಟೀಂ ಇಂಡಿಯಾ 17 ಬಾರಿ ಗೆಲುವು ಸಾಧಿಸಿದ್ದರೆ, ದಕ್ಷಿಣ ಆಫ್ರಿಕಾ 12 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.
ದಾಖಲೆ ಬರೆಯಲು ಭಾರತ ಸಜ್ಜು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಕಳೆದ 5 ಟಿ-20 ಸರಣಿಯಲ್ಲಿ ಭಾರತ ಸೋಲನುಭವಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಯಕ ಸೂರ್ಯಕುಮಾರ್ ಪಡೆ ಅಜೇಯ ಓಟವನ್ನು ಮುನ್ನಡೆಸಲು ಯೋಜನೆ ರೂಪಿಸಿದೆ. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಟಿ20 ಪಂದ್ಯವನ್ನು ಭಾರತ ಗೆದ್ದರೆ 3-1 ಅಂತರದಿಂದ ಸರಣಿ ವಶಪಡಿಸಿಕೊಳ್ಳುವುದರ ಜೊತೆಗೆ ದಾಖಲೆ ಬರೆಯಲಿದೆ.
ಹೌದು, ಉಭಯ ತಂಡಗಳ ನಡುವೆ 3ಕ್ಕೂ ಹೆಚ್ಚು ಟಿ20 ಪಂದ್ಯಗಳ ಸರಣಿ ನಡೆಯುತ್ತಿರುವುದು ಇದು ಎರಡನೇ ಬಾರಿ ಆಗಿದೆ. ಇದಕ್ಕೂ ಮೊದಲು, 2022ರಲ್ಲಿ ಐದು ಪಂದ್ಯಗಳ ಟಿ-20 ಸರಣಿ ನಡೆದಿತ್ತು ಅದು 2-2 ಡ್ರಾದಲ್ಲಿ ಕೊನೆಗೊಂಡಿತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಈ ಪಂದ್ಯವನ್ನು ಗೆದ್ದರೆ 18 ವರ್ಷದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಟಿ20 ಸರಣಿಯನ್ನು ಗೆದ್ದು ದಾಖಲೆ ಬರೆಯಲಿದೆ.
5 ಸರಣಿ ಗೆಲುವು: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಕಳೆದ 5 ಟಿ-20 ಸರಣಿಯಲ್ಲಿ ಭಾರತ ಸೋಲನುಭವಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಪಡೆ ಅಜೇಯ ಓಟವನ್ನು ಮುನ್ನಡೆಸಲು ಯೋಜನೆ ರೂಪಿಸಿದೆ.
ಪಂದ್ಯ ಆರಂಭ: ಸಂಜೆ 8:30ಕ್ಕೆ
ಸಂಭಾವ್ಯ ತಂಡ-ಭಾರತ ತಂಡ: ಸಂಜು ಸ್ಯಾಮ್ಸನ್(ವಿ,ಕೀ), ತಿಲಕ್ ವರ್ಮಾ, ಅಭಿಷೇಕ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್(ನಾ), ರಮಣದೀಪ್ ಸಿಂಗ್, ರಿಂಕು ಸಿಂಗ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಜಿತೇಶ್ ಶರ್ಮಾ, ಅವೇಶ್ ಖಾನ್, ಯಶ್ ದಯಾಳ್ ವಿಜಯ್ ಕುಮಾರ್ ವೈಶಾಕ್
ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್, ಐಡೆನ್ ಮಾರ್ಕ್ರಾಮ್(ನಾ), ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್(ವಿ.ಕೀ), ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಡೇವಿಡ್ ಮಿಲ್ಲರ್, ಆಂಡಿಲ್ ಸಿಮೆಲೇನ್, ಜೆರಾಲ್ಡ್ ಕೊಯೆಟ್ಜಿ, ಲುಥೋ ಸಿಪಾಮ್ಲಾ, ಕೇಶವ್ ಮಹಾರಾಜ್, ಪ್ಯಾಟ್ರಿಕ್ ಡೊನ್ಗ್ರೆ, ನ್ಕಾಬಯೋಮ್ಜಿ ಪೀಟರ್, ಮಿಹ್ಲೋವಾನ್ ಕ್ರುಗರ್ , ಒಟ್ನೀಲ್ ಬಾರ್ಟ್‌ಮ್ಯಾನ್
ಇದನ್ನೂ ಓದಿ: ಪರ್ತ್ ಟೆಸ್ಟ್ಗೂ ಮುನ್ನ ಟೀಂ ಇಂಡಿಯಾಗೆ ಆಘಾತ: ಅಭ್ಯಾಸ ಪಂದ್ಯದಲ್ಲಿ ಕೆಎಲ್ ರಾಹುಲ್ಗೆ ಗಾಯ, ಓಪನರ್ ಆಗಿ ಯಾರು?