ETV Bharat / state

ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಕ್ಕೆ ಹತ್ಯೆ: ಮೂವರ ಬಂಧನ

ಇನ್​​​ಸ್ಟಾಗ್ರಾಮ್​​ನಲ್ಲಿ ನಿಂದಿಸಿದ್ದಾನೆ ಎನ್ನುವ ಸಣ್ಣ ಕಾರಣಕ್ಕೆ ಮೂವರು ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿಂದಿಸಿದ್ದಕ್ಕೆ ಹತ್ಯೆ

author img

By

Published : Jul 20, 2022, 5:18 PM IST

ಮೈಸೂರು:ಇನ್​​​ಸ್ಟಾಗ್ರಾಮ್​​ನಲ್ಲಿ ನಿಂದಿಸಿದ ಗೆಳೆಯನನ್ನು ಹಾಡಹಗಲೇ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಹುಣಸೂರು ಪೊಲೀಸರು ಬಂಧಿಸಿದ್ದಾರೆ. ಹುಣಸೂರು ಪಟ್ಟಣದಲ್ಲಿ ಜುಲೈ 12 ರಂದು ಬೀರೇಶ್ ಎಂಬ ಯುವಕನ್ನು ಆತನ ಸ್ನೇಹಿತರಾದ ನಿತಿನ್ (23 ವರ್ಷ), ಮನೋಜ್ ಕುಮಾರ್(24 ವರ್ಷ), ಪೋತರಾಜ್ (25 ವರ್ಷ) ಇವರು ಸೇರಿಕೊಂಡು ಕೃತ್ಯ ಎಸಗಿದ್ದರು.

ಸ್ಕೂಟರ್​​ನಲ್ಲಿ ಬಂದ ಆರೋಪಿಗಳು ಬೀರೇಶ್​​ನನ್ನು ಮಾತನಾಡಿಸುವ ನೆಪದಲ್ಲಿ ಆತನ ಹತ್ತಿರ ಹೋಗಿ ಎಪಿಎಂಸಿ ಮಾರುಕಟ್ಟೆಯ ಹತ್ತಿರ ಚಾಕುವಿನಿಂದ ಬೆನ್ನಿಗೆ ಚೂರಿ ಇರಿದು ನಾಪತ್ತೆಯಾಗಿದ್ದರು. ಗಾಯಗೊಂಡಿದ್ದ ಬೀರೇಶ್​​​ನನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ.

ಈ ಸಂಬಂಧ ಆರೋಪಿಗಳ ಪತ್ತೆಗಾಗಿ ಎಸ್.ಪಿ ಚೇತನ್ ತಂಡವೊಂದನ್ನು ರಚಿಸಿದ್ದು, 3 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೊಲೆಯಾದ ಬೀರೇಶ್​​ ಇತ್ತೀಚೆಗಷ್ಟೇ ಮದುವೆಯಾಗಿದ್ದ. ನಿತಿನ್ ಬಗ್ಗೆ ಕೆಟ್ಟದಾಗಿ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕಾಗಿ ಈ ಘಟನೆ ನಡೆದಿತ್ತು.

ಇದನ್ನೂ ಓದಿ: ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದ ಚಾಲಾಕಿ.. ದೆಹಲಿ ಅಧಿಕಾರಿಗಳ ವಶಕ್ಕೆ ಆಫ್ರಿಕಾ ವಿದ್ಯಾರ್ಥಿಗಳ ನಕಲಿ ನಾಯಕ‌

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.