ETV Bharat / state

ರಾಜಕೀಯ ಅನಿಶ್ಚಿತತೆಯಲ್ಲಿ ಮರೆತರಾ ದಸರಾ ಸಭೆ ..? - no high-level Dasara committee meeting

ಜೂನ್ ತಿಂಗಳಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಯಬೇಕಿತ್ತು, ಆದರೆ ರಾಜಕೀಯ ಗೊಂದಲಗಳು ಹಾಗೂ ಬದಲಾವಣೆಗಳಿಂದ ಇನ್ನೂ ಉನ್ನತ ಮಟ್ಟದ ದಸರಾ ಸಮಿತಿಯ ಸಭೆ ನಡೆದಿಲ್ಲ.

ದಸರ ಉನ್ನತ ಮಟ್ಟದ ಸಭೆ
author img

By

Published : Aug 1, 2019, 2:02 PM IST

ಮೈಸೂರು: ರಾಜ್ಯ ರಾಜಕೀಯದಲ್ಲಿ ಉಂಟಾದ ದಿಢೀರ್ ಬೆಳವಣಿಗೆಯ ಹಿನ್ನೆಲೆಯಲ್ಲಿ ದಸರಾ ಸಿದ್ಧತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು, ಈ ಬಾರಿಯ ದಸರಾ ಹೇಗೆ ನಡೆಯುತ್ತದೆ ಎಂಬ ಚರ್ಚೆಗೆ ಗ್ರಾಸವಾಗಿದೆ.

ಈ ಬಾರಿ ದಸರಾಗೆ ಕೇವಲ 54 ದಿನಗಳು ಬಾಕಿ ಇವೆ. ಜೂನ್ ತಿಂಗಳಲ್ಲಿ ದಸರಾ ಉನ್ನತ ಸಭೆ ನಡೆಯಬೇಕಿತ್ತು. ಆದರೆ, ರಾಜಕೀಯ ಗೊಂದಲಗಳು ಹಾಗೂ ಬದಲಾವಣೆಗಳಿಂದ ಇನ್ನೂ ಉನ್ನತ ಮಟ್ಟದ ದಸರಾ ಸಮಿತಿ ಸಭೆ ನಡೆದಿಲ್ಲ. ಜೊತೆಗೆ ದಸರಾ ಮುನ್ನ ಅರಮನೆಗೆ 45 ದಿನಗಳ ಮುಂಚೆ ಆಗಮಿಸಬೇಕಾಗಿದ್ದ ಆನೆಗಳ ಆಯ್ಕೆಯೂ ಸಹ ಇನ್ನೂ ನಡೆದಿಲ್ಲ. ಮುಖ್ಯವಾಗಿ ನೂತನ ಸರ್ಕಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಯಾರು ಎಂಬ ಬಗ್ಗೆಯೂ ಮಾಹಿತಿ ಖಚಿತವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ರಾಜಕೀಯ ಬದಲಾವಣೆಗಳು. ಇದರಿಂದ ದಸರಾ ಯಾವ ರೀತಿ ನಡೆಯುತ್ತದೆ ಎಂಬುದೇ ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ದಸರಾಗೆ ರಾಜಕೀಯ ಗ್ರಹಣ:

ಸಮ್ಮಿಶ್ರ ಸರ್ಕಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇಗೌಡ ಜೂನ್ ತಿಂಗಳಲ್ಲಿ ದಸರಾ ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದ್ದರು. ಆದರೆ, ಆ ನಂತರ ನಡೆದ ರಾಜಕೀಯ ಬೆಳವಣಿಗೆಗಳಿಂದ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ದಸರಾ ಉನ್ನತ ಮಟ್ಟದ ಸಭೆ ಇನ್ನೂ ನಡೆಸಿಲ್ಲ. ಇವೆಲ್ಲದರ ಪರಿಣಾಮ ಈ ಬಾರಿ ದಸರಾಗೆ ರಾಜಕೀಯ ಗ್ರಹಣದಿಂದಾಗು ಸಿದ್ದತೆಗಳು ತಡವಾಗಿ ನಡೆಯುತ್ತಿವೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತಿದ್ದಾರೆ. ನೂತನ ಸರ್ಕಾರ ಬೇಗನೆ ಸಭೆ ನಡೆಸಿ ದಸರಾ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂಬುದು ನಾಗರಿಕರು ಒತ್ತಾಯಿಸುತ್ತಿದ್ದಾರೆ. ಈ ಬಾರಿ ದಸರಾ ಉದ್ಘಾಟನೆ ಸೆಪ್ಟೆಂಬರ್ 29ರಂದು ಜರುಗಲಿದ್ದು, ಅಕ್ಟೋಬರ್ 8ಕ್ಕೆ ವಿಜಯ ದಶಮಿ ದಿನ ಜಂಬೂಸವಾರಿ ನಡೆಯಲಿದೆ.

