ಮೈಸೂರು: ತಾಲೂಲಿನ ಬೆಳವಾಡಿಯಲ್ಲಿ ಮೂರು ಚಿರತೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿವೆ.
ಬೆಳವಾಡಿ ಗ್ರಾಮದ ಹೊರವಲಯದಲ್ಲಿ ಅನುಮಾನಾಸ್ಪದವಾಗಿ ಮೂರು ಚಿರತೆಗಳು ಸಾವನ್ನಪ್ಪಿರುವುದನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಗರದ ಬೆಳವಾಡಿ ಕೈಗಾರಿಕಾ ಪ್ರದೇಶದ ಬಳಿ ಕೆರೆಯೊಂದರ ಪಕ್ಕದಲ್ಲಿ ತಾಯಿ ಚಿರತೆ ಹಾಗೂ 2 ಮರಿ ಚಿರತೆಗಳು ಅನುಮಾನಾಸ್ಫದವಾಗಿ ಸಾವನ್ನಪ್ಪಿದ್ದು, ಸ್ಥಳಕ್ಕೆ ಮೈಸೂರು ವಲಯದ ಹಿರಿಯ ಅರಣ್ಯಾಧಿಕಾರಿಗಳು, ಅರಣ್ಯ ಸಿಬ್ಬಂದಿ, ಸ್ಥಳೀಯ ಪೊಲೀಸರು, ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪತ್ನಿಯ ನಿಧನ ಸುದ್ದಿ ಕೇಳಿ ಪತಿಯೂ ಸಾವು: ಸಾವಿನಲ್ಲೂ ಒಂದಾದ ದಂಪತಿ
ಶ್ವಾನದಳ ಆಗಮಿಸಿ ಪರಿಶೀಲನೆ ನಡೆಸಿದೆ. ಈ ಮಧ್ಯೆ ಕೆರೆಯ ಪಕ್ಕದ ಮರವೊಂದರ ಕೆಳಗೆ ಸತ್ತ ನಾಯಿ ಬಿದ್ದಿದ್ದು, ಆ ನಾಯಿಯ ದೇಹದ ಅರ್ಧ ಭಾಗವನ್ನು ಸತ್ತ 3 ಚಿರತೆಗಳು ತಿಂದಿವೆ. ಸ್ವಲ್ಪ ದೂರದಲ್ಲೇ ಈ ಮೂರು ಚಿರತೆಗಳು ಸಾವನ್ನಪ್ಪಿವೆ.
ಈ ರೀತಿ ಸತ್ತ ತಾಯಿ ಹಾಗೂ 2 ಮರಿ ಚಿರತೆಗಳನ್ನು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ಇದರ ಮಾದರಿಗಳನ್ನು ಫೋರೆನ್ಸಿಕ್ ಲಾಬ್ಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ನಂತರ ನಿಜವಾದ ಕಾರಣ ತಿಳಿಯಲಿದೆ ಎಂದು ಹಿರಿಯ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.