ETV Bharat / state

ಮೈಸೂರಿನಲ್ಲಿ ಲಸಿಕೆ ಪಡೆದ ನಂತರ ವ್ಯಕ್ತಿ ಸಾವು ಆರೋಪ.. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಹೀಗಂತಾರೆ..

'ಮೃತ ವ್ಯಕ್ತಿ ಮದ್ಯಪಾನ ಹಾಗೂ ಸಿಗರೇಟ್ ಸೇದುತ್ತಿರಲಿಲ್ಲ. ಆದರೆ, ಹೈಬಿಪಿ ಇತ್ತು. ಆಗಾಗ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ. ಅದನ್ನು ಪರಿಶೀಲಿಸಬೇಕಾಗಿದೆ. ಲಸಿಕೆಯಿಂದ ಆಗಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ವೈದ್ಯರು ಹೇಳಬೇಕು. ಡಿಹೆಚ್​ಒ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ಅವರಿಗೆ ತಿಳಿಸಿದ್ದೇವೆ. ಅವರು ಪರಿಶೀಲನೆ ನಡೆಸಿ, ವರದಿ ನೀಡಲಿದ್ದಾರೆ..

DC Dr. Bagadi Gautam
ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್
author img

By

Published : Nov 15, 2021, 4:09 PM IST

ಮೈಸೂರು : ಕೊರೊನಾ ಲಸಿಕೆ ಪಡೆದ ನಂತರ ತೀವ್ರ ಅಸ್ವಸ್ಥಗೊಂಡಿದ್ದ ಅಶೋಕಪುರಂ ವ್ಯಕ್ತಿ ಮೃತ (Vaccinated man died)ಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಮಗೆ ನ್ಯಾಯ ಕೊಡಿಸಿ ಎಂದು ಒತ್ತಾಯಿಸಿ ಮೃತ ವ್ಯಕ್ತಿಯ ಕುಟುಂಬಸ್ಥರು ನಗರದಲ್ಲಿ ಹೋರಾಟ ನಡೆಸಿದ್ದಾರೆ. ಹೀಗಾಗಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ (DC Dr. Bagadi Gautam) ಭೇಟಿ ನೀಡಿ, ಮನವಿ ಸ್ವೀಕರಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಮಾತನಾಡಿದರು

ಅಶೋಕಪುರಂನ ನಿವಾಸಿ ಸುರೇಶ್ (39) ಎಂಬಾತ ಮೃತ ವ್ಯಕ್ತಿ. ಲಸಿಕೆ ಪಡೆದ ನಂತರ ಅಸ್ವಸ್ಥರಾಗಿ ಭಾನುವಾರ ಮೃತಪಟ್ಟಿದ್ದರು ಎನ್ನಲಾಗಿದೆ. ಇದೀಗ ಮೃತ ವ್ಯಕ್ತಿಗೆ ಯಾವುದೇ ಕಾಯಿಲೆ ಇರಲಿಲ್ಲ, ಆರೋಗ್ಯವಾಗಿದ್ದರು. ವೈದ್ಯರು ಕಟ್ಟುಕತೆ ಹೇಳುತ್ತಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಪ್ರತಿಕ್ರಿಯಿಸಿದ್ದಾರೆ. 'ಮೃತ ವ್ಯಕ್ತಿ ಮದ್ಯಪಾನ ಹಾಗೂ ಸಿಗರೇಟ್ ಸೇದುತ್ತಿರಲಿಲ್ಲ. ಆದರೆ, ಹೈಬಿಪಿ ಇತ್ತು. ಆಗಾಗ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಎಂದು ವೈದ್ಯರು ಹೇಳಿದ್ದಾರೆ. ಅದನ್ನು ಪರಿಶೀಲಿಸಬೇಕಾಗಿದೆ.

ಲಸಿಕೆಯಿಂದ ಆಗಿದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ವೈದ್ಯರು ಹೇಳಬೇಕು. ಡಿಹೆಚ್​ಒ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ಅವರಿಗೆ ತಿಳಿಸಿದ್ದೇವೆ. ಅವರು ಪರಿಶೀಲನೆ ನಡೆಸಿ, ವರದಿ ನೀಡಲಿದ್ದಾರೆ' ಎಂದು ಹೇಳಿದರು.

suresh
ಸುರೇಶ್ (39)

ರೋಗಿಗೆ ಆರೋಗ್ಯ ಹದಗೆಟ್ಟ ತಕ್ಷಣವೇ ಕೆ. ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಉಳಿದಂತೆ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ.

ಕುಟುಂಬಕ್ಕೆ ಅವನೇ ಅಧಾರವಾಗಿದ್ದ. ಮುಖ್ಯಮಂತ್ರಿಗಳು ಏನಾದರೂ ಪರಿಹಾರ ನೀಡಬಹುದಾ? ಎಂದು ನೋಡಬೇಕಿದೆ. ಮಾನವೀಯತೆ ದೃಷ್ಟಿಯಿಂದ, ಸಹಾನುಭೂತಿಯಿಂದ ಪರಿಗಣಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ಘಟನೆ ಹಿನ್ನೆಲೆ : ಅಶೋಕಪುರಂ ನಿವಾಸಿ ಸುರೇಶ್ ಶುಕ್ರವಾರ ಕೋವಿಡ್ ಲಸಿಕೆ ಪಡೆದಿದ್ದರು. ಕೆಲವೇ ಕ್ಷಣಗಳಲ್ಲಿ ಅವರ ಮೂಗಿನಿಂದ ರಕ್ತಸ್ರಾವವಾಗಿದೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಮೆದುಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಭಾನುವಾರ ರೋಗಿ ಮೃತಪಟ್ಟಿದ್ದಾನೆ.

ಮೃತ ವ್ಯಕ್ತಿಗೆ ಹೃದಯ ಸಂಬಂಧಿ ಖಾಯಿಲೆ ಇತ್ತು. 220/120 ಪ್ರಮಾಣದಲ್ಲಿ ರಕ್ತದೊತ್ತಡ ಇತ್ತು. ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಲಸಿಕೆ ಪಡೆದ ನಂತರ ಈ ರೀತಿ ಆಗಿದೆ ಎಂಬುದಕ್ಕೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಓದಿ: ಮೇಕೆದಾಟು ವಿವಾದ ಆದಷ್ಟು ಬೇಗ ಬಗೆಹರಿಯುತ್ತದೆ: ಬೊಮ್ಮಾಯಿ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.