Intro:ಮೈಸೂರು: ರಾಜ್ಯ ರಾಜಕೀಯದಲ್ಲಿ ಉಂಟಾದ ದಿಢೀರ್ ಬೆಳವಣಿಗೆಯ ಹಿನ್ನಲೆಯಲ್ಲಿ ಈ ಬಾರಿ ದಸರ ಸಿದ್ದತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಈ ಬಾರಿ ದಸರ ಹೇಗೆ ನಡೆಯುತ್ತದೆ ಎಂಬುದೇ ಈಗ ಚರ್ಚೆಗೆ ಗ್ರಾಸವಾಗಿದೆ.Body:ಈ ಬಾರಿ ದಸರಗೆ ಕೇವಲ ೫೮ ದಿನಗಳು ಬಾಕಿ ಇವೆ. ಆದರೆ ಜೂನ್ ತಿಂಗಳಲ್ಲಿ ದಸರ ಉನ್ನತ ಸಭೆ ನಡೆಯಬೇಕಿತ್ತು. ಆದರೆ ರಾಜಕೀಯ ಗೊಂದಲಗಳು ಹಾಗೂ ಬದಲಾವಣೆಗಳಿಂದ ಇನ್ನೂ ಉನ್ನತ ಮಟ್ಟದ ದಸರ ಸಮಿತಿಯ ಸಭೆ ನಡೆದಿಲ್ಲ. ಜೊತೆಗೆ ದಸರ ಮುನ್ನ ಅರಮನೆಗೆ ೪೫ ದಿನಗಳು ಮುಂಚೆ ಆಗಮಿಸಬೇಕಾಗಿದ್ದ ದಸರ ಆನೆಗಳ ಆಯ್ಕೆಯು ಸಹ ಇನ್ನೂ ನಡೆದಿಲ್ಲ. ಜೊತೆಗೆ ಮುಖ್ಯವಾಗಿ ನೂತನ ಸರ್ಕಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ಖಚಿತವಾಗಿಲ್ಲ, ಎಲ್ಲಕ್ಕಿಂತ ಮಿಗಿಲಾಗಿ ಈ ಬಾರಿ ದಸರ ಅದ್ದೂರಿಯಾಗಿ ನಡೆಯುತ್ತದೊ ಅಥವಾ ಸರಳವಾಗಿ ನಡೆಯುತ್ತದೊ ಎಂಬ ಬಗ್ಗೆ ಖಚಿತವಾಗಿಲ್ಲ, ಯಾವುದೇ ಸಿದ್ದತೆಗಳು ಸಹ ಆರಂಭವಾಗಿಲ್ಲ.
ಇದಕ್ಕೆ ಪ್ರಮುಖ ಕಾರಣ ರಾಜಕೀಯ ಬದಲಾವಣೆಗಳು. ಇದರಿಂದ ದಸರ ಯಾವ ರೀತಿ ನಡೆಯುತ್ತದೆ ಎಂಬುದೇ ಈಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ದಸರಗೆ ರಾಜಕೀಯ ಗ್ರಹಣ:- ಸಮ್ಮಿಶ್ರ ಸರ್ಕಾರದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಿ.ಟಿ.ದೇವೇಗೌಡ ಜೂನ್ ತಿಂಗಳಲ್ಲಿ ದಸರ ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಿದ್ದರು. ಆದರೆ ಆ ನಂತರ ನಡೆಸ ರಾಜಕೀಯ ಬೆಳವಣಿಗೆಗಳಿಂದ ಈಗ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ದಸರ ಉನ್ನತ ಮಟ್ಟದ ಸಭೆ ನಡೆಸಿಲ್ಲ, ಈಗಾಗಲೇ ಒಂದೂವರೆ ತಿಂಗಳು ತಡವಾಗಿದ್ದು ದಸರ ಸಿದ್ದತೆಗಳ ಬಗ್ಗೆ ಇಲ್ಲಿಯವರೆಗೆ ಯಾವುದೇ ಸಭೆಗಳು ಸಹ ನಡೆದಿಲ್ಲ, ಇವೆಲ್ಲದರ ಪರಿಣಾಮ ಈ ಬಾರಿ ದಸರಗೆ ರಾಜಕೀಯ ಗ್ರಹಣದಿಂದ ಸಿದ್ದತೆಗಳಿಗೆ ತಡವಾಗಿದ್ದು, ನೂತನ ಸರ್ಕಾರ ಬೇಗ ಸಭೆ ನಡೆಸಿ ದಸರ ಸಿದ್ದತೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಿ ಎಂದು ನಾಗರಿಕರ ಆಗ್ರಹವಾಗಿದೆ.
ಈ ಬಾರಿ ದಸರ ಉದ್ಘಾಟನೆ ಸೆಪ್ಟೆಂಬರ್ ೨೯ ರಂದು ಜರುಗಲಿದ್ದು, ಅಕ್ಟೋಬರ್ ೦೮ ಕ್ಕೆ ವಿಜಯ ದಶಮಿ ದಿನ ಜಂಬೂಸವಾರಿ ನಡೆಯಲಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.