ETV Bharat / state

ವಯನಾಡಿನಲ್ಲಿ ಧಾರಾಕಾರ ಮಳೆ: ಕಬಿನಿ ಡ್ಯಾಂ ಭರ್ತಿಗೆ 3 ಅಡಿಯಷ್ಟೇ ಬಾಕಿ - ಕಬಿನಿ ಭರ್ತಿಗೆ ಕೇವಲ 3 ಅಡಿ ಬಾಕಿ

ಕಬಿನಿ ಜಲಾಶಯ ತುಂಬಲು ಕೇವಲ 3 ಅಡಿ ಬಾಕಿಯಿದ್ದು, ನದಿ ಪಾತ್ರದ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ.

kabini reservoir
ಕಬಿನಿ ಜಲಾಶಯ
author img

By

Published : Jul 15, 2021, 8:39 PM IST

ಮೈಸೂರು: ಕೇರಳ ರಾಜ್ಯದ ವಯನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಕಬಿನಿ ಜಲಾಶಯ ತುಂಬಲು ಕೇವಲ ಮೂರು ಅಡಿ ಬಾಕಿಯಿದೆ. ಇದರಿಂದ ಕೊರೊನಾ ಆತಂಕದ ನಡುವೆ ಜಿಲ್ಲೆಯ ಜನರಲ್ಲಿ ಪ್ರವಾಹ ಭೀತಿ ಶುರುವಾಗಿದೆ.

ಗುರುವಾರ ಸಂಜೆ ಕಬಿನಿ ಜಲಾಶಯಕ್ಕೆ 15,861 ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದ್ದು 13,500 ಕ್ಯೂಸೆಕ್ ನೀರು ಹೊರಬಿಡಲಾಗಿದೆ.

ಕಬಿನಿ ಜಲಾಶಯ

ಪ್ರವಾಹ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ:

ಕಬಿನಿ ಜಲಾನಯನ ಪ್ರದೇಶದಲ್ಲಿ ಹೆಚ್ಚಾಗಿ ಮಳೆಯಾಗುತ್ತದೆ. ಒಳಹರಿವಿನ ಪ್ರಮಾಣ ಆಧರಿಸಿ ಜಲಾಶಯದಿಂದ ನೀರನ್ನು ನದಿಗೆ ಹರಿಸಲಾಗಿದೆ. ಕಬಿನಿ ನದಿಯ ಪಾತ್ರದಲ್ಲಿರುವ ಜನರು ತಮ್ಮ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕಬಿನಿ ಜಲಾಶಯದ ಕಾರ್ಯಪಾಲನ ಅಭಿಯಂತರ ಸಿ.ವಿ.ಸುರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.