ETV Bharat / state

ನಾಲ್ವರಿಗೆ ಗುಂಡಿಕ್ಕಿ​​​ ಬಳಿಕ ತಾನೂ ಆತ್ಮಹತ್ಯೆ ಪ್ರಕರಣ.. ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತೀರಾ.!

author img

By

Published : Aug 16, 2019, 3:44 PM IST

ಉದ್ಯಮಿ ಒಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಗುಂಡಿಕ್ಕಿಗೊಂಡು ಆತ್ಮಹತ್ಯೆ ಪ್ರಕರಣಕ್ಕೆ ಸಾಲಬಾಧೆ ಜೊತೆಗೆ ಗಣಿ ಮಾಫಿಯಾ ಕಾರಣ ಇರಬಹುದು ಎಂಬ ಮಾತು ಕೇಳಿಬರುತ್ತಿವೆ. ಸ್ಥಳಕ್ಕೆ ಆಗಮಿಸಿದ ಮೃತ ಓಂ ಪ್ರಕಾಶ್​​ ಅಕ್ಕನಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಮೃತ ಓಂ ಪ್ರಕಾಶ್​​ ಅಕ್ಕನಿಂದ ಪೊಲೀಸರು ಮಾಹಿತಿ

ಮೈಸೂರು: ಉದ್ಯಮಿ ಒಬ್ಬ ತನ್ನ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ತಾನೂ ಗುಂಡಿಕ್ಕಿಗೊಂಡು ಆತ್ಮಹತ್ಯೆ ಪ್ರಕರಣಕ್ಕೆ ಸಾಲಬಾಧೆ ಜೊತೆಗೆ ಗಣಿ ಮಾಫಿಯಾ ಕಾರಣ ಇರಬಹುದು ಎಂಬ ಮಾತು ಕೇಳಿಬರುತ್ತಿವೆ. ಸ್ಥಳಕ್ಕೆ ಆಗಮಿಸಿದ ಮೃತ ಓಂ ಪ್ರಕಾಶ್​​ ಅಕ್ಕನಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು?

ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಉದ್ಯಮಿ ಓಂ ಪ್ರಕಾಶ್, ಡಾಟಾ ಬೇಸ್ ಕಂಪನಿ ನಡೆಸುತ್ತಿದ್ದರು. ಲಾಸ್ ಆದ ನಂತರ ಆ ಕಂಪನಿಯನ್ನು ಮುಚ್ಚಿದ್ದರು. ಜೊತೆಗೆ ರಿಯಲ್ ಎಸ್ಟೇಟ್, ಅನಿಮೇಷನ್‌ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದರು. ಆದರೆ, ಇದೆಲ್ಲದಕ್ಕಿಂತ ಮುಂಚೆ ಬಳ್ಳಾರಿಯಲ್ಲಿ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು, ಮೈನಿಂಗ್ ನಡೆಸಲು ಪರವಾನಗಿ ಪಡೆದಿದ್ದರು. ಅದಿರನ್ನು ವಿದೇಶಗಳಿಗೂ ರಫ್ತು ಮಾಡುತ್ತಿದ್ದರು ಎನ್ನಲಾಗುತ್ತಿದೆ.

ಮೃತ ಓಂ ಪ್ರಕಾಶ್​​ ಅಕ್ಕನಿಂದ ಪೊಲೀಸರು ಮಾಹಿತಿ

ಮೈನಿಂಗ್ ಕಂಪನಿ ಮುಚ್ಚಿದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಓಂ ಪ್ರಕಾಶ್​, ಆದಾಯ ತೆರಿಗೆ ಹಾಗೂ ಇಡಿಯಿಂದ ತನಿಖೆ ಸಹ ಎದುರಿಸುತ್ತಿದ್ದರಂತೆ. ಮೈನಿಂಗ್​ ವ್ಯವಹಾರದಲ್ಲಿ ಈತನಿಗೆ ಭೂಗತ ಲೋಕದಿಂದ ಬೆದರಿಕೆ ಸಹ ಇತ್ತು ಎನ್ನಲಾಗಿದ್ದು, ಅದಕ್ಕಾಗಿ 3 ಜನ ಗನ್​ಮ್ಯಾನ್​ಗಳನ್ನು ಇಟ್ಟುಕೊಂಡಿದ್ದರು.

ಓಂ ಪ್ರಕಾಶ್​​ ಹಿನ್ನೆಲೆ :

ಮೈಸೂರಿಗೆ ಇಂಜಿನಿಯರಿಂಗ್ ವ್ಯಾಸಂಗ ಮಾಡಲು ಬಂದ ಓಂ ಪ್ರಕಾಶ್​, ನಿಖಿತಾ ಅವರನ್ನು ಅಂತರ್ಜಾತಿ ವಿವಾಹವಾಗಿದ್ದರು. ವಿವಾಹದ ವಿಜಯನಗರದ ಬಳಿ ಬಾಡಿಗೆ ಮನೆಯೊಂದನ್ನು ಪಡೆದು ತಂದೆ ತಾಯಿಯರನ್ನು ಕರೆದುಕೊಂಡು ಬಂದಿದ್ದರು.

ನಂತರ ಇಲ್ಲಿ ಡಾಟಾ ಕಂಪನಿ ಸ್ಥಾಪನೆಯ ಜೊತೆ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಸ್ವಂತ ಮನೆಯನ್ನು ದಟ್ಟಗಳ್ಳಿಯಲ್ಲಿ ಖರೀದಿಸಿ ಅಲ್ಲಿಯೇ ವಾಸವಿದ್ದರು. ಮನೆಯ ಸುತ್ತಮುತ್ತ ಯಾರೊಂದಿಗೆ ಮಾತನಾಡುತ್ತಿರಲಿಲ್ಲ. ತಂದೆ ನಾಗರಾಜ್ ಭಟ್ಟಾಚಾರ್ಯ ಜೋತಿಷ್ಯ ಹೇಳುತ್ತಿದ್ದರು. ಈ ಮಧ್ಯೆ ಗಣಿ ವ್ಯವಹಾರದಲ್ಲಿ ಆದಾಯ ತೆರಿಗೆ ಹಾಗೂ ಇತರ ಕಡೆಯಿಂದ ವ್ಯಕ್ತವಾದ ಕಿರುಕುಳದಿಂದ ಮನನೊಂದಿದ್ದರು ಎಂದು ಮೃತ ಓಂ ಪ್ರಕಾಶ್ ಮಾವ ಶಾಂತರಾಮ್ ಈ ಟಿವಿ ಭಾರತ್ ಗೆ ದೂರವಾಣಿ ಮ‌ೂಲಕ ತಿಳಿಸಿದ್ದಾರೆ.

Intro:ಮೈಸೂರು: ೫ ಜನರ ಆತ್ಮಹತ್ಯೆ ಪ್ರಕರಣಕ್ಕೆ ಸಾಲಬಾಧೆ ಜೊತೆಗೆ ಗಣಿ ಮಾಫಿಯಾದ ಮಾತು ಕೇಳಿಬರುತ್ತಿದ್ದು ಈ ಹಿನ್ನಲೆಯಲ್ಲಿ ಪೋಲಿಸರು ತನಿಖೆ ನಡೆಸಬೇಕಾಗಿದೆ.Body:ಇಂದು ಬೆಳಗಿನ ಜಾವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಳಿ ಖಾಸಗಿ ಲಾಡ್ಜ್ ನ ಮುಂಭಾಗದ ನಿರ್ಜನ ಪ್ರದೇಶದಲ್ಲಿ ಮೈಸೂರಿನ ಉದ್ಯಮಿ ಓಂ ಪ್ರಕಾಶ್ ತನ್ನ ೫ ವರ್ಷದ ಮಗ ಆರ್ಯ, ಪತ್ನಿ ನಿಖಿತಾ, ತಂದೆ ನಾಗರಾಜ್ ಭಟ್ಟಾಚಾರ್ಯ, ತಾಯಿ ಹೇಮಾವತಿ ಎಂಬುವರನ್ನು ಗುಂಡಿಕ್ಕಿ ಹತ್ಯೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದ್ದು ಈ ವಿಚಾರದಲ್ಲಿ ಸ್ಥಳಕ್ಕೆ ಬಂದ ಮೃತ ಓಂ ಪ್ರಕಾಶ್ ಅಕ್ಕನಿಂದ ಪೋಲಿಸರು ಮಾಹಿತಿ ಪಡೆಯುತ್ತಿದ್ದಾರೆ.

ಆತ್ಮಹತ್ಯೆಗೆ ಕಾರಣವೇನು: ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಉದ್ಯಮಿ ಓಂ ಪ್ರಕಾಶ್ ಡಾಟಾ ಬೇಸ್ ಕಂಪನಿ ನಡೆಸುತ್ತಿದ್ದು ಲಾಸ್ ಆದ ನಂತರ ಆ ಕಂಪನಿಯನ್ನು ಮುಚ್ಚಿದ್ದ. ಜೊತೆಗೆ ರಿಯಲ್ ಎಸ್ಟೇಟ್, ಅನಿಮೇಷನ್‌ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದ. ಆದರೆ ಇದೆಲ್ಲದಕ್ಕಿಂತ ಮುಂಚೆ ಬಳ್ಳಾರಿಯಲ್ಲಿ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಈತ ಮೈನಿಂಗ್ ನಡೆಸಲು ಪರವಾನಗಿ ಪಡೆದಿದು ವಿದೇಶಗಳಿಗೂ ರಫ್ತು ಮಾಡುತ್ತಿದ್ದ ಎನ್ನಲಾಗುತ್ತಿದೆ.
ಮೈನಿಂಗ್ ಮುಚ್ಚಿದ ನಂತರ ಸಂಕಷ್ಟಕ್ಕೆ ಸಿಲುಕಿದ್ದ ಈತ ತನಗೆ ಈ ವ್ಯವಹಾರದಲ್ಲಿ ನನಗೆ ಸುಮಾರು ೮೦೦ ಕೋಟಿ ಹಣವನ್ನು ಆದಾಯ ತೆರಿಗೆ ಹಾಗೂ ಇಡಿ ಯಿಂದ ತನಿಖೆ ಸಹ ಎದುರಿಸುತ್ತಿದ್ದ ಎನ್ನಲಾಗಿದ್ದು, ಈ ವ್ಯವಹಾರದಲ್ಲಿ ಈತನಿಗೆ ಭೂಗತ ಲೋಕದಿಂದ ಬೆದರಿಕೆ ಸಹ ಇತ್ತು ಎನ್ನಲಾಗಿದ್ದು ಅದಕ್ಕಾಗಿ ನಾಲ್ಕು ಜನ ಬಾಡಿಗಾರ್ಡ್ ಗಳನ್ನು ಸಹ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಈತನ ಹಿನ್ನಲೆ:- ಮೂಲತಃ ಮೈಸೂರಿಗೆ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಬಂದ ಈತ ಇಲ್ಲಿಯ ಹುಡುಗಿಯನ್ನು ಅಂತರ್ಜಾತಿ ವಿವಾಹವಾಗಿದ್ದ ಈತ ವಿವಾಹದ ವಿಜಯನಗರದ ಬಳಿ ಬಾಡಿಗೆ ಮನೆಯೊಂದನ್ನು ಪಡೆದು ತನ್ನ ತಂದೆ ತಾಯಿಗಳನ್ನು ಕರೆದುಕೊಂಡು ಬಂದಿದ್ದನು.
ನಂತರ ಇಲ್ಲಿ ಡಾಟಾ ಕಂಪನಿಯ ಕೆಲಸದ ಸ್ಥಾಪನೆಯ ಜೊತೆ ರಿಯಲ್ ಎಸ್ಟೇಟ್ ಉದ್ಯಮ ಹಾಗೂ ಮೈನಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಈತ ನಂತರ ಸ್ವಂತ ಮನೆಯನ್ನು ದಟ್ಟಗಳ್ಳಿಯಲ್ಲಿ ಖರೀದಿಸಿ ಅಲ್ಲಿಯೇ ವಾಸವಿದ್ದರು. ಆತ ಮನೆಯ ಸುತ್ತ ಮುತ್ತ ಯಾರೊಂದಿಗೆ ಮಾತನಾಡುತ್ತಿರಲಿಲ್ಲ ಈತನ ತಂದೆ ನಾಗರಾಜ್ ಭಟ್ಟಾಚಾರ್ಯ ಜೋತಿಷ್ಯ ಹೇಳುತ್ತಿದ್ದ ಎನ್ನಲಾಗಿದ್ದು ಅವರನ್ನು ಅದರಿಂದ ಬಿಡಿಸಿದ್ದನು.‌ ಈ ಮಧ್ಯೆ ಗಣಿ ವ್ಯವಹಾರದಲ್ಲಿ ಆದಾಯ ತೆರಿಗೆ ಹಾಗೂ ಇತರ ಕಡೆಯಿಂದ ಕಿರುಕುಳದಿಂದ ಮನನೊಂದಿದ್ದ ಎಂದು ಮೃತ ಓಂ ಪ್ರಕಾಶ್ ಮಾವ ಶಾಂತರಾಮ್ ಈ ಟಿವಿ ಭಾರತ್ ಗೆ ದೂರವಾಣಿ ಮ‌ೂಲಕ ತಿಳಿಸಿದ್ದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಉ ಎಂದು ಆಗ್ರಹಿಸಿದರು. ಒಟ್ಟಾರೆ ಈ ಆತ್ಮಹತ್ಯೆ ಪ್ರಕರಣಕ್ಕೆ ವ್ಯವಹಾರ ನಷ್ಟ, ಭೂಗತ ಪಾತಕಿಗಳ ಬೆದರಿಕೆ ಅಥವಾ ಇನ್ನಿತರ ಕಾರಣಗಳು ಏನು ಎಂಬುದನ್ನು ತನಿಖೆಯಿಂದ ಮಾತ್ರ ತಿಳಿಯಬಹುದಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